ರಾಮಾಯಣದಲ್ಲಿ ಹನುಮಂತನ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡ. ಶ್ರೀ ವಾದಿರಾಜರು ಹಾಡಿನ ಮೂಲಕ ಹನುಮಂತನ ಸ್ತುತಿ ಮಾಡಿ ಹೊಗಳಿದ್ದಾರೆ. ವಾದಿರಾಜರು ಹಾಡುಗಳು ಬಹಳ ವಿಸ್ತಾರವಾಗಿರುತ್ತವೆ. ಅವರ ಹನುಮಂತನ ಈ ಹಾಡು ಕೂಡ ಬಹಳ ವಿಸ್ತಾರವಾಗಿದೆ. ಈ ಹಾಡಿನಲ್ಲಿ ಪದ್ಯದ ಮೂಲಕ ವಾದಿರಾಜರು ಹನುಮಂತನ ಸಾಹಸಗಾಥೆಯನ್ನು ವಿವರಿಸಿದ್ದಾರೆ. ಹನುಮನು ಸಾಗರ ದಾಟಿದ್ದು, ಜಾನಕಿಗೆ ಮುದ್ರಿಕೆ ನೀಡಿ ತದನಂತರ ಲಂಕೆಯ ಸುಟ್ಟು ಮತ್ತೆ ವಾನರ ಸೇನೆಯ ಮೂಲಕ ರಾವಣನನ್ನು ವಧಿಸಿ, ರಾಮನ ಪಟ್ಟಾಭಿಷೇಕದವರೆಗೂ ಈ ಹಾಡಿನಲ್ಲಿ ವಿವರಣೆ ನೀಡಿದ್ದಾರೆ. ಈ ಹಾಡಿನ ಕೇಂದ್ರ ಬಿಂದು ಹನುಮಂತನೇ ಆಗಿದ್ದಾನೆ. ವಾದಿರಾಜರು ಸರಳ ಭಾಷೆಯಲ್ಲಿ ಹನುಮಂತನ ಗುಣಗಾನ ಮಾಡಿದ್ದಾರೆ.
ಸಾಹಿತ್ಯದಷ್ಟೇ ಸೊಗಸಾಗಿ ಶ್ರೀ ವಿದ್ಯಾಭೂಷಣರು ಮಧ್ಯಮಾವತಿ ರಾಗದಲ್ಲಿ ಹಾಡಿದ್ದಾರೆ. ಸಾಹಿತ್ಯಕ್ಕೆ ಅನುಗುಣವಾಗಿ ರಾಗದ ಛಾಯೆಗಳನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು ೧೭ ನಿಮಿಷದ ಈ ಹಾಡನ್ನು ಕೇಳಿ ಆನಂದಿಸಿ.
ಹಾಡು ಕೃಪೆ: raaga.com
Yeshtu Sahasavantaಸಾಹಿತ್ಯದಷ್ಟೇ ಸೊಗಸಾಗಿ ಶ್ರೀ ವಿದ್ಯಾಭೂಷಣರು ಮಧ್ಯಮಾವತಿ ರಾಗದಲ್ಲಿ ಹಾಡಿದ್ದಾರೆ. ಸಾಹಿತ್ಯಕ್ಕೆ ಅನುಗುಣವಾಗಿ ರಾಗದ ಛಾಯೆಗಳನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು ೧೭ ನಿಮಿಷದ ಈ ಹಾಡನ್ನು ಕೇಳಿ ಆನಂದಿಸಿ.
ಈ ಹಾಡಿನ ಸಾಹಿತ್ಯ ಹರಿದಾಸ ಸಂಪದದಲ್ಲಿದೆ: http://haridasa.sampada.net/ದಾಸಸಾಹಿತ್ಯ/ಎಷ್ಟು-ಸಾಹಸವಂತ-ನೀನೇ-ಬಲವಂತ/1887
ಹಾಡು ಕೃಪೆ: raaga.com
No comments:
Post a Comment