Pages

Sunday, November 22, 2015

ಬ್ಯಾಕೆಂಡ್-೧೦

[ತನ್ನ ಅರೀವೆ ತನಗೇ ಗುರು]


ಭೋ ದೊಡ್ ಮಾತಾಡವ್ರೆ ಕಣಣ್ಣ ಈ ಮಹನೀಯರು. ನಿಮ್ಗೆಷ್ಟು ತಿಳಿತೈತೋ ಅಷ್ಟು ಒಳ್ಳೆದು ಅಂತ ಯೋಳ್ತವ್ರೆ ಅನ್ಸುತ್ತೆ. ಅತ್ವಾ ನಿನ್ನ ನೀನು ತಿಳ್ಕೊಂಡ್ರೆ ನೀನೆ ನಿಂಗೆ ಗುರು ಆಯ್ತಿಯಾ ಅಂತ ಯೋಳ್ತಿರ್ಬಹುದು. ಇವ್ರಿಗೆ ಇನ್ನು ಅರಿವಾಗೋದು ಭಾಳ ಇರೋ ತರ ಕಾಣಸ್ತೈತೆ. ಅದಿಕ್ಕೆ "ಅರೀವೆ" ಪದದಲ್ಲಿ ಧೀರ್ಘ ಉಲ್ಟಾ ಆಗೈತೆ. "ತನಗೇ" ಪದದಲ್ಲಿರೋ ದೀರ್ಘ ನೋಡಿದ್ರೆ ಮ್ಯಾಟರ್ ತುಂಬಾ ಸೀರಿಯಸ್ ಇರೋ ತರ ಅನ್ಸುತ್ತೇ? ಅನುಭವಾನ ತುಂಬಾ ಒತ್ತಿ ಯೋಳಕ್ಕೆ ಹಿಂಗೆ ಬರ್ದಿರ್ಬಹುದೇನೋ.

ಅಂದಂಗೆ ನನ್ಗು ಯೇನು ತಿಳಿಯಕ್ಕಿಲ್ಲ ಕಣಣ್ಣ; ಸುಮ್ನೆ ಕಾಮೆಡಿಗೆ ಹಾಕಿರೋದು!

ಇಲ್ಲೇ ಪಕ್ಕ ಮಾರ್ತಳ್ಳಿನಾಗೆ ನಮ್ ಹೆಂಡ್ರು ಫೋಟೋ ಹೊಡ್ದಾಗ ಅರಿವಾಗಿದ್ದು!

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

No comments:

Post a Comment