Pages

Saturday, April 6, 2024

ಚಿತ್ರ ಬರಹ - ಈಗ ಫ್ಯೂಚರ್ ನಿರಾಳ!

ಬೆಂಗಳೂರಿನ ಪೆಟ್ರೋಲ್ ಬಂಕ್ ನಲ್ಲಿ ತೆಗೆದ ಚಿತ್ರ. ನೋಡಿ ನಾಯಿ ಎಷ್ಟೊಂದು ಆರಾಮಾಗಿ ನಿದ್ರಿಸಿದೆ ಎಂದು. ನಾನು ಫೋಟೋ ಹೊಡೆಯೋದನ್ನ ನೋಡಿ ಸ್ವಲ್ಪ ಕಣ್ಣು ತೆರೆಯಿತು ಅನ್ಸುತ್ತೆ, ತದನಂತರ ಮತ್ತೆ ನಿದ್ರೆಯನ್ನು ಮುಂದುವರೆಸಿತು. ಎಲ್ಲಿಯಾದರೇನು ಏನಂತೆ ಕೊನೆಗೆ ತುತ್ತು ಅನ್ನ ಮತ್ತು ಮಲಗಲು ಜಾಗ ಸಿಕ್ಕರೆ ಸಾಕು ಎನ್ನುವಂತಿದ್ದು ಅದರ ಮುಖಚರ್ಯೆ.



ಬಂಕ್ ನಲ್ಲಿ HP ಅವರ "ಈಗ ಫ್ಯೂಚರ್ ಅನ್ನು ಫೀಲ್ ಮಾಡಿ" ಅನ್ನುವ ಜಾಹಿರಾತು ಕಂಡೆನು. ಅದರ ಬಳಿಯೇ ಶ್ವಾನ ಮಹಾರಾಜರು ಮಲಗಿದ್ದರು. ನಾಯಿ ನಿದ್ರೆಗೆ ಜಾರಿದ ಮೇಲೆ "ಈಗ ಫ್ಯೂಚರ್ ನಿರಾಳ" ಅನ್ನುವ ಫೀಲಿಂಗ್ ಬಂದಿರಬಹುದು. ಯಾವ ಆಡಂಬರ ಬೇಡ, ಬಂಕ್-ನವರು ಕೊಡುವ ತಿಂಡಿಯಲ್ಲಿ ಜೀವನ ಸಾಕುವನ್ನುತ್ತಿದೆ ಅದರ ಮನೋಭಾವ. 



ಫ್ಯೂಚರ್ ಫೀಲ್ ಮಾಡುವುದಕ್ಕಿಂತ ಫ್ಯೂಚರ್ ಎಷ್ಟು ನಿರಾಳವಾಗಿರುವುದೇ ನಮಗೆ ಮುಖ್ಯ ಅಲ್ಲವೇ! ಆರೋಗ್ಯ, ಪಿಂಚಣಿ, ಉತ್ತಮ ಆಹಾರ ಇದುವೇ ಫ್ಯೂಚರ್ ನ ಅಡಿಪಾಯ ಎಂದು ನಾನು ನಂಬಿದ್ದೇನೆ. ರಿಚ್ ಆಗ್ಬೇಕು, ಕಾರು ತಗೋಬೇಕು, ಬಂಗ್ಲೆಯಲ್ಲಿ ವಾಸಿಸಬೇಕು ಎನ್ನುವ ಫ್ಯೂಚರ್ ಫೀಲ್ -ಗಿಂತ ಸರಳ ಜೀವನಕ್ಕೆ ಹೊಂದಿಕೊಂಡರೆ ಫ್ಯೂಚರ್ ನಿರಾಳ ಎನಿಸುತ್ತದೆ. ನೋಡಿ, ನಾಯಿಯ ನಿದ್ರೆ ಕಥನ ಅದೇನೇನೋ ಭಾವನೆಗಳನ್ನು ಹೊರಚಿಮ್ಮಿತು. ಇರಲಿ ಚಿತ್ರವಾದರೂ ಇಷ್ಟವಾಗಿರಬಹುದು ಅಂದುಕೊಂಡಿದ್ದೇನೆ!

No comments:

Post a Comment