Pages

Wednesday, April 26, 2023

ಚಿತ್ರ ಬರಹ - ಆಕಾಶ ಎಂಬ ಹಣೆಗೆ ಸೂರ್ಯನ ಚಂದದ ಬೊಟ್ಟು!

ಅರೆರೆ ಕನ್ನಡ ಚಿತ್ರ ಬರಹ! ಆದರೂ ಟ್ಯಾಗ್ ಮಾತ್ರ ಒಂದೇ ಇಟ್ಟಿದ್ದೇನೆ (NKHPhotoBlog)! ಒಂದೇ ಕಡೆ ಇರಲಿ ಅಂತಾ!

ಗುಡುಗು ಮಳೆಯ ಸೀಸನ್ ಬಹಳ ಜೋರಾಗಿದೆ. ಬೆಂಗಳೂರಿನಲ್ಲಿ ಮಾತ್ರ ಬರುತ್ತಿಲ್ಲ. ಸುತ್ತಲೂ ಸುರಿಯುತ್ತಿದೆ ಅನ್ನೋ ಸುದ್ಧಿ. ಸಂಜೆ ಆಕಾದಶದಲ್ಲಿ ಮೂಡುವ ಬಣ್ಣಗಳು ಮಾತ್ರ ವರ್ಣನಾತೀತ! ಚಲಿಸುವ ಮೋಡಗಳು, ಅದರೊಂದಿಗೆ ಸೂರ್ಯಾನ ಕಣ್ಣು ಮುಚ್ಚಾಲೆ, ಸೂರ್ಯಾಸ್ತದ ಸುಂದರ ಬಣ್ಣಗಳು ಸಾಕು ಒಂದು ಒಳ್ಳೆ ಪ್ರಾಕೃತಿಕ ಚಿತ್ರ ತೋರ್ಪಡಿಸಲು.

ವಾಕಿಂಗ್ ಮಾಡುವಾಗ ಕಂಡ ದೃಶ್ಯ! ಪ್ರತಿದಿನ ಇಂತದೆ ಏನಾದರೂ ವಿಶಿಷ್ಟವಾದ ಚಿತ್ರಣಗಳು ನನ್ನನ್ನು ಆಕರ್ಷಿಸುತ್ತದೆ. ಅಗಲವಾದ ಮೋಡದ ಮಧ್ಯೆ ಸೂರ್ಯನು ಪ್ರತ್ಯಕ್ಷನಾದಾಗ ನನಗೆ ಥಟ್ಟನೆ ಹೊಳೆದಿದ್ದು "ಆಕಾಶ ಎಂಬ ಹಣೆಗೆ ಸೂರ್ಯನ ಚಂದದ ಬೊಟ್ಟು!". ನಗರದಲ್ಲೂ ಸುಂದರ ದೃಶ್ಯಗಳು ಕಾಣಸಿಗುತ್ತವೆ ಮತ್ತು ಅವುಗಳನ್ನು ವರ್ಣಿಸಲುಬಹುದು ಅಂಥಾ ದೃಶ್ಯ ನೋಡಿದಾಗಲೇ ತಿಳಿದಿದ್ದು.



ಅಮೃತಹಳ್ಳಿ ಕೆರೆ ಸುತ್ತ ನಡೆದಾಡುವಾಗ ಸೆರೆಹಿಡಿದ ದೃಶ್ಯ!

ಮತ್ತಷ್ಟು ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ! ನಗರದ ಸುತ್ತ ದಪ್ಪ-ಪುಷ್ಟ ಮೋಡಗಳು ಸುತ್ತುವರಿದಿದ್ದರೂ, ಸಧ್ಯಕ್ಕೆ ದೂರದ ಜಾಗದಲ್ಲಿ ಸುರಿದ ಮಳೆಯ ಕ್ಷಣಿಕ ತಂಗಾಳಿಗೆ ಮಾತ್ರ ತೃಪ್ತಿಪಡುವಂತಾಗಿದೆ. ಇಷ್ಟೊಂದು ಸೆಕೆ ಇದುವರೆಗೆ ಕಂಡಿಲ್ಲ ಬೆಂಗಳೂರಿನಲ್ಲಿ!




No comments:

Post a Comment