ವರುಷಾ ವರುಷಾ ಬಾರಯ್ಯಾ... ವಾಮನ ಮೂರುತಿ
ಹರುಷಾವನ್ನೆ ತಾರಯ್ಯಾ ಹರ-ಸುಪುತ್ರ ಗಣಪತಿ 🙏
ಹರ-ಸುಪುತ್ರ, ಹರಸು-ಪುತ್ರ ಎರಡು ಜೋಡಿಗಳು ಅರ್ಥಪೂರ್ಣವಾಗಿದೆ.
ಶಿವನ ಪುತ್ರ ಅಥವಾ ನಮ್ಮನ್ನೆಲ್ಲ ಹರಸುವ ಬಾಲ ಗಣಪತಿ ಎಂಬ ಎರಡರ್ಥವನ್ನು ನೀಡುತ್ತದೆ.
ಪಕ್ಕದ ಬೀದಿಯಲ್ಲಿ ಪ್ರತಿಷ್ಠಾಪಿಸಿದ ಗಣಪತಿ. ಬಹಳ ಸುಂದರವಾಗಿತ್ತು ಮತ್ತು ಅಲಂಕಾರಿಕವಾಗಿತ್ತು. ವಾಮನ ಅಂತ ಹೇಳಿ ದೈತ್ಯ ಮೂರ್ತಿಯನ್ನೇ ಇಟ್ಟಿದ್ದಾರೆ. ತಾಯಿಯ ಮೂರ್ತಿ ಮಾತ್ರ ಬಹಣ ಸಣ್ಣದಾಗಿದೆ. ಗಣಪತಿಗೆ ಕೋಪ ಬರದಿದ್ದರೆ ಸಾಕು.
ವರುಷಾ ವರುಷಾ ಬಾರಯ್ಯಾ, ಪದ್ಮ-ವಿಭೂಷಣ ದಿವಂಗತ ಡಾ. ಎಂ.ಬಿ.ಕೆ ಅವರ ಕಂಠದಲ್ಲಿ ಕೇಳಿ ಆನಂದಿಸಿ.
ಈ ವರ್ಷದ ಗೌಜಿ ಮುಗಿಯಿತು. ಪ್ರತಿ ವರ್ಷ ಬಂದು ಹೀಗೆ ಸಂತೋಷ ತಾ ಗಣಪತಿಯೇ. ಮಕ್ಕಳಿಗೂ ಖುಷಿ ನೋಡಿ. ಪರೀಕ್ಷೆ ಬಿಟ್ಟು ಬಂದು ಎಲ್ಲರ ಜೊತೆ ಗಣಪತಿಗೆ ಸ್ವಾಗತ ಮಾಡಿ, ಹಾಡಿ ಕುಣಿಯುತ್ತಾರೆ.
7 ದಿನ ಕಳೆದದ್ದೇ ತಿಳಿಯಲಿಲ್ಲ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯೇ ನಮ್ಮ ಗಣನಾಯಕ. ಸಕತ್ ಪವರ್‌ಫುಲ್! ಭಾದ್ರಪದ ಶುಕ್ಲ ಚೌತಿಗೆ ಪೋಸ್ಟ್ ಮಾಡಲು ಆಗಲಿಲ್ಲ. ಅದಕ್ಕೆ ಕೃಷ್ಣಪಕ್ಷದ ಚೌತಿಗೆ ಪೋಸ್ಟ್ ಮಾಡಿದ್ದೀನಿ ನೋಡಿ. ಪಿತೃಪಕ್ಷ ಬೇರೆ. ಪೂರ್ವಜರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಬೇಡಿಕೊಳ್ಳೋಣ.
ಮಂಗಳವು ಗಣನಾಥ ಮಂಗಳವು ಗಜವದನ
ಮಂಗಳವು ಶ್ರೀ ವಿಘ್ನರಾಜ.
ಡಾ|| ಬಾಲಮುರಳಿಕೃಷ್ಣ ಅವರ ಕಂಠದಿಂದ ಮತ್ತೊಂದು ಸುಂದರ ಗಾಯನ. ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ರಾಗ "ಸಿಂಧುಭೈರವಿ"ಯಲ್ಲಿ ಅವರದ್ದೇ ರಚನೆ ಕೂಡಾ!



No comments:
Post a Comment