Pages

Wednesday, December 2, 2015

ಬ್ಯಾಕೆಂಡ್-೧೪

[ಕಾದಿರುವೆ ನಿನಗಾಗಿ]

ಅಯ್ಯಯ್ಯಪ್ಪ!! ಯಾಕೋ ನಿಮ್ ಗಾಡಿ ಹತ್ತಕ್ಕೆ ಟೆನ್ಸನ್ ಆಯ್ತದೆ ಕಣಣ್ಣ. ಯೇನಾರ ಫಿಟ್ಟಿಂಗ್ ಇಟ್ಟಿದ್ದೀರಾ ಹೆಂಗೆ? ನಂಗೋಸ್ಕರ ಕಾದಿದಿರ ಅಂದ್ರೆ ಏನೋ ಕಾದಿದೆ ಅಂತ ಅರ್ಥ ಅಲ್ವಾ? ಇದನ್ನ ನೋಡಿದ್ಮೇಲೆ ನಿಮ್ ಗಾಡಿ ಮಾತ್ರ ಹತ್ತಲ್ಲ ಕಣಣ್ಣೋ!! ಅದು ಬೇರೆ ಈ ಹಾಟ್ ಟ್ರಾಫಿಕ್ ಮಧ್ಯೆ ಹಾಟ್ ಸೂರ್ಯನಿಂದಾಗಿ ನೀವು ಮತ್ತು ನಿಮ್ ಗಾಡಿ ಸಿಕ್ಕಾಪಟ್ಟೆ ಕಾದಿರೋತರ ಅನ್ನಿಸ್ತಾ ಇದೆ. ಈ ಸ್ಥಿತಿಯಲ್ಲಿ ನಿಮ್ ಗಾಡಿಗೆ ಎಂಟ್ರಿ ಕೊಟ್ರೆ ಭಸ್ಮ ಆಗೋದು ಗ್ಯಾರಂಟಿ. ಬೇಡ ಕಣಣ್ಣ ನಿಮ್ ಸಹವಾಸ. ಬರ್ತೀನಿ. ಕಾಪಾಡಯ್ಯ ಕಾರಿನಲ್ಲಿ ವಿರಾಜಮಾನರಾಗಿರುವ ಗಣಪಯ್ಯ.


ಹೆಬ್ಬಾಳ ಮೇಲ್ಸೇತುವೆ ಕೆಳಗಡೆ, ರೆಡ್ ಸಿಗ್ನಲ್ ಇಂದ ಗ್ರೀನ್ ಸಿಗ್ನಲ್ ಬರಕ್ಕೆ ಕಾದಿರುವಾಗ ಕ್ಲಿಕ್ ಮಾಡಿದ್ದು.


ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

No comments:

Post a Comment