Pages

Monday, August 28, 2023

ಇಂದಿನ ಹಾಲಿನ ಕೇಂದ್ರದ ಸಂಭಾಷಣೆ

ಕರ್ನಾಟಕದಲ್ಲಿ ೧ನೇ ಆಗಸ್ಟ್ ಇಂದ ಹಾಲಿನ ದರ ಲೀಟರ್ ಗೆ ೩ ರೂಪಾಯಿ ಹೆಚ್ಚಳವಾಗಿದೆ. ಯಾಕೆನ್ನುವುದು ಎಲ್ಲರಿಗೂ ತಿಳಿದಿದೆ. ಅಧಿಕಾರಕ್ಕೋಸ್ಕರ ಬಿಟ್ಟಿ ಭಾಗ್ಯಗಳನ್ನು ಪ್ರಕಟಿಸಿ ಈಗ ಸರಿದೂಗಿಸುವುದಕ್ಕೆ ಮಾಡುತ್ತಿರುವ ದುಬಾರಿ ಹರಸಾಹಸ ಎಲ್ಲರಿಗೂ ತಿಳಿದದ್ದೇ! ಅದರಲ್ಲಿ ಒಂದು ಹಾಲಿನ ದರ ಏರಿಕೆ. ಇಂದು ನನಗೆ ಮೊದಲ ಅನುಭವವಾಯಿತು. ಅಲ್ಲಿದ್ದಿದ್ದು ಸ್ವಲ್ಪ ಸಮಯ ಅಷ್ಟೇ, ಅದರ ತುಣುಕು ಇಲ್ಲಿದೆ. 

ನಾವು ಹೆಚ್ಚಾಗಿ ಕೇಸರಿ ಹಾಲನ್ನು ಖರೀದಿಸುವುದು. ಅಂತೆಯೇ ಎಂದಿನಂತೆ ಲೀಟರ್-ಗೆ ೪೬ ಮೊಬೈಲ್ ಪೇಯ್ಮೆಂಟ್ ಮಾಡಲು ಹೊರಟಾಗ ಮಾಲೀಕ ತಕ್ಷಣವೇ ತಡೆದು, 

"ಸಾರ್ ತಡೀರಿ ಈಗ ಲೀಟರ್-ಗೆ ೨೫ ರೂಪಾಯಿ. ೫೦ ಪೇ ಮಾಡಿ ಅಂದಾ" 

"ಏನ್ರೀ ೩ ರುಪಾಯಿ ಜಾಸ್ತಿ ಅಂತ ಹೇಳಿದ್ರು ಈಗ ೪ ರುಪಾಯಿ ಆಯಿತಾ. ಒಹೋ ಸರಕಾರ ಹೇಳೋದೊಂದು ಮಾಡೋದೊಂದು!"

"ನೋಡಿ ಸಾರ್ ಪ್ಯಾಕೆಟ್ ಅಲ್ಲೇ ಹಾಕಿದ್ದಾರೆ. ಅರ್ಧ ಲೀಟರ್-ಗೆ ೨ ರೂಪಾಯಿ ಜಾಸ್ತಿ. ೫೦ ಪೈಸೆ ಈಗ ಲೆಕ್ಕಕ್ಕೆ ಇಲ್ಲ ಇಲ್ವಾ ಅದಿಕ್ಕೆ ಅನ್ಸುತ್ತೆ!"


ಸರಿ ಹೋಯ್ತು ಅಂತಾ ಪೇ ಮಾಡಿದೆ. 

ಹಾಗೆ ಜನ ಬರ್ತಾ ಇದ್ರೂ. "ಏನಪ್ಪಾ ಎಲ್ಲಾ ಜಾಸ್ತಿನಾ?!"

"ಹೂ ಸರ್! ವೋಟ್ ಹಾಕಿದಕ್ಕೆ ಅನುಭವಸಬೇಕು ಈಗ!"

"ಸರಿಹೋಯ್ತು ಒಂದು ಫ್ರೀ  ಕೊಟ್ಟು ೧೦ ಕಡೆ ಕಸ್ಕೊತಾ ಇದಾರೆ ಅಷ್ಟೇ!"


ಅಂದ ಹಾಗೆ, ಅರ್ಧ ಲೀಟರ್ ಗೆ ೫೦ ಪೈಸೆ ಹೆಚ್ಚು ಏಕೆ ಎನ್ನುವುದಕ್ಕೆ ಸಮಜಾಯಿಷಿ ಸಿಕ್ಕಿದೆ. ಇದರಲ್ಲಿ ೧೦ml ಹೆಚ್ಚು ಹಾಲು ಇದೆ ಅಂತೆ. ೫೦ ಪೈಸೆ ಚಿಲ್ಲರೆ  ಇಲ್ಲ ಅಂತಾ ರೌಂಡ್-ಆಫ್ ಮಾಡಿದ್ದಾರಂತೆ. ೧೦ml ಹೆಚ್ಚು ಇದೆಯೋ ಇಲ್ಲವೋ ಅಂತಾ ನೀವು ಚೆಕ್ ಮಾಡುತ್ತೀರಾ? ನಾವಂತೂ ಮಾಡಲ್ಲ ಬಿಡಿ. 

No comments:

Post a Comment