Pages

Monday, June 24, 2019

ಬ್ಯಾಕೆಂಡ್ - ೨೧

ಬಹಳ ದಿನದ ಬಳಿಕ ಮತ್ತೊಮ್ಮೆ ಬ್ಯಾಕೆಂಡ್ ಸರಣಿಗೆ ಸ್ವಾಗತ, ಸುಸ್ವಾಗತ!



[If u luv truly.... U will die daily...!]

ಕನ್ನಡಿಗರಿಗಾಗಿ

ನೀವು ತೋರಿದರೆ ನಿಷ್ಕಲ್ಮಶವಾದ ಪ್ರೀತಿ
ಕಾದಿದೆ ನಿಮಗಾಗಿ ಪ್ರತಿದಿನ ಫಜೀತಿ

ತುಂಬಾ ಅನುಭವಗಳನ್ನು ಕಂಡವರು ಅಂದರೂ ತಪ್ಪಾಗದು. ಲೌವ್ ನಲ್ಲಿ ಎಡವಿ ಎಡವಿ ಮೇಲೆ ಬಂದಿರಬೇಕು. ಇತ್ತೀಚಿನ ಜೆನರೇಶನ್ ಹುಡುಗರಿಗೆ ಪ್ರೀತಿ ಥೀಮ್ ಮಾತ್ರ ಕಾಣೋದು ಏನಕ್ಕೆ ಅಂತಾನೆ ಗೊತ್ತಾಗ್ತಿಲ್ಲ. ಈಗೀಗ ಸ್ವಲ್ಪ ಸ್ವಲ್ಪ ನಾನು ಕನ್ನಡ ಚಿತ್ರ ನೋಡ್ತಿವ್ನಿ. ಅದು ನೋಡೋದು ೩೦ ನಿಮಿಷ ಮಾತ್ರ ಅನ್ನಿ, ನಂತರ ಬೋರ್ ಹೊಡಿಯುತ್ತೆ. ವಿಷಯ ಅದಲ್ಲ, ಬದಲಾಗಿ ಎಲ್ಲಾ ಮೂವಿನೂ ಒಂದೆ ದಾರಿಯಲ್ಲಿ ಕಥೆ ಎಳಿತಾರೆ. ಹೀರೋ ಎಂಟ್ರಿ, ಹಿರೋಯಿನ್ ಎಂಟ್ರಿ, ಹೀರೋ ಬೊಂಬಾಟ್ ಜಾಬ್ ಅದಿಕ್ಕೆ ಹಿರೋಯಿನ್ ಇನ್ಸ್ಪೈರ್ ಆಗೋದು, ಹಿರೋನ ಬಲೆ ಹಾಕೋಕೆ ಹಿರೋಯಿನ್ ಹಿಂದೆ ಬೀಳೋದು (ನಿಜವಾಗ್ಲೂ ಹುಡುಗಿರು ಹಿಂದೆ ಬೀಳ್ತಾರಾ??!!), ಮತ್ತೆ ಲವ್, ಫೈಟ್, ಮತ್ತೆ ಲವ್, ಮದುವೆ. ಒಂತರ ಮೊನೊಟೋನಸ್ ಕಥೆಗಳೇ ಹೆಚ್ಚು. ಹಾಡು ಬಂದಾಗ ಫಾರ್ವರ್ಡ್ ಮಾಡಕ್ಕೂ ಅವಕಾಶ ಇಲ್ಲ :(.

ಬ್ಯಾಕ್ ಟು ಅವರ್ ಕವರ್ ಸ್ಟೋರಿ. ಎಲ್ಲಾ ಚಲನಚಿತ್ರಗಳಲ್ಲೂ ಇದೇ ಥೀಮ್ ಇರೋದಿಂದ್ರ, ಪಾಪ ಇವ್ನಿಗೂ ಅದೇ ಹುಚ್ಚು ಹಿಡಿದಿರಬಹುದು. ವಾಸ್ತವ ಜೀವನ ಬೇರೆನೇ ಅಂತ ತೋರ್ಸೋ ಚಿತ್ರ ಯಾವಾಗ ಬರೊತ್ತೋ. ನಮ್ಮ ಜನ ಕೂಡಾ ಫ್ಯಾನ್ಸಿ ಜೀವನದಲ್ಲೇ ಕಾಲ ಕಳಿತಾರೆ. ಸಿನಿಮಾ ಅನ್ನೋದು ಒಂತರಾ "ಉಟೋಪಿಯ" ಅಂದ್ರೆ ಎಲ್ಲವೂ ಅಂದುಕೊಂಡಂತೆ ನಡಿಯುತ್ತೆ. ಆದರೆ ನಿಜ ಜೀವನ ಹಾಗಲ್ವೇ!! ಈ ಮಹಾನುಭಾವರು ಅದನ್ನೇ ನಿಜ ಜೀವನದಲ್ಲಿ ಎಕ್ಸ್-ಪೆಕ್ಟ್ ಮಾಡಿ ಸಿಕ್ಕ ಹುಡುಗೀರೆಲ್ಲಾ ಈಗ ಎಕ್ಸ್ ಆಗಿರಬೇಕು. ಕೊನೆಗೆ ನಿರಾಶರಾಗಿ ಡೈಲಾಗ್ ಬರ್ಸಿದಾರೋ ಏನೋ?
ಕೆಳಗೆ ಬಿದ್ದಿರೋ ಹಗ್ಗ ನೋಡಿದ್ರೆ ಹೆದ್ರಿಕೆ ಆಗುತ್ತೆ ಕಣಣ್ಣೋ. ಏನಾರ ಮಾಡ್ಕೋಬಿಟ್ಟಿರೋ ಶಿವ್ನೆ, ಶಾಂತಂ ಪಾಪಂ

ಲೌವ್ ಇಂದ ಸಾಯೋದಾ ಏನೋ ಗೊತ್ತಿಲ್ಲಾ ಆದರೆ ಲೌವ್ ಚಲನಚಿತ್ರ ನೋಡಿದ್ರೆ ನಿದ್ದೆ ಬರೋದಂತು ಗ್ಯಾರಂಟಿ. ಬಹುಶಃ ನನ್ನ ಬರಹ ಓದಿ ಕೂಡಾ ನಿದ್ದೆ ಬರಬಹುದೇನೋ ಕೆಲವರಿಗೆ :-)

No comments:

Post a Comment