ಮೂರು ತಿಂಗಳಿನಿಂದ ಬರಿ ಕೆಲಸ ಕೆಲಸ ಎಂದು ಒದ್ದಾಡುತ್ತಿದ್ದ ಗುಂಡ. ಸಾಲದಕ್ಕೆ ಯಾವುದೆ ರಜೆ ಕೂಡ ಇರಲಿಲ್ಲ. ಕೆಲಸ ಹೆಚ್ಚಿದ್ದರಿಂದ ರಜೆಗೆ ಕೂಡಾ ಅನುಮೋದನೆ ಸಿಗುತ್ತಿರಲಿಲ್ಲ. ರಜೆ ಸಿಕ್ಕಿದರೆ ಸಾಕು ಅನ್ನುವಂತಿತ್ತು ಗುಂಡನ ಪರಿಸ್ಥಿತಿ.
ಬಹಳ ದಿನಗಳ ಬಳಿಕ ಲಾಂಗ್ ವಿಕೆಂಡ್ ಸಿಕ್ಕಿತ್ತು. ಗುಂಡ ಕೂಡಾ ಚಿಕ್ಕಮಗಳೂರಿನಲ್ಲಿ ಮೂರು ದಿನ ಉಳಿಯಲು ತಿಂಗಳ ಹಿಂದೆಯೇ ಹೋಟೆಲ್ ಬುಕ್ ಮಾಡಿದ್ದ. ಇನ್ನೆನು ಲಾಂಗ್ ವೀಕೆಂಡ್ ಬಂತು ಅನ್ನುವಷ್ಟರಲ್ಲಿ, ಗುಂಡನ ಮ್ಯಾನೆಜರ್ ಪುಂಡ ಅವನ ಬಳಿ ವಕ್ಕರಿಸಿದ. ಏನಪ್ಪಾ ಲಾಂಗ್ ವೀಕೆಂಡ್ ಕಥೆ ಮುಗಿತು ಅಂದುಕೊಂಡ ಗುಂಡ.
“You see Gunda.. We have long weekend ahead.. I want every employee to take this much needed break. However, you know” ಎನ್ನುತ್ತಾ ಮ್ಯಾನೆಜರ್ ಅಲ್ಪವಿರಾಮ ನೀಡಿದರು.
"ಮುಗಿತು ಕಥೆ!" ಅಂತಾ ಮನಸ್ಸಿನಲ್ಲಿ ತಳಮಳಗೊಂಡ ಗುಂಡ.
ಮ್ಯಾನೇಜರ್ ಮಾತು ಮುಂದುವರೆಸುತ್ತಾ “ You know we have customer commitment as well.. We have less people. So I request you to support in this situation and help in company’s business”
ಗುಂಡನಿಗೆ ಕೋಪ ನೆತ್ತಿಗೆರಿತು. ಆದರೂ ತಾಳ್ಮೆ ಕಾಯ್ದುಕೊಂಡು ಧೈರ್ಯದಿಂದ ಮಾರುತ್ತರ ನೀಡಿದ.
“Punda! I have already planned for long weekend. I have already worked for most of weekend from past 3 months.. Hence I would request to you to nominate people who have already taken breaks so far”
“OK.. at least can you keep your laptop with you so that in case needed in emergency we can communicate?” ಪುಂಡ ಮತ್ತೆ ಪುಂಡಾಟಕ್ಕೆ ಕೈ ಹಾಕಿದ.
“I am going to a remote location where even mobile network is unreachable. This time I will not be able to support.. Sorry I am already exhausted and need a refresh” ಎನ್ನುತ್ತಾ ಗುಂಡ ಧೈರ್ಯದಿಂದ ಕೈಚೆಲ್ಲಿದ.
“Strange! In this modern era, there are places where mobile is inaccessible. Ok.. Let me look for someone else.” ಎಂದು ವಕ್ರ ಮುಖ ಹಾಕುತ್ತಾ ಪುಂಡ ಮುಂದಕ್ಕೆ ನಡೆದ.
"ಯಾರು ಬಕ್ರ ಸಿಗ್ಲಿಲ್ಲ ಅಂತಾ ನನಗೆ ಸಿಕ್ಕಿಸಲಿಕ್ಕೆ ಹೊಗ್ತಾನೆ ಪುಂಡ ನನ್ ಮಗ. ಕೊನೆಗೆ appraisal ಸಮಯದಲ್ಲಿ ತನ್ನ ಮೂಸುವವರಿಗೆ ಮಾತ್ರ ಕಾಸು ಕೊಡೋದು ಬೋಳಿ ಮಗ. ಕೆಲಸ ಮಾಡಕ್ಕೆ ಯಾರು ಇಲ್ಲ ಅಂತ ಪದೆಪದೆ ನನ್ನ ಪ್ಲಾನ್ ಹಾಳ್ ಮಾಡೊದು ಚಾಳಿ ಆಗಿದೆ ಇವನಿಗೆ" ಎಂದು ಮನಸ್ಸಿನಲ್ಲೆ ಬೈಕೊಳುತ್ತ ಪ್ರವಾಸಕ್ಕೆ ಅಣಿಯಾದ ಗುಂಡ.
ನಾಲ್ಕು ದಿನ ಚಿಕ್ಕಮಗಳೂರಿನಲ್ಲಿ ಬಹಳ ಉಲ್ಲಾಸದಿಂದ ಕಾಲ ಕಳೆದ ಗುಂಡ. ಪಶ್ಚಿಮ ಘಟ್ಟವನ್ನು ಚುಂಬಿಸುವ ದಟ್ಟ ಮೋಡಗಳು, ಎಲ್ಲೆಲ್ಲೂ ನೋಡಿದರೂ ಹಸಿರು, ಅದರ ಮಧ್ಯೆ ಇರುವ ನಾಟಿ ಮಾಡಿದ ಭತ್ತದ ಗದ್ದೆಗಳು, ಉತ್ಸಾಹದಿಂದ ಚಿಮ್ಮುವ ಜಲಪಾತಗಳು, ಆಗಾಗ ನಡೆವ ಮಳೆ ಮೋಡದ ಆಟ, ಒಟ್ಟಿನಲ್ಲಿ ಸಮಯ ಹೋಗಿದ್ದೇ ತಿಳಿಯಲಿಲ್ಲ. ಮಳೆಯೂ ಕಡಿಮೆ ಇದ್ದರಿಂದ ಹಲವು ಜಾಗಗಳನ್ನು ನೋಡಲು ಸಾಧ್ಯವಾಯಿತು.
ಮೊಬೈಲ್ ಅನ್ನು Airplane mode ಅಲ್ಲಿ ಇಟ್ಟು ಕೇವಲ ಚಿತ್ರ ತೆಗೆಯಲು ಉಪಯೋಗಿಸುತ್ತಿದ್ದ ಗುಂಡ. ಯಾವುದೇ Status ಹಾಕುವುದಾಗಲಿ, online-update ಮಾಡುವುದಾಗಲಿ ಮಾಡುತ್ತಿರಲಿಲ್ಲ. ಮ್ಯಾಪ್ -ಗೆ ಮಡದಿಯ ಮೊಬೈಲ್ ಉಪಯೋಗಿಸುತ್ತಿದ್ದ. ಕಂಪನಿಯ ಕಾಟವೇ ಬೇಡವೆಂದು ಮೊಬೈಲ್ ಆದಷ್ಟು ಬದಿಗಿಟ್ಟಿದ್ದ.
ಕೊನೆಯ ದಿನ ಗುಂಡನಿಗೆ ಬಹಳ ಬೇಸರವಾಗಿತ್ತು. ಮತ್ತೆ ಬೆಂಗಳೂರಿಗೆ ಹೋಗಬೇಕಲ್ವಾ ಜೊತೆಗೆ ಅದೇ ಜನರ ಮುಖ ನೋಡಬೇಕು ಬೇರೆ :-(. ಬೆಳಗ್ಗೆ ಬೇಗ ಹೊರಟು ನೆಲಮಂಗಲಕ್ಕೆ ಆದಷ್ಟು ಬೇಗ ತಲುಪಿದ. ಅಲ್ಲಿಂದಲೇ ಶುರು ಆಯ್ತು ಬೆಂಗಳೂರಿನ trademark ವಾಹನ ದಟ್ಟಣೆ. ಜಾಲಹಳ್ಳಿ ಮೇಲ್ಸೇತುವೆ ಸಂಪೂರ್ಣ ಜಾಮ್ ಆಗಿತ್ತು. ಬಹುಶಃ ಅಲ್ಲಿರುವ ಮೆಟ್ರೋ ಸುಮಾರು ೩ ಟ್ರಿಪ್ ಮುಗಿಸಿದರೂ, ಗುಂಡನ ಕಾರು ನಿಂತ ಜಾಗದಲ್ಲೆ ಸ್ಥಿರವಾಗಿತ್ತು! ಅದನ್ನು ದಾಟಲಿಕ್ಕೆ ಸುಮಾರು ಒಂದೂವರೆ ತಾಸು ಹಿಡಿದಿರಬೇಕು. ಸುಮಾರು ೩ ತಾಸು ಬಳಿಕೆ ಸೂರು ಸೇರಿದ ಗುಂಡ.
“ಆಲ್ವೇ ಚಿಕ್ಕಮಗಳೂರಿನಲ್ಲಿ ಅಷ್ಟು ತಿರುಗಾಡಿದರೂ ಇಷ್ಟು ಸುಸ್ತಾಗಿರಲಿಲ್ಲ. ಈ ಬೆಂಗಳೂರಿನ ಜ್ಯಾಮ್ ಇಂದ ಇರೋ ಒಳ್ಳೆ ಮೂಡ್ ಕೂಡಾ ಹಾಳಾಯಿತು ನೋಡು. ಹಾಸನದಿಂದ ನೆಲಮಂಗಲ ಬರಲು ಕೇವಲ ೨ ತಾಸು ಹಿಡಿಯಿತು. ಅಲ್ಲಿಂದ ಮನೆಗೆ ಬರಲು ೩ ತಾಸು ನೋಡು. ನಾಳೆ ಬೇರೆ ನಾಲಾಯಕ್ ಆಫೀಸ್ ಬೇರೆ ಹೋಗ್ಬೇಕು” ಎಂದು ಮಡದಿ ಬಳಿ ತನ್ನ ಗೋಳು ಹೇಳಿಕೊಂಡ.
“ಏನ್ ಮಾಡೊಡು ಹೇಳಿ. ನಮ್ಮ ಟ್ಯಾಕ್ಸ್ ಮಾತ್ರ ಬೇಕು ಎಲ್ಲರಿಗೂ. ಅಭಿವೃದ್ಧಿ ಮಾತ್ರ ಬೇಡ. ಈ ರಾಜಕಾರಣಿಗಳ ದುರಾಸೆಗೆ ಕೊನೆಯೇ ಇಲ್ಲ ನೋಡಿ. ಬಿಡಿ ಏನ್ ಮಾಡೊದು. ನಾಳೆ ಬೇರೆ ಕೆಲಸ ಮತ್ತೆ ಶುರು ಮಾಡ್ಬೇಕು. ಸುಮ್ಮನ್ನೆ ತಲೆ ಕೆಡಿಸ್ಕೋ ಬೇಡಿ. ಬಿಸಿ ಬಿಸಿ ಟೀ ಮಾಡ್ಕೊಂ ದು ಬರ್ತೀನಿ ಆಮೇಲೆ ನಿದ್ದೆ ಮಾಡಿ” ಎಂದು ಸಮಾಧಾನಿಸಿ ಅಡುಗೆ ಮನೆ ಕಡೆ ನಡೆದಳು.
ಮಾರನೆ ದಿನ ಎಂದಿನಂತೆ ಆಫೀಸ್ ನಡೆದ ಗುಂಡ. ಪುಂಡ ಅವನ ಬಳಿ ಮಾತನಾಡಲೇ ಇಲ್ಲ. ಗುಂಡನಿಗೂ ಇದು ಅರ್ಥವಾಯಿತು.
ಮೂರನೇ ದಿನ ಗುಂಡನ ಬಳಿ ಪುಂಡ ಬಂದು “Hope you had great time gunda! We had lot of issues in your area. Fortunately, your colleagues were there to rescue even while vacationing. We didn’t want to disturb you” ಎಂದನು.
ಮಾತು ಮತ್ತೆ ಮುಂದುವರೆಸುತ್ತಾ “ This week we have deployment for esteemed customer 'Prachanda' which we want to ensure seamless activity. Hope you are available for this activity. Anyway you must have had great refresh during long weekend” ಎಂದು ಪುಂಡ ಅಣಕಿಸಿ ಮಾತನಾಡಿದನು.
ಗುಂಡನಿಗೆ ಮ್ಯಾನೆಜರ್ ಯಾಕೆ ಬಂದರು ಎಂದು ಅರ್ಥ ಆಯಿತು. ಅಣಕದಿಂದ ಅವನು ಸಿಟ್ಟು ಕೂಡಾ ಏರಿತು. ಆದರೂ ತಾಳ್ಮೆ ಕಳೆದುಕೊಳ್ಳದೆ ಉತ್ತರಿಸುತ್ತಾ “ I know Punda. Most of the issues were in their respective areas which I have already checked via emails. Please do not point fingers at me. And also my refresh is already wiped out because of Bengaluru traffic during return journey. So I need to ‘Refresh my Refresh’ again. Sorry I cant work for weekend for couple more months. You can nominate someone who worked vastly in the customer area than me” ಎಂದು ಖಡಕ್ ಉತ್ತರ ನೀಡಿದನು.
ಪುಂಡನಿಗೆ ಏನು ಹೇಳುವುದೇ ತಿಳಿಯಲಿಲ್ಲ. ಏನು ಹೇಳದೇ ಮುಂದೆ ನಡೆದನು. ಗುಂಡನು ಆಚೆ ಈಚೆ ನೋಡದೆ ತನ್ನ ಕೆಲಸ ಮುಂಡುವರೆಸಿದನು. “ವರ್ಕ್ ಫ್ರಮ್ ಹೋಮ್ ಕೊಡಿ ಅಂದ್ರೆ ರಾಜಕಾರಣಿಗಲು ಬಿಡಲ್ಲ. ಟ್ರಾಫಿಕ್ ಜ್ಯಾಮ್ ಅನುಭವಿಸಿ, ಕಷ್ಟ ಪಡಿ, ಟ್ಯಾಕ್ಸ್ ಕಟ್ಟಿ. ನಿಮ್ ಟ್ಯಾಕ್ಸ್ ನಾವು ತಿಂದು ಎಂಜಾಯ್ ಮಾಡ್ತೀವಿ ಅನ್ನೋ ರಾಜಾಕಾರಣಿಗಳು. ಏನಪ್ಪಾ ಈ ದೇಶದ ಕಥೆ?!” ಎಂದು ಮನಸ್ಸಿನಲ್ಲಿ ಎಣಿಸುತ್ತಾ ‘ಈ ದೇಶದ್ ಕಥೆ ಇಷ್ಟೇ ಕಣಮ್ಮೊ” ಹಾಡನ್ನು ಪ್ಲೇ ಮಾಡಿ, ಕೇಳಲು ಶುರು ಮಾಡಿದ ಗುಂಡ!