Pages

Thursday, November 26, 2015

ಬ್ಯಾಕೆಂಡ್ - ೧೨

[ಸವಿ ನೆನಪು; ವೀರ ಯೋಧ; ಮೇಜರ್ ಸಂದೀಪ್ ಉನ್ನಿ ಕೃಷ್ಣನ್]


ಇದಪ್ಪಾ ತಲೆಬರಹ ಅಂದ್ರೆ. ನಮ್ಮ ದೇಶವನ್ನು ಕಾಯೋ ಸೇನಾನಿಗಳಿಗೆ ರೆಸ್ಪೆಕ್ಟ್ ಕೋಡೋದು ಅಲ್ಲದೆ, ಹಿಂದಿನ ವಾಹನದವರಿಗೂ ಸದಾಕಾಲ ನೆನಪಿಸುವ ಮಹತ್ಕಾರ್ಯ ಇವರದ್ದು. ನಮಗೆ ಬಂದೂಕು ಹಿಡಿಯೋ ತಾಕತ್ ಇಲ್ಲಾಂದ್ರು ನಮ್ಮ ದೇಶದ ವೀರ ಯೋಧರಿಗೆ ಸಲ್ಯೂಟ್ ಹೊಡೆದು ಗೌರವ ಸೂಚಿಸೋಣ.

ಅರಚಿತ್ತುರಿವ ಹಾಟ್ ಟ್ರಾಫಿಕ್ ಮಧ್ಯೆ ನಿಮ್ಮ ಕಷ್ಟವೇ ದೊಡ್ಡದೆನಿಸಿದರೆ, ಇಂತಹ ಬರಹಗಳನ್ನು ನೋಡಿದರೆ ಬಹಳ ಒಳ್ಳೆಯದು. ಕೊರೆಯುತ್ತಿರುವ ಚಳಿಯಲ್ಲಿ ನಮ್ಮ ಗಡಿಗಳನ್ನು ಕಾಯುತ್ತಿರುವ ಯೋಧರನ್ನು ನೆನೆಸಿಕೊಂಡರೆ ನಮ್ಮ ಸಮಸ್ಯೆಗಳು ತೃಣ ಸಮಾನವೆನಿಸುತ್ತದೆ. ಏನ್ ನೋಡ್ತಾ ಇದೀರಾ? ಬಿಸಿಲಿನ ಝಳಕ್ಕೆ ಬರಹ ಕಾಣುತ್ತಿಲ್ಲವೇ? ಸತ್ಯ ಹೇಳುತ್ತಿದ್ದೇನೆ ಮಾರಾಯ್ರೆ, ತಪ್ಪದೆ ಸಲ್ಯೂಟ್ ಹೊಡೆಯಿರಿ!

ಇಲ್ಲೆ ಪಕ್ಕ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಸಲ್ಯೂಟ್ ಹೊಡೆದು [ಮೇಜರ್ ಸಾಹೇಬರಿಗೆ, ವೀರ ಯೋಧರಿಗೆ ಮತ್ತು ರಿಕ್ಷಾ ಸಾರಥಿಯವರಿಗೆ] ಕ್ಲಿಕ್ಕಿಸಿದ್ದು.

ಜೈ ಹಿಂದ್!

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

No comments:

Post a Comment