Pages

Friday, December 6, 2019

ಬ್ಯಾಕೆಂಡ್ - ೨೭

"ಗೆದ್ದೇ ಗೆಲ್ಲುವೇ ಒಂದು ದಿನ ಗಲ್ಲಲೇ ಬೇಕು ಒಳ್ಳೇತನ"




ತುಂಬಾ ಉತ್ಸಾಹದಿಂದ ಬರೆಯಲಿಕ್ಕೆ ಹೋಗಿ ಒಳ್ಳೇತನವನ್ನೇ ಗಲ್ಲಿಗೆ ಏರಿಸಿಬಿಟ್ರಲ್ಲಿ ಇವ್ರು. ಒಳ್ಳೇತನ ಗಲ್ಲಿನಲ್ಲಿ ಇರಬೇಕು ಅಂತಾರೆ ಇವ್ರು. ಒಂದು ದಿನ ಗೆದ್ದೇ ಗೆಲ್ತೀವಿ ಅದೂ ಕೂಡ ಒಳ್ಳೆತನನ ಗಲ್ಲಿಗೇರಿಸಿ ಅನ್ನೋ ಅರ್ಥ ಅಲ್ಲಾ ತಾನೆ. ಯಾಕಂದ್ರೆ ನಿಮ್ಮ ಗಾಡಿಯಲ್ಲಿ ಬಿಸಿನೆಸ್ ಮಾಡೋಕೆ ಸ್ವಲ್ಪ ಕೇರ್ಫುಲ್ ಆಗಿರ್ಬೇಕು. ಗೆಲ್ಲಕ್ಕೋಸ್ಕರ ಒಳ್ಳೇತನನ್ನ ಬಲಿ ಕೊಡೋಕ್ಕೆ ಹೋಗ್ತಿರಾ ಅನ್ನೋ ಭಯ.

ಕಾಗುಣಿತ ತಪ್ಪಾಗೈತೆ ಅಂತ ನಂಗೂ ಗೊತೈತಿ.  ಅದರ ಜೊತೆ ನಮ್ಮ ಕನ್ನಡ ಭಾಷೆಯನ್ನೂ ನೇಣಿಗೆ ಏರಿಸಿಬಿಟ್ರು. ಸುಮಾರು ನಾಲ್ಕು ವರ್ಷದ ಹಿಂದಿನ ಚಿತ್ರ. ಶನಿವಾರ ಆಫೀಸ್ ಮುಗಿಸಿಕೊಂಡು ಬರೋವಾಗ ತೆಗ್ದಿದ್ದು. ಕಾವೇರಿ ಗಲಾಟೆಯಿಂದಾಗಿ ಶನಿವಾರ ಕೂಡ ಕೆಲಸ ಮಾಡಬೇಕೂಂತ ಕಂಪನಿಯವ್ರು ಹೇಳಿದ್ರು. ಜನರೂ ಹಾಗೆ ನೋಡಿ, ಮರಗಳನ್ನು ನೇಣಿಗೇರಿಸಿ ಜೊತೆಗೆ ಮಳೆರಾಯನನ್ನೇ ಸಮಾಧಿ ಮಾಡುತ್ತಿದ್ದಾರೆ. ಸುಮಾರು ಎರಡು ವರ್ಷದಿಂದ ಒಳ್ಳೆಯ ಮಳೆ ಬೀಳುತ್ತಿದೆ ಅನ್ನೋದು ಸಂತೋಷದ ವಿಷಯ. ಆದರೆ ಭೀಕರ ಮಳೆಯು ಮಾನವಕುಲಕ್ಕೆ ಎಚ್ಚರಿಕೆ ನೀಡಲು ಬಂದಿದೆ ಅನ್ನೋದು ಮರೆಯುವಂತಿಲ್ಲ.

ಮುಗಿಸುವ ಮುನ್ನ, ಇವರ ಹೋಪ್ ಆಂಡ್ ಉತ್ಸಾಹಕ್ಕೆ ಸಲ್ಯೂಟ್ ಕಣ್ರಿ. ಹಾಗೆ ಜಾಸ್ತಿ ಕುಯ್ಯೋದು ಬೇಡ ಅಂತಾ ಬರಹ ಕೂಡಾ ಕಡಿಮೆ ಹಾಕಿದ್ದೇನೆ.

No comments:

Post a Comment