ಬಹಳ ಸುಲಭವಾಗಿ ತಯಾರಿಸಬಹುದಾದ ತಂಬೂಳಿ! ಬೇಗನೆ ತಯಾರಿಸಬಹುದು ಕೂಡ.
ಬೇಕಾಗುವ ಸಾಮಾಗ್ರಿಗಳು:
೧) ಮೊಸರು : ಬೇಕಾದಷ್ಟು
೨) ಒಗ್ಗರಣೆ ಪದಾರ್ಥಗಳು: ಸಾಸಿವೆ, ಉದ್ದಿನ ಬೇಳೆ, ಬ್ಯಾಡಗಿ ಮೆಣಸು, ಕರಿಬೇವು ಸೊಪ್ಪು.
೩) ಟೋಮಾಟೊ : ಬೇಕಾಗುವಷ್ಟು.
ಮೊದಲು ಬಾಣಲಿಯಲ್ಲಿ ತುಪ್ಪ ಅಥವಾ ಎಣ್ಣೆಯಲ್ಲಿ ಒಗ್ಗರಣೆ ತಯಾರಿಸಿ. ತಯಾರಾದ ಒಗ್ಗರಣೆಗೆ ತುರಿದ ಟೋಮಾಟೊ ಸೇರಿಸಿ. ಟೋಮಾಟೊ ಹದವಾಗುವಷ್ಟು ಫ್ರೈ ಮಾಡಿ. ಒಂದು ತಟ್ಟೆಯಲ್ಲಿ ಮೊಸರು ಮತ್ತು ಅದಕ್ಕೆ ಬೇಕಾಗುವಷ್ಟು ಉಪ್ಪು ಸೇರಿಸಿಡಿ. ನಂತರ ಬಾಣಲಿಯಲ್ಲಿನ ಮಿಶ್ರಣವನ್ನು ಮೊಸರಿನ ತಟ್ಟೆಗೆ ಸೇರಿಸಿ ಚೆನ್ನಾಗಿ ಕಲಸಿ. ರುಚಿಯಾದ ತಂಬೂಳಿ ತಯಾರು! ನಂತರ ಅನ್ನದೊಂದಿಗಿ ಕಲಸಿ ಆನಂದಿಸಿ :-)

ಟೋಮಾಟೊ ತಂಬೂಳಿ |
No comments:
Post a Comment