ಇದು ಆಂಗ್ಲ ಬರಹದ ಕನ್ನಡ ಆವೃತ್ತಿ ಅಂದರೂ ತಪ್ಪಾಗದು! ಕರಾವಳಿಯಲ್ಲಿ ಬಾವಿ/ನದಿ ಬತ್ತಿಹೋಗುತ್ತಿದೆ. ಮನುಷ್ಯರಿಗೆ ಮಾತ್ರಾನಾ, ಪ್ರಾಣಿ-ಪಕ್ಷಿಗಳಿಗೂ ಸಂಕಟ ಆಗುತ್ತೆ! ಸುಮಾರು ೫ ತಿಂಗಳು ಆಗಿರಬೇಕು ಮಳೆ ಬರದೇ. ಹೇಗಾಗಿರಬೇಕು ಭೂಮಿ ನೀವೇ ಯೋಚಿಸಿ. ಏಪ್ರಿಲ್ ಮಧ್ಯಭಾಗದಲ್ಲಿ ಮಳೆ ಶುರು ಆಗುತ್ತಿತ್ತು. ಈ ಬಾರಿ ಮುಂಗಾರಿನ ಸಮಯ ಹತ್ತಿರವಾಗುತ್ತಿದ್ದರೂ ಮಳೆಯ ಸೂಚನೆಯೇ ಇಲ್ಲ :-(. ಕರಾವಳಿ ಭಾಗ ಹೊರತುಪಡಿಸಿ, ಕರ್ನಾಟಕ ಪೂರ್ತಿ ಮಳೆಯದ್ದೇ ಕಾರುಬಾರು! ಆದಷ್ಟು ಬೇಗ ವರುಣ ದೇವ ಕರಾವಳಿ ಪ್ರದೇಶಕ್ಕೆ ಭರ್ಜರಿ ಆಗಮನ ನೀಡಲಿ ಎಂದು ಆಶಿಸೋಣ!
ಈ ಸುಂದರ ನವಿಲು ತೆಂಗಿನ ಮರದ ಮೇಲೆ ಕುಳಿತು ಅತ್ತ ಇತ್ತ ನೋಡುತ್ತಿತ್ತು. ಬಹುಶಃ ಮಳೆ ಸೂಚನೆ ಇದಿಯೋ ಇಲ್ವೋ ಅಂತ ನೋಡಕ್ಕೆ ಇರಬೇಕು!
"ಎಲ್ಲಾ ಮೋಡಗಳು ಬೆಂಗಳೂರಿನಲ್ಲೇ ಟ್ರಾಫಿಕ್ ಜಾಮ್ ಆಗಿ ನಿಂತಿದ್ಯಾ ಹೇಗೆ? ಯಾವ ದಿಕ್ಕಿನಲ್ಲೂ ಮೋಡ ಕಾಣಿಸ್ತಾ ಇಲ್ವಲಪ್ಪಾ! ಯಾವಾಗ ಮಳೆ ಸುರಿಯುತ್ತೋ! ಸೆಖೆ ತಡಿಯಕ್ಕೆ ಆಗ್ತಾ ಇಲ್ಲ" ಅನ್ನೋ ತರಾ ಇತ್ತು ಅದರ ಮನಃಸ್ಥಿತಿ.
No comments:
Post a Comment