Thursday, November 27, 2025

Gundya river flourishing through Western Ghats

The evergreen scene travelling through the shiradi ghat. My favorite spot along Bangalore-Mangalore National highway. For natural nature lovers, the best of Mangalore journey is Shiradi ghat. Out of this, my first choice is the Gundya river meandering through lush green western ghats. An eternal beauty spot especially during monsoon season. The chemistry of nature and monsoon is inexplicable. My penchant for evergreen tropical forests grows intense after gazing such scenes. Once you hook to mountains, its an addiction. Never letting go even a single splendour of display by mother nature. I hope such natural addiction in me never fades away.










Gundya river meandering through valley of Western ghats. The stream turn ruddy during peak monsoon season before settling to normal color when monsoon takes long break. Once you hook to mountains, it's addiction. Never letting go even single splendour of display. Penchant for rainforest grows intense when you gaze upon the mountains glammed up by the monsoon.

Sunday, November 23, 2025

ಮುನಿಸಿಕೊಂಡ ಮುನಿಯಾ

ಬಹಳ ದಿನದಿಂದ ಅಪಾರ್ಟ್-ಮೆಂಟ್ ಬಾಲ್ಕನಿಯಲ್ಲಿ ವಿಸ್ಮಯ ಕಾದಿತ್ತು. ಪಾಟ್-ಗಳ ಮಧ್ಯದಲ್ಲಿ ಹುಲ್ಲುಹಾಸು ತಲೆ ಎತ್ತುತ್ತಿತ್ತು. ಅರೆರೆ ಇದೇನಪ್ಪಾ ಅಂತಾ ಆಶ್ಚರ್ಯಗೊಂಡ ಮಡದಿ, ಪ್ರತಿದಿನ ಅದನ್ನು ಕ್ಲೀನ್ ಮಾಡುವದರಲ್ಲೇ ಸಮಯ ಕಳೆಯುತ್ತಿದ್ದಳು. ಪಾರಿವಾಳಕ್ಕೆ ಹೇಗೂ ಸುರಕ್ಷಾ ನೆಟ್ ಹಾಕಲಾಗಿದೆ, ಮತ್ಯಾರಪ್ಪಾ ಇದು ಅಂತಾ ಯೋಚನೆ ಮಾಡುತ್ತಿದ್ದೆವು. ಫ್ರೆಶ್ ಹುಲ್ಲುಹಾಸು ಎಲ್ಲಿಂದ ಬರುತ್ತಿದ್ದೆ ಅದು ಕೂಡಾ ದಿನಕ್ಕೆ ಮೂರು ಬಾರಿ. ಏನಪ್ಪಾ ಎಂದು ಯೋಚಿಸುತ್ತಿರುವಾಗ ಒಂದು ದಿನ ಮಡದಿಗೆ "ರೀ ಬನ್ರೀ! ಸಣ್ಣ ಹಕ್ಕಿ ತಂದು ತಂದು ಗುಡ್ಡೆ ಹಾಕ್ತಾ ಇದೆ ನೋಡಿ" ಅಂದು ಜೋರಾಗಿ ಕೂಗಿದಳು. ನಾನು ಬಂದು ನೋಡಿದಾಗ ನಮ್ಮ ಮುನಿಯ () ಸಾಹೇಬರು ಇಲ್ಲಿ ತಮ್ಮ ಸಂತಾನೋತ್ಪತ್ತಿಗೆ ಸ್ಕೆಚ್ ಹಾಕುತ್ತಿರುವುದು ಕನ್ಫರ್ಮ್ ಆಯಿತು. ಅದರ ಪ್ರಯತ್ನಕ್ಕೆ ಮೆಚ್ಚಲೇ ಬೇಕು ನೋಡಿ! ಹಲವಾರು ಸಲ ನಾವು ಅದರ ಹುಲ್ಲುಹಾಸನ್ನು ಬಿಸಾಡಿದರೂ ಅದು ಛಲ ಬಿಡಲಿಲ್ಲ. ಕೊನೆಗೆ ನಾವೇ ರೋಸಿ ಹೋಗಿ, ಬಾಲ್ಕನಿಯಲ್ಲಿ ಉಳಿದ ಸಣ್ಣ ಗ್ಯಾಪ್ ಅನ್ನು ಪ್ಲಾಸ್ಟಿಕ್ ಕವರ್ ಮೂಲಕ ಮುಚ್ಚಿದೆವು.





ಮುನಿಯಾಗೆ ಮತ್ತೆ ಬರಲು ಸಾಧ್ಯವಾಗಲಿಲ್ಲ. ಅದು ದುರುಗುಟ್ಟಿ ನಮ್ಮನ್ನೇ ನೋಡುತ್ತಿತ್ತು. "ಏನ್ ಮನುಷ್ಯರೋ ನೀವು! ನಮ್ಮ ಜಾಗಾನೇಲ್ಲಾ ಕಾಂಕ್ರೀಟ್ ಕಾಡು ಮಾಡಿ, ನಮ್ಮ ಜೀವನವನ್ನ ಕಿತ್ಕೊಂಡು, ನಿಮ್ಮ ಜಾಗದಲ್ಲೂ ಬದುಕಕ್ಕೆ ಬಿಡಲ್ಲ. ಒಂದಲ್ಲಾ ಒಂದು ದಿನ ಪ್ರಕೃತಿನೇ ನಿಮಗೆ ಪಾಠ ಕಲಿಸುತ್ತೆ ನೋಡ್ತಾ ಇರಿ" ಅಂತಾ ಶಾಪ ಇಟ್ಟಂತಿತ್ತು. ನನಗು ಬೇಜಾರಾದರು ಚಾರ್ಲ್ಸ್ ಡಾರ್ವಿನ್ ಅವರ "Survival of Fittest" ಘೋಷಣೆ ನೆನಪು ಮಾಡಿಕೊಂಡು ವಿಷಯವನ್ನು ಅಲ್ಲೇ ಮುಕ್ತಾಯ ಮಾಡಿದೆನು!


ಏಕಾದಶಿ ಚೌಕಾಶಿ

ನಿವೃತ್ತಿಯ ಬಳಿಕ ಊರಿಗೆ ಬಂದು ಸೇರಿದ ತಿಮ್ಮರಾಯ ದಂಪತಿ, ತಮ್ಮ ಸಂಪ್ರದಾಯವನ್ನು ಮತ್ತಷ್ಟು ಶಿಸ್ತಿನಿಂದ ರೂಢಿಸಿಕೊಳ್ಳಲು ನಿರ್ಧರಿಸಿದರು. ಅದರಲ್ಲಿ ಈರುಳ್ಳಿ ಉಪಯೋಗ ಕಡಿಮೆ ಮಾಡುವುದು, ಹೊರಗಿನ ಊಟಕ್ಕೆ ಕಡಿವಾಣ ಹಾಕುವುದು ಮತ್ತು ಏಕಾದಶಿಯಂದು ಫಲಾಹಾರ ಪಾಲಿಸಲು ಕಟ್ಟುನಿಟ್ಟಾದ ನಿಯಮವನ್ನು ಹೇರಿಕೊಂಡರು. ಸ್ವಲ್ಪ ದಿನ ಏನೋ ನಡೆಯಿತಾದರೂ, ಬರ ಬರುತ್ತಾ ಅದರ ಕಠಿಣತೆ ಕಡಿಮೆಯಾಗತೊಡಗಿತು. ಎಲ್ಲವು ಅವರವರ ಅನುಕೂಲಕ್ಕೆ ಮಾಡುತ್ತಿದ್ದರಾದರು ಬೇರೆಯವರ ಆಚರಣೆಯ ಬಗೆಗ್ಗಿನ ದೂಷಣೆ ಮಾತ್ರ ಕಡಿಮೆ ಮಾಡಿರಲಿಲ್ಲ ತಿಮ್ಮರಾಯರು.

ಅವರ ಮಗ ನಂಜುಂಡಗೆ ಇದೆಲ್ಲವೂ ಸರಿ ಅನ್ನಿಸುತ್ತಿರಲಿಲ್ಲ. "ನೀವು ಮಾಡುವುದು ಎಲ್ಲಾ ಸರಿ, ಬೇರೆಯವರೆಲ್ಲ ತಪ್ಪು ಅನ್ನೋದು ಈ ವಯಸ್ಸಿಗೆ ಬೇಕಾ" ಅಂತಾ ತಿಳಿ ಹೇಳುತ್ತಿದ್ದ. ಆದರೂ ವಯಸ್ಸಿನ ದರ್ಪದಿಂದ ತಿಮ್ಮರಾಯ ದಂಪತಿಗಳು ಮಗನ ಮಾತನ್ನು ಮೂದಲಿಸುತ್ತಿದ್ದರು. "ಅವನೇನು ಜೀವನ ನೋಡಿದ್ದಾನೆ. ಸುಮ್ಮನೆ ದೊಡ್ಡವರಿಗೆ ಪಾಠ ಹೇಳ್ತಾನೆ. ಈಗಿನ ಜೆನರೇಷನ್ ಸರಿ ಇಲ್ಲಾ" ಅಂತಾ ತಮ್ಮ ಹಿರಿತನದ ಅಹಂ ತೋರ್ಪಡಿಸುತ್ತಿದ್ದರು ದಂಪತಿಗಳು. ಇಷ್ಟು ವರ್ಷ ಸರಕಾರೀ ಕೆಲಸದಲ್ಲಿದ್ದರೂ ಸರಿಯಾಗಿ ಉಳಿತಾಯ ಮಾಡದೆ ಎಲ್ಲದಕ್ಕೂ ಮಗನ ಬಳಿ ಹಣ ಕೇಳುತ್ತಿದ್ದ ತಿಮ್ಮರಾಯರಿಗೆ ಅದೇನು ಹಿರಿತನನೊ ಅನ್ನೋದು ಮಗನಿಗೂ ತಿಳಿಯುತ್ತಿರಲಿಲ್ಲ.

ಏಕಾದಶಿ ಆಚರಣೆ ಅಂದಾಗ, ಕೆಲವೊಮ್ಮೆ ಆರ್ಯಭಟ ಮತ್ತು ದೃಗ್ಗಣಿತ ಲೆಕ್ಕಾಚಾರಗಳು ಆಚೀಚೆ ಆಗುತ್ತಿದ್ದವು. ಅಂತೆಯೇ ತಿಮ್ಮರಾಯರ ಅನುಸರಿಸುತ್ತಿದ್ದ ಪ್ರಕಾರ ಭಾನುವಾರದಂದು ಏಕಾದಶಿ ಆಚರಣೆ ಮಾಡಬೇಕಿತ್ತು. ಕೆಲವರು ಶನಿವಾರ ಆಚರಿಸುತ್ತಿದ್ದರು. ಊರಿನಲ್ಲಿ ಭಾನುವಾರದಂದು ನಿಶ್ಚಿತ ತಾಂಬೂಲ ಇತ್ತು. ಇವರಿಗೆ ಏನು ಮಾಡಲು ತಿಳಿದಿರಲಿಲ್ಲ. ಆದರೂ ಏಕಾದಶಿ ಆಚರಣೆಯಂದು,  ನಿಶ್ಚಿತ ತಾಂಬೂಲ ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ಅಕ್ಕಿಯ ದೋಸೆ ಹಾಗು ಉದ್ದಿನ ಇಡ್ಲಿ ತಿಂದು ಬಂದರು.

ಮಗ ಫೋನ್ ಮಾಡಿದಾಗ ಎಲ್ಲವು ವಿವರವಾಗಿ ತಿಳಿಸಿದರು. 

"ಅಲ್ಲಮ್ಮ ನಾನು ಇಲ್ಲಿ ಏಕಾದಶಿ ಅಂತ ಮನೆಯಲ್ಲಿ ಕಷ್ಟ ಪಟ್ಟು ಫಲಾಹಾರ ಮಾಡಿದ್ರೆ ನೀವು ಅನುಕೂಲ ಶಾಸ್ತ್ರ ಮಾಡಿಕೊಂಡಿದ್ದೀರಲ್ಲ" ಅಂತ ಬೇಸರ ವ್ಯಕ್ತಪಡಿಸಿದನು. 

"ಹಾಗೇನು ಇಲ್ಲ ಕಣೋ ಶಾಸ್ತ್ರ ಪ್ರಕಾರ..." ಹಾಗೆ ಹೀಗೆ ಅಂತ ತಿಮ್ಮರಾಯರು ಇಲ್ಲದ ಸಮಜಾಯಿಷಿ ನೀಡಿದರು. ಮತ್ತೆ ತಪ್ಪು ಒಪ್ಪಿಕೊಳ್ಳಲು ಹಿರಿತನದ ಅಹಂ ಬಿಡಬೇಕಲ್ಲವೇ!

"ಅದಿರಲಿ ನಿಮಗೆ ಬೇಕಾದಾಗ ಇಲ್ದೆ ಇರೋ  ಪರದೇಶದ ಶಾಸ್ತ್ರವನ್ನು ಹೊರಗೆ ತರ್ತಿರಾ ಬಿಡಿ. ಶನಿವಾರ ಆದ್ರೂ ಆಚರಣೆ ಮಾಡಬಹುದಿತ್ತು ಹಾಗಿದ್ರಿ" ಅಂತ ಛೇಡಿಸಿದನು 

"ನಿಮ್ಮ ಜೆನೆರೇಷನ್ ನವರಿಗೆ ಹಿರಿಯರಿಗೆ ಹೀಯಾಳಿಸುವುದು ತಿಳಿದಿದೆ ಈಗ. ಕಾಲ ಕೆಟ್ಟೋಗಿದೆ ನೋಡು. ಈಗೇನಾಯಿತು ಹೇಳು. ಊರಿನವರ ಕಾರ್ಯಕ್ರಮಕ್ಕೆ ಹೋಗದೆ ಇರಕ್ಕಾಗುತ್ತ ಅಂತಾ"     ತಿಮ್ಮರಾಯರು ಅದೇ ಜಾರಿಕೊಳ್ಳುವ ಮಾತು ಹೇಳಿದರು. 

"ನಿಶ್ಚಿತ ತಾಂಬೂಲ ಹೋಗ್ಬೇಡಿ ಅಂತಾ ನಾನೇನು ಹೇಳಿಲ್ಲ. ಸುಮ್ಮನೆ ಚಾ-ಕಾಫಿ ಕುಡಿದು ಬರಬಹುದಿತ್ತಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾಕೆ ಆಚರಣೆಗಳನ್ನು ಮಾಡ್ತಿರಾ ಅಂತ" ಮತ್ತೆ ಪ್ರಶ್ನಿಸಿದನು. 

"ನಾವೇನು ಅನ್ನ  ತಿಂದಿಲ್ಲ, ಅಲ್ಲೂ ಫಲಾಹಾರ ಮಾಡಿದ್ದು ತಿಳಿತಾ" ಎಂದು ತಿಮ್ಮರಾಯರು ಗದರಿದರು. 

"ಹಾಗಾದ್ರೆ ನಮಗೆ ಇನ್ನು ಮುಂದೆ ಪಾಠ ಹೇಳ್ಬೇಡಿ . ನಾನು ಬೇಕಾದಾಗ ತಿಂತೀನಿ , ಬೇಕಾದಾಗ ಏಕಾದಶಿ ಆಚರಣೆ ಮಾಡ್ಕೋತೀನಿ. ಮತ್ತೆ ಅಮಾವಾಸ್ಯೆ ಕೂದಲು ಕಟ್ ಮಾಡ್ಬೇಡ, ಶುಕ್ರವಾರ ಎಣ್ಣೆ ಹಚ್ಕೋಬೇಡ ಅಂತಾ ಬೇಡದೆ ಇರೋ ಆಚರಣೆ ನನ್ನ ಮೇಲೆ ಹೇರಬೇಡಿ. ನಿಮಗೆ ಬೇಕಾದಂತೆ ಇರ್ತೀರಾ ಬೇರೆಯವರಿಗೆ ನಿಯಮಗಳನ್ನ ಹೇರ್ತೀರಾ. ಬೇಕಾದ್ರೆ ನಿಮ್ಮದೇ ಪಂಚಾಗ ಪ್ರಿಂಟ್ ಮಾಡಿ ಏಕಾದಶಿಗೆ ಅಕ್ಕಿಯ ಫಲಾಹಾರ ಮಾಡಬಹುದು ಆದರೆ ಅನ್ನ ತಿನ್ನಬಾರದು ಅಂತಾ! ಇದೆಂತ ಹಿರಿತನನೊ" ಎಂದು ಬೇಸರದಿಂದ ನಂಜುಂಡ ಫೋನ್ ಇಟ್ಟನು.

ಹಲವು ಬಾರಿ ಹೀಗೆ ಆದರೂ ತಿಮ್ಮರಾಯ ದಂಪತಿಗಳಿಗೆ ತಾವೇ ಸರಿ ಅನ್ನೋ ಅಹಂ ಹೋಗಿರಲಿಲ್ಲ. "maturity has no relation to age" ಅಂತಾ ನಂಜುಂಡನಿಗೂ ಮನವರಿಕೆಯಾಯಿತು. ತನ್ನ ಹೆತ್ತವರು "ಏಕಾದಶಿ ವಿಷಯದಲ್ಲಿ ಚೌಕಾಶಿ" ಮಾಡಿದ್ದು ನಂಜುಂಡಗೆ ಸ್ವಲ್ಪವೂ ಹಿಡಿಸಿರಲಿಲ್ಲ. ಅವರ ಅನುಕೂಲ ಶಾಸ್ತ್ರದ  ಆಚರಣೆಯ ದ್ವಂದ್ವತನದಿಂದ  ಅವನು  ರೋಸಿಹೋಗಿದ್ದ. ತನ್ನ ಆಚರಣೆ ತನಗೆ ಎಂದು ಹೆತ್ತವರ ಯಾವುದೇ ಆಚರಣೆಗೆ ಕಿವಿಗೊಡುತ್ತಿರಲಿಲ್ಲ.  

Train of Cranes!

This was chain of excavators carried by railways freight carrier parked beneath Channasandra bridge railway line. Perhaps the train stopped to facilitate passenger train or unload the excavators or waiting for signal or some other reason. Just guessing. Found the subject interesting and hence quickly grabbed few amidst the narrow footpath and squeaking traffic. The massive traffic over the bridge is inconvenient for any photography even though subjects are interesting thanks to unwalkable footpath and high density of vehicles. Somehow managed for few clicks before the bystanders could turn cranky.



I am aware that these are not cranes but excavators. The title is intentionally kept to maintain rhyming pattern :-) 

Friday, September 5, 2025

Vespertine show at Hejamadi Beach

Not the developed beach in Udupi district. The best part of Hejamady beach is its backwaters. The current backwater system doesn't meet sea. It takes a while in monsoon season for sea and backwater to merge. The forked backwater is something joyous to watch. There are plenty of aquatic birds too relishing their meals.







It was fun time with family members when everyone decided to have beach visit. Around 20 members of family visited the beach nearby in 4 cars. With loud chit-chats, the beautiful sunset, the roaring waves transformed the humid Saturday to pleasant evening. We walked over the dunes for considerable distance and also dabbled the foot in sea water. The sunset was colorful and sun was blushing as evening crossed. I took plenty of pictures alongside chit chats.














The unique part is the backwater merging (or forking?) from three directions. The merger point is now separated by sand dunes due to low tide and summer season. The waterway would stay merged till February from June perhaps. The mangroves and palms were radiating golden light from Sun. The boats complemented the landscape scene of backwater. The palms and wrinkled water provided unique perception. Overall, true stress-buster is our mother nature.



The abandoned isolated log provided unique perception to my photographic chronicle






The concluding pictures! The ripples over the backwaters with coconut tree backdrop was worth capturing despite poor light.



Here is a short to conclude the visit



Friday, June 27, 2025

Signs of Early monsoon onset 2025

11th May 2025

After long break, rains are back. Coastal karnataka had poor pre-monsoon rains so far. It has been nearly 20 days without a drop of rain. Today, the heavy clouds streamed from west and engulfed our region. By night, we had light showers and monster shower at midnight. Even though the showers were fleeting, they gave hope that rains are alive. Its been protracted dry days so far. The humidity is soaring, the clouds are seen everywhere which are portending rains in early days. Unlike the ground strikes that occur during pre-monsoon time, the thunder we heard today was mild one which resembled atmosphere during monsoon onset. Lets see how rainfall pattern continues in a week of time. Here are the towering clouds captured on 12th morning. As wind speeds increase, these clouds easily make it to mainland from sea. Currently, wind speeds are not supportive to push them to mainland.








I don't like my vivo v40 pro blowing up highlights. They do not present monsoon vibe appropriately even though nature posed beautifully! Despite complaining them they seem to have no obligation to address customer issues.



Look how parched are the land below. Region is extremely desperate to have rains


Here is wide angle picture. You can see me shooting in shadows!


While west side is abuzz with clouds, the east is bone dry. The shine is smiling energetically jeering at rain deprived vegetation.


Towering clouds to conclude the post!





Met department also has predicted early monsoon and an above average rainfall for rest of May. Hopefully it materializes. Only desire is to witness a heavy rain spell before my stay concludes at home town. I am not hopeful of any further visits to native in near future during monsoon. Even though natural resources are declining, monsoon has been normal so far in our region. However, the trend has been awkward with gaps in between and sometimes monsoon extending beyond the duration. Weather pattern changes are real and can be conveniently concluded from past 5yrs track record.

Meanwhile, we did have early monsoon onset with stations clocking 300mm+ in 24hrs during May end itself. SO this time  the prediction has come true but farming community is highly confused

Printfriendly

Related Posts Plugin for WordPress, Blogger...