Saturday, December 7, 2019

ಬ್ಯಾಕೆಂಡ್ - ೨೮

"Relax Horn"

ಬೆಂಗಳೂರಿನಲ್ಲಿ ಇದು ಒಂತರಾ ಹೊಸ ಟ್ರೆಂಡ್ ಮತ್ತು ಸರಿ ಹೊಂದುತ್ತೆ ಕೂಡಾ. ಬೆಂಗಳೂರಿನ ಟ್ರಾಫಿಕ್ ಮಧ್ಯೆ ಪೂರ್ತಿ ಲೋಡ್ ಇರುವ ಲಾರಿ ಮಧ್ಯೆ ಸಿಕ್ಕಿಹಾಕಿಕೊಂಡರೆ, ಲಾರಿ ಹೊರಡುವ ಮೊದಲೆ ಸಿಗ್ನಲ್ ಹಸಿರಿನಿಂದ ಕೆಂಪಿಗೆ ತಿರುಗಿರುತ್ತದೆ. ಅಷ್ಟೊತ್ತಿಕಾಗಲೇ ಹಲವಾರು ಹಾರ್ನ್ ಹಾಕಿ ಹಾಕಿ ಲಾರಿಗಳಿಗೆ ಹಿಡಿಶಾಪ ಹಾಕುತ್ತಾರೆ. ಇನ್ನೇನು ಏಸ್ ಟ್ರಕ್ಕುಗಳು ಸಣ್ಣ ಗಲ್ಲಿಯಲ್ಲಿ ನುಗ್ಗಿತ್ತಿರುವಾಗ ಅದರಿಂದ ಹೆಚ್ಚು ಪೀಡಿತರಾಗುವವರು ದ್ವಿಚಕ್ರ ವಾಹನದವರು. ಮುಖ್ಯರಸ್ತೆಯ ಟ್ರಾಫಿಕ್ ತಪ್ಪಿಸಲು ಅಡ್ಡದಾರಿ ಹಿಡಿಯೋಣವೆಂದರೆ ಅಲ್ಲೂ ಈ ಸಣ್ಣ ಆನೆಗಳ ಕಾಟ. ಮತ್ತು, ಎಲ್ಲೆಲ್ಲೂ ವೈಟ್-ಟಾಪಿಂಗ್ ಕಾಮಗಾರಿ. ಇರುವ ಸಣ್ಣ ಜಾಗದಲ್ಲಿ ಬೇಗ ಹೋಗೊಣವೆಂದರೆ ಬಸವನಹುಳುವಿನಂತೆ ತೆವಳುತ್ತಾ ಸಾಗುತ್ತಿರುವ ಟ್ರಕ್ಕುಗಳು. ಅವುಗಳನ್ನು ಓವರ್ಟೇಕ್ ಮಾಡಲು ಜಾಗವೇ ಇಲ್ಲ.




ಈ ಎಲ್ಲಾ ಸಂದರ್ಭಗಳಲ್ಲಿ ನಿಯಂತ್ರಣವಿಲ್ಲದೆ ಹಾರ್ನ್ ಹಾಕುವವರಿಗೆ ಇವರು ಮೊದಲೆ ತಣ್ಣಗಾಗಿಸುವ ಕೆಲಸ ಮಾಡುತ್ತಿದ್ದಾರೆ ನೋಡಿ. ನೋಡ್ರಪ್ಪಾ, ನಾವಿರೋದೆ ಹೀಗೆ, ಆರಾಮಾಗಿ ಹಾರ್ನ್ ಹಾಕಿ. ಜಾಗ ಇದ್ರೆ ಕೊಟ್ರೆ ಬಿಡ್ತಿವಿ ಇಲ್ಲಾಂದ್ರೆ ನಮ್ಮಿಂದೇ ಬರ್ತಾ ಇರಿ ಅನ್ನೋ ತರ ಇದೆ. ಇವ್ರೆನೋ ಹೀಗೆ ಹಾಕ್ತಾರೆ ಆದ್ರೆ ಜನ ಕೇಳ್ಬೇಕು ಅಲ್ವಾ. ಅವ್ರು ತಮ್ಮ ಸಿಡುಕನ್ನು ನಿಲ್ಲಿಸುತ್ತಾರೆಯೇ. ಬೇಕಾದ್ರೆ ನಿನ್ನ ಬ್ಯಾಕೆಂಡ್ ಚೇಂಜ್ ಮಾಡ್ಕೋ ಅಂತಾ ಹಿಡಿಶಾಪ ಹಾಕಿ ತಮ್ಮ ದಾರಿ ನೋಡಿಕೊಳ್ಳುತ್ತಾರೆ. ಬ್ಯಾಕೆಂಡ್ ಅಲ್ಲಿ ರಿಲಾಕ್ಸ್ ಬರ್ದಿತ್ತಾರೋ ಇಲ್ವೋ ಆದ್ರೆ ನಮ್ಮ ಟ್ರಕ್ಕುಗಳು ಯಾರು ಏನು ಹೇಳಿದ್ರೂ ಕೇಳ್ತಾರೆಯೇ? ಅವ್ರ ಹಾಡು ಕೇಳ್ಕೋಂಡು ತಮ್ಮದೆ ರಸ್ತೆ ಅನ್ನೋ ತರ ಗಾಡಿ ಓಡಿಸ್ತಾರೆ ಅಷ್ಟೇ!

ಗಲ್ಲಿ ಗಲ್ಲಿ ಏಸ್ ಗಾಡಿಗಳು, ಕಿರಿದಾದ ರಸ್ತೆಯಲ್ಲಿ ಟ್ಯಾಂಕರ್-ಗಳು, ಊಟ ಮಾಡದೇ ಇರೋ ತರ ಎತ್ತಿನಗಾಡಿಯಂತೆ ಸಂಚರಿಸುತ್ತಿರುತ್ತವೆ. ಟ್ಯಾಂಕರ್ ಲಾರಿಗಳು ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ, ರಿಲಾಕ್ಸ್ ಕಣಪ್ಪಾ! ಕುಡಿಯೋ ನೀರು ಕೊಡ್ತೀನಿ ಸುಸ್ತಾದರೆ ಅನ್ನೋ ತರ ಇದೆ. ಒಮ್ಮೆಲೆ ಬ್ರೇಕ್ ಹಾಕಿದರೆ, ನ್ಯೂಟನ್ ಮೂರನೆ ಸೂತ್ರದಂತೆ, ನೀರು ಒಮ್ಮೆಲೆ ಬ್ಯಾಕ್ ಇದ್ದವರಿಗೆ ಬಡಿಯುವುದು ಗ್ಯಾರಂಟಿ. ಅಂದ್ರೆ ಸುಸ್ತಾದರೆ ತಂಪು ನೀರಿನ ಸಿಂಚನವಾಗಿ ರಿಲಾಕ್ಸ್ ಆಗಬಹುದೆಂಬುದು ಅವರ ಊಹೆ. ಅಷ್ಟೇ ಅಲ್ಲ ಮಾರಾಯ್ರೆ! ಟ್ಯಾಂಕರ್ ಲಾರಿಗಳು ಸಾಗುವ ದಾರಿಯಲ್ಲಿ ರಸ್ತೆಯ ಮೇಲೆ ಜಲರೇಖೆಯನ್ನೇ ಹಾಸುತ್ತಾ ಹೋಗುತ್ತಿರುತ್ತಾರೆ. ಕಿರಿದಾದ ರಸ್ತೆಯಲ್ಲಿ ಬಸವನಹುಳದಂತೆ ಚಲಿಸುತ್ತಿದ್ದರೆ, ದ್ವಿಚಕ್ರ ವಾಹನ ಸವಾರರ ತಾಳ್ಮೆಗೂ ಸಂಕಟ ಬರುತ್ತದೆ. ಅವಸರದಲ್ಲಿ ಓವರ್ಟೇಕ್ ಮಾಡಲು ಹೋಗಿ ಮುಂದೆ ವಾಹನ ಅಡ್ಡ ಬಂದಾರೆ ಒಮ್ಮೆಲೇ ಬ್ರೇಕ್ ಒತ್ತಬೇಕಾಗುವುದು ಅನಿವಾರ್ಯ. ಮೊದಲೇ ರಸ್ತೆಯಲ್ಲಿ ಜಲರೇಖೆ, ಅದರೊಂದಿಗೆ ಸಡನ್ ಬ್ರೇಕ್ ಒತ್ತಿದರೆ ಬೈಕ್ ನಿಯಂತ್ರಣ ಕಳೆದುಕೊಂಡು ಜಾರೋದು ಗ್ಯಾರಂಟಿ ನೋಡಿ. ಅದಿಕ್ಕೆ ತಾಳ್ಮೆ ಇಟ್ಕೊಂಡು ರಿಲಾಕ್ಸ್ ಆಗಿ ಗಾಡಿ ಓಡಿಸಿ ಅನ್ನುವ ನೀತಿಪಾಠನೂ ಇರಬಹುದು. ಅಷ್ಟೇ ಅಲ್ಲ ಮತ್ತೊಂದು ಕಾರಣ ಇದೆ. ದಡಿಯ ನೀರಿನ ಲಾರಿಗಳು ಸಣ್ಣ ರಸ್ತೆಯಲ್ಲೇನೋ ಹೋಗುತ್ತವೆ. ಆದರೆ ರಸ್ತೆಯ ಸಾಮರ್ಥ್ಯ ಅಷ್ಟ್ಟ್ಟೋಂದು ಇರುತ್ತದೆಯೇ. ಬಿಬಿಎಂಪಿಯವರ ಕೃಪೆಯಿಂದ ರಸ್ತೆಯಲ್ಲಿ ಡಾಮರ್-ಗಳೇ ಇರುವುದಿಲ್ಲ ಜೊತೆಗೆ ಟ್ಯಾಂಕರ್ ಲಾರಿಗಳು ಸಂಚರಿಸಿದರೆ, ರಸ್ತೆ ತೂತು ಬೀಳೋದು ಗ್ಯಾರಂಟಿ. ಆದ್ದರಿಂದ ತಮ್ಮ ಹಿಂದೆ ಬರುವಾಗ ಮುಂದೆ ಹೊಂಡಗಳು ಇರುವುದರಿಂದ ರಿಲಾಕ್ಸ್ ಆಗಿ ಗಾಡಿ ಓಡಿಸಿರಿ ಎಂಬುವ ಎಚ್ಚರಿಕೆ ಕೂಡಾ ಇರಬಹುದು.

ಯಾವಗಿಂದಾನೋ ತೆಗಿಬೇಕೂಂತಾ ಇದ್ದೆ. ಇವಥು ಕೈಗೆ ಸಿಕ್ತು ನೋಡಣ್ಣಾ. ಟೆಕ್ ಪಾರ್ಕ್ ಪೂರಾ ಹೊಂಡ ಗುಂಡಿಗಳು. ಹೈ-ಟೆಕ್ ಸಿಟಿಯಲ್ಲಿ ಲೋ-ಟೆಕ್ ರೋಡುಗಳು. ಏನ್ ಮೇಂಟೇನ್ ಮಾಡ್ತಾರೋ. ಆಫೀಸ್ ಬಾಳಿ ಹಾಗೆ ಬೈಕ್ ಅನ್ನು ಹೊಂಡಗಳ ಮಧ್ಯ ನಿಭಾಯಿಸಿ ಸುಸ್ತಾಗಿ ಸಿಗ್ನಲ್ ಗಾಗಿ ಕಾಯುವಾಗ ತಕ್ಷಣ ಮೊಬೈಲ್ ತೆಗೆದು ಕ್ಲಿಕ್ ಮಾಡಿದ್ದು. ಅಂದ ಹಾಗೆ ರಿಲಾಕ್ಸ್ ಆಗಲು ನೀರು ಮಾತ್ರ ಕಚೇರಿಗೆ ಹೋಗಿ ಕುಡಿದದ್ದು ನೋಡಿ. ಉಫ್!!

No comments:

Post a Comment

Printfriendly

Related Posts Plugin for WordPress, Blogger...