ಇಂದಿನ ತಿಂಡಿ ಅವಲಕ್ಕಿ ಒಗ್ಗರಣೆ! ಸಾಮಾಗ್ರಿಗಳು ಇದ್ದರೆ 15 ನಿಮಿಷದ ಕೆಲಸ ಅಷ್ಟೇ ;). ನಾನು ತಯಾರಿಸುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ. ಮಹಾರಾಷ್ಟ್ರದಲ್ಲಿ ಇದನ್ನು ವಿಭಿನ್ನ ರೀತಿಯಲ್ಲಿ ತಯಾರಿಸುತ್ತಾರೆ.
ಬೇಕಾಗುವ ಸಾಮಾಗ್ರಿಗಳು:
1) ದಪ್ಪ ಅವಲಕ್ಕಿ - 3/4 ಲೋಟೆ
2) ಒಗ್ಗರಣೆ ಸಾಮಾಗ್ರಿಗಳು (ಎಣ್ಣೆ, ಸಾಸಿವೆ, ಕಡಲೆ ಬೇಳೆ, ಶೇಂಗಾ, ಘಾಟಿ ಮೆಣಸು, ಕರಿಬೇವು ಸೊಪ್ಪು)
3) ಹುಣಸೆ ಹಣ್ಣಿನ ನೀರು
4) ಸ್ವಲ್ಪ ಬೆಲ್ಲ
5) ಸ್ವಲ್ಪ ತುರಿದ ತೆಂಗಿನಕಾಯಿ
ಮೊದಲು ದಪ್ಪ ಅವಲಕ್ಕಿಯನ್ನು ತೊಳೆದು 5 ನಿಮಿಷ ನೆನೆಯಲು ಬಿಡಿ. ನಂತರ ನೀರನ್ನು ಚೆಲ್ಲಿ ಸೋಸಲು ಇಡಿ (ಒಣಗಲಿಕ್ಕಾಗಿ). ಇದೆ ಸಮಯದಲ್ಲಿ ಬಾಣಲಿಯಲ್ಲಿ ಒಗ್ಗರಣೆಗೆ ಇಡಿ. ತುಪ್ಪದ ಒಗ್ಗರಣೆಯಾದರೆ ರುಚಿ ವೃದ್ಧಿಸುವುದು. ಸಾಸಿವೆ, ಕಡಲೆ ಬೇಳೆ, ಶೇಂಗಾ, ಮೆಣಸು, ಕರಿಬೇವು ಸೊಪ್ಪು ಸರಿಯಾದ ಸಮಯಕ್ಕೆ ಒಗ್ಗರಣೆಗೆ ಹಾಕಿ ಬೇಕಾದಷ್ಟು ಫ್ರೈ ಮಾಡಿ. ತದನಂತರ ಹುಣಸೆ ಹಣ್ಣಿನ ನೀರನ್ನು ಒಗ್ಗರಣೆಗೆ ಹಾಕಿ. ನೀರನ್ನು ಬಿಸಿ ಒಗ್ಗರಣೆಗೆ ಹಾಕುವುದರಿಂದ ಸ್ವಲ್ಪ ಮೆಲ್ಲನೆ ಜಾಗರೂಕತೆಯಿಂದ ಹಾಕಿ. ನೀರಿನ ಮಿಶ್ರಣಕ್ಕೆ ತುಂಡು ಬೆಲ್ಲ ಸೇರಿಸಿ. ಕಡೆಗೆ ಸ್ವಲ್ಪ ಉಪ್ಪು ಹಾಗು ಚಿಟಿಕೆ ಅರಿಶಿನ ಪುಡಿ ಸೇರಿಸಿ ಕುದಿಯಲು ಬಿಡಿ. ಸಿಮ್ಮಿನಲ್ಲಿ ಕುದಿಸಿ. ನೀರಿನ ರುಚಿಯನ್ನು ಗಮನಿಸಿ ಬೇಕಾದನ್ನು ಹಾಕಿ. ನೀರು ದಪ್ಪ ದ್ರವವಾಗುವವರೆಗೆ ಕುದಿಸಿ . ತದನಂತರ ಸೋಸಿದ ಅವಲಕ್ಕಿಯನ್ನು ಬಾಣಲಿಗೆ ಸುರಿದು ಮಿಶ್ರಣವನ್ನು ಚೆನ್ನಾಗಿ ಕಲಸಿ. ನೀರು ಆವಿಯಾದ ಮೇಲೆ ಗ್ಯಾಸ್ ಬಂದು ಮಾಡಿ. ನಂತರ ಇದಕ್ಕೆ ಸ್ವಲ್ಪ ತುರಿದ ತೆಂಗಿನಕಾಯಿ ಸೇರಿಸಿದರೆ ರುಚಿಯಾದ ತಿಂಡಿ ತಯಾರು :-).
ಅವಲಕ್ಕಿ ಒಗ್ಗರಣೆಯನ್ನು ಚಿಪ್ಸ್ ಅಥವಾ ಮಿಕ್ಷರ್ ಜೊತೆ ತಿನ್ನಬಹುದು. ಕಡೆಗೆ ಸ್ವಲ್ಪ ಮೊಸರಿನ ಜೊತೆ ತಿನ್ನಿ. ಇದಕ್ಕೆ ಪೇಪರ್ ಅವಲಕ್ಕಿ ಕೂಡ ಉಪಯೋಗಿಸಬಹುದು. ಇದನ್ನು ಉಪಯೋಗಿಸಲು ಸ್ವಲ್ಪ ಅಭ್ಯಾಸ ಇರಬೇಕು. ಇಲ್ಲವಾದಲ್ಲಿ ಮುದ್ದೆಯಾಗಿಬಿಡುತ್ತದೆ. ಯಾಕೆಂದರೆ ಪೇಪರ್ ಅವಲಕ್ಕಿಯನ್ನು ನೀರಿನಲ್ಲಿ ತೊಳೆದ ತಕ್ಷಣವೇ ಉಪಯೋಗಿಸಬೇಕು, ನೆನೆಸಿಡಬಾರದು.ಈ ತಿಂಡಿಗೆ ಕೆಲವರು ಈರುಳ್ಳಿ ಮತ್ತು ಬಟಾಟೆಯಯನ್ನು ಕೂಡ ಉಪಯೋಗಿಸುತ್ತಾರೆ.
ಚಿತ್ರ: ನಾನು ಮಾಡಿದ ತಿಂಡಿ :-)
ಬೇಕಾಗುವ ಸಾಮಾಗ್ರಿಗಳು:
1) ದಪ್ಪ ಅವಲಕ್ಕಿ - 3/4 ಲೋಟೆ
2) ಒಗ್ಗರಣೆ ಸಾಮಾಗ್ರಿಗಳು (ಎಣ್ಣೆ, ಸಾಸಿವೆ, ಕಡಲೆ ಬೇಳೆ, ಶೇಂಗಾ, ಘಾಟಿ ಮೆಣಸು, ಕರಿಬೇವು ಸೊಪ್ಪು)
3) ಹುಣಸೆ ಹಣ್ಣಿನ ನೀರು
4) ಸ್ವಲ್ಪ ಬೆಲ್ಲ
5) ಸ್ವಲ್ಪ ತುರಿದ ತೆಂಗಿನಕಾಯಿ
ಅವಲಕ್ಕಿ ಒಗ್ಗರಣೆ |
ಅವಲಕ್ಕಿ ಒಗ್ಗರಣೆಯನ್ನು ಚಿಪ್ಸ್ ಅಥವಾ ಮಿಕ್ಷರ್ ಜೊತೆ ತಿನ್ನಬಹುದು. ಕಡೆಗೆ ಸ್ವಲ್ಪ ಮೊಸರಿನ ಜೊತೆ ತಿನ್ನಿ. ಇದಕ್ಕೆ ಪೇಪರ್ ಅವಲಕ್ಕಿ ಕೂಡ ಉಪಯೋಗಿಸಬಹುದು. ಇದನ್ನು ಉಪಯೋಗಿಸಲು ಸ್ವಲ್ಪ ಅಭ್ಯಾಸ ಇರಬೇಕು. ಇಲ್ಲವಾದಲ್ಲಿ ಮುದ್ದೆಯಾಗಿಬಿಡುತ್ತದೆ. ಯಾಕೆಂದರೆ ಪೇಪರ್ ಅವಲಕ್ಕಿಯನ್ನು ನೀರಿನಲ್ಲಿ ತೊಳೆದ ತಕ್ಷಣವೇ ಉಪಯೋಗಿಸಬೇಕು, ನೆನೆಸಿಡಬಾರದು.ಈ ತಿಂಡಿಗೆ ಕೆಲವರು ಈರುಳ್ಳಿ ಮತ್ತು ಬಟಾಟೆಯಯನ್ನು ಕೂಡ ಉಪಯೋಗಿಸುತ್ತಾರೆ.
ಚಿತ್ರ: ನಾನು ಮಾಡಿದ ತಿಂಡಿ :-)
No comments:
Post a Comment