Friday, July 17, 2026

Cassata शायरी, ಮುಂಗಾರು ಗೋಳು, el-nino ಇಂದ ಎಲ್ಲಾ ಹಾಳು

Monsoon ಮಂಗಮಾಯ 

ಸೆಖೆ आगया 🥵

Cloud भाग गया


ಈ ತಲೆಬರಹಕ್ಕೆ ಒಂದು ಕಾರಣವಿದೆ! Cassata ಮೂರು ವಿಧದ ice-cream ಒಟ್ಟು ಜೋಡಿಸಿ ತಯಾರಿಸುತ್ತಾರೆ. ಅದೇ ರೀತಿಯಲ್ಲಿ ನಾನು ಕೂಡಾ ಮೂರು ಭಾಷೆಯನ್ನು ಒಗ್ಗೂಡಿಸಿ ಪ್ರಯೋಗಿಸಿ ಬರೆದಿದ್ದೇನೆ. ಒಂದು ವಿಭಿನ್ನ ಪ್ರಯೋಗ ಅನ್ನಬಹುದು!


ಕರ್ನಾಟಕದ ಸಧ್ಯದ ಮುಂಗಾರಿನ ಪರಿಸ್ಥಿತಿ ಯಾರಿಗೂ ಬೇಡ. El-nino is creating drought like situation. ಏನು ಮಾಡೋದು ಹೇಳಿ? ಪ್ರಕೃತಿ ಮುಂದೆ ನಾವ್ ಯಾವ ಲೆಕ್ಕ. ಎಲ್ಲೂ ಮಳೆ ಇಲ್ಲ ಮಾರಾಯ್ರೆ. ಆರ್ದ್ರಾ ನಕ್ಷತ್ರದಲ್ಲಿ ವಾತಾವರಣದ ಆರ್ದ್ರತೆಯೇ ಮಾಯವಾಗಿದೆ! ಆರ್ದ್ರಾ ನಕ್ಷತ್ರದ ಆಸೆ full ಹುಸಿ ಆಯ್ತು ನೋಡಿ! ಆರ್ದ್ರಾ ನಕ್ಷತ್ರ ಮಳೆ ಅಂದರೆ ಕೊಡೆ ಹಿಡಿದುಕೊಂಡು ಕೂಡಾ ಹೊರಗೆ ಹೋಗಕ್ಕಾಗಲ್ಲ ಕರಾವಳಿಯಲ್ಲಿ! ಅಷ್ಟೊಂದು ಮಳೆ. ಶಾಲೆಗೆ ರಜೆ ಸಿಗುವುದೇ ಈ ನಕ್ಷತ್ರದಲ್ಲಿ. ಈ ಬಾರಿ ಮುಂಗಾರು ಪೂರ್ತಿ ಯಾಮಾರಿಸಿ ಬಿಟ್ಟಿದೆ! ಪುನರ್ವಸು ನಕ್ಷತ್ರ full ಚಪ್ಪೆ. ಇನ್ನು ಪುಷ್ಯ ನಕ್ಷತ್ರ ಏನಾಗುತ್ತೊ ತಿಳಿತಿಲ್ಲ! ನಾಗದೇವರ ಆಶ್ಲೇಷಾ ನಕ್ಷತ್ರವೆ ನಮಗೆ ಗತಿ. ಏಕೆಂದರೆ ನಾಗರಪಂಚಮಿಯಂದು ಮಳೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ! 

ಮಂಗಳೂರು IMD ಮಾಪನ ಕಷ್ಟದಲ್ಲಿ 1000mm ಗಡಿ ದಾಟಿದೆ. ಸುಮಾರು ದಿನದಿಂದ ಅಲ್ಲೇ stuck ಆಗಿದೆ ಕೂಡಾ! ಇಷ್ಟು ಹೊತ್ತಿಗೆ 2000mm ಹತ್ರ ಬಾರಬೇಕಿತ್ತು. ಸುಮಾರು 53% deficit ಅಂತೆ. el-nino ಮುಗಿಯಲು ಇನ್ನೂ 1.5 ವರ್ಷ ಕಾಯಬೇಕಾಗಬಹುದು. ಅಲ್ಲಿಯವರೆಗೆ ಮಳೆಯ ಮೂಡ್ ಹೇಳುವುದು ಬಹಳ ಕಷ್ಟ. ಪಶ್ಚಿಮ ಘಟ್ಟಗಳು ಕೂಡಾ ಮಳೆಯಿಲ್ಲದೆ ಸೊರಗುತ್ತಿವೆ. ಕಾವೇರಿ ದಿನದಿಂದ ದಿನಕ್ಕೆ ಆವಿಯಾಗುತ್ತಾ ಬರುತ್ತಿದೆ. ಹೀಗಾದರೆ ಬೆಂಗಳೂರಿನ ನೀರಿನ ಅಭಾವ Novemberಯಿಂದಾನೆ ಶುರು ಆಗೋದು fix! ಹೇಳೋಕ್ಕೆ ಸುಮಾರು ಇದೆ ಆದರೆ ಬೇಸರವಾಗುತ್ತೆ. 

ನೋಡಿ ಬೆಂಗಳೂರಿನ ವಾತಾವರಣ ದಕ್ಷಿಣಾಯನ ಶುರು ಆಗೋ ಹೊತ್ತಿನಲ್ಲಿ. ಮುಂಜಾನೆ Sun shining brightly. Fog ಕೂಡಾ ಇಲ್ಲ. ದಟ್ಟ ಮೋಡಗಳು ಪಶ್ಚಿಮ ಘಟ್ಟದಲ್ಲಿ ಭೋರ್ಗರೆದು ಉಳಿದ moisture ಅನ್ನು ಬಯಲು ಸೀಮೆಗೆ ಚಿಮ್ಮಿಸುತ್ತಿದ್ದವು. ಹೊರಗೆ ಕಾಡು ಕತ್ತಲೆ ಜೊತೆಗೆ ಜೋರಾಗಿ ಬೀಸುವ ಚಳಿ ಗಾಳಿ. ಮನೆ ಒಳಗೆ ಬೆಚ್ಚನೆ ಕಾಫಿ ಕುಡಿದರೆ, ಹೊರಗಡೆ ಬಿಸಿ ಬೀಸಿ chats ಮತ್ತು ಬಜ್ಜಿ ಸವಿಯೋ ಸಮಯ ಇದು. ಆದರೆ ಈ ಬಾರಿ ಎಲ್ಲಾ ಉಲ್ಟಾ-ಪಲ್ಟ. ಈಗ ಮತ್ತೆ ಬೇಸಿಗೆಯಂತೆ ice-cream, juice ಕುಡಿಯುವ ಸ್ಥಿತಿ ಬಂದಿದೆ. ಜೊತೆಗೆ fan, AC ಕೂಡಾ ಜೋರಾಗಿ ತಿರುಗುತ್ತಿದೆ! ಕರೆಂಟ್ ತಯಾರಿಸಲು ಕೂಡಾ ಜೋಗದಲ್ಲಿ ನೀರಿಲ್ಲ. "ये क्या हो गया भाई?" ?


ಬೆಂಗಳೂರಿನ ಆಗಸ ನೋಡಿ ಸಂಪೂರ್ಣ ನೀಲಿ. "बरसो रे मेघा मेघा" ಹಾಡೋಕೆ  ಮೇಘಗಳೆ ಇಲ್ಲ. "ಮೇಘ ಬಂತು ಮೇಘ" ಅನ್ನೋಕೆ ಎಲ್ಲವೂ ಕರಗಿ ಹೋಗಿದೆ. ಆಗೊಮ್ಮೆ ಈಗೊಮ್ಮೆ ಆಸೆ ಮುಟ್ಟಿಸಲು ತೇಲಿ ಬರುವ ಮೋಡಗಳು ನೋಡ ನೋಡತ್ತಿದ್ದಂತೆ ದೂರದ ಬಾನಿನಲ್ಲಿ ಮರೆಯಾಗುತ್ತವೆ. ಮಾಯದಂತ ಮಳೆ ಸುರಿಯಲು ಪ್ರಕೃತಿಯೇ ಏನಾದರೂ ಜಾದೂ ಮಾಡಬೇಕು. Bengaluru skies are blantantly blue during peak monsoon July. There are no clouds even to attempt cloud seeding. The situation has deteriorated significantly. Monsoon magic is absconding. Only magic can bring rains. Kya chal raha hai bhaarat mein??!! Didn't we heed the El Niño forecasts? The dense concrete jungle of city is choking on top of this out of blue summer atmosphere. The vigorous monsoon is replaced by vigorous summer. The eternal horizon lies before you, not a speck of cloud in sight.




ಎರಡು ವಾರದ ಹಿಂದಷ್ಟೇ ಮೋಡಗಳಿಂದ ತುಂಬಿ ತುಳುಕುತ್ತಿದ್ದ ಆಕಾಶ ಆಗಲೇ ಬರಡಾಗಿದೆ. ಜೂನ್ ಪ್ರಾರಂಭದಲ್ಲೇ ಕುಂಟುತ್ತಾ ಸಾಗಿದ್ದ ಮುಂಗಾರು ಸ್ವಲ್ಪ ಆಸೆ ಚಿಗುರಿಸಿತ್ತು. ಈಗ ಮತ್ತೆ ಮಂಕಾಗಿ ಎಲ್ಲರನ್ನು ಆತಂಕಕ್ಕೀಡುಮಾಡಿದೆ. ಬಹುಶಃ ಈಗ ಕರಾವಳಿಯವರು "ಮಾಯದಂತ ಬೇಸಿಗೆ ಬಂತಣ್ಣ ಮಳೆಗಾಲದ ಇಳೆಗೆ" ಎಂದು ಹಾಡನ್ನು ಮಾರ್ಪಾಡು ಮಾಡಬಹುದು! ಹೇಗೆ ಮುಂದುವರೆದರೆ ಕಾವೇರಿ ನದಿ ನೀರಿಗೆ ತಮಿಳುನಾಡು - ಕರ್ನಾಟಕ ಕಾಳಗ fix!



ಮಕ್ಕಳ ಶಾಲೆ ಬಳಿ ತೆಗೆದ ಚಿತ್ರ. ತೋಟಕ್ಕೆ ಬಿಡಯ್ಯಾ, ಯಾವುದಕ್ಕೂ ನೀರಿಲ್ಲ ಬಾರಯ್ಯ ಅಂತಾ ದಮ್ಮಯ್ಯ ಹಾಕುವಂತಾಗಿದೆ


ಇನ್ನೊಂದು ವಾರ ಅಂತೆ. ಆಮೇಲೆ ಮಳೆ ಮತ್ತೆ ಪ್ರಾರಂಭವಾಗಬಹುದು ಅಂತ ಹೇಳಲಾಗುತ್ತಿದೆ. ಅದು ನಿಜವಾಗಲಿ ಎಂದು ಪ್ರಾರ್ಥಿಸೋಣ. ಸಧ್ಯಕ್ಕೆ ಒಣಹವೆಯೇ ನಮಗೆ ಗತಿ :-(. ಬೇರೆ weather modelಗಳು August ಮಧ್ಯದ ವರೆಗೆ ಇದೇ ಪರಿಸ್ಥಿತಿ ಅನ್ನುತ್ತಿವೆ. ಇದಂತೂ ಭಯಾನಕ ಸುದ್ದಿಯೇ! ಆಗಸ್ಟ್  ಮಧ್ಯ ಭಾಗದಿಂದ ಹಿಂದೂ ಮಹಾಸಾಗರದಲ್ಲಿ postive IOD ಸೃಷ್ಟಿಯಾಗಿ ಮತ್ತೆ ಮಳೆ ಬರಬಹುದೆಂಬ ಆಶೆ. ಆ ಆಸೆ ಹುಸಿಯಾಗದಿರಲಿ.  

ಮುಗಿಸುವ ಮುನ್ನ  ಒಂದು ಶಾಯರಿ . ಏನೋ ತಮಾಷೆ ಅನ್ನಬಹುದು ಆದರೆ ಇದೊಂದು poignant moment ಅಂದರೂ ತಪ್ಪಾಗಲ್ಲ :-(


el-nino ಬಂತು

ಗಾಳಿ-ಮೋಡಗಳು ಓಡಿಹೋಯಿತು 

ಮಳೆ ಮರೆಯಾಯಿತು 

ಬೇಸಿಗೆ ಮತ್ತೆ ಶುರು ಆಯಿತು!


UPDATE!!! UPDATE!!!

ನಾನು blog-ನಲ್ಲಿ ಗೋಳು ಹೊಯ್ಕೊಂಡಿದ್ದೇ ತಡ ಮತ್ತೆ ವಕ್ಕರಿಸಿದವು ಮೋಡಗಳು! ರಸ್ತೆಯ ಹೊಂಡ ಮುಚ್ಚುವ ಮಹಾನಗರ ಪಾಲಿಕೆಯ patch work-ನಂತೆ, ನಾನಿದ್ದೀನಿ ಅಂತಾ ತೋರಿಕೆಯ ನಾಲ್ಕು ಹನಿ ಸುರಿದು ಹೋಯಿತು ನೋಡಿ. ಬಂತಲ್ಲ ಅನ್ನೋದೆ ಸಮಾಧಾನ! After weeks of sparse monsoon rain, there is finally a glimmer of hope today! ಎಷ್ಟು ದಿನದ ಈ ನಾಟಕ ಅನ್ನೋದು ಮುಂದಿನ ದಿನಗಳೇ ಹೇಳಬೇಕು! 



ಕರಾವಳಿಯಲ್ಲೂ ಮಳೆ ಪ್ರಾರಂಭಿವಾಗಿದೆ ಅಂತಾ ಕೇಳೋಕೆ ಬಹಳ ಖುಷಿಯಾಗಿದೆ ಕೂಡಾ! ಮುಂಗಾರನ್ನು ಅವಮಾನಿಸಿ ಬರೆದಿದ್ದಕ್ಕೆ ಅದಕ್ಕೆ full raise ಆಗಿದೆ ಅನ್ಸುತ್ತೆ 😂. ಬೇಕಾಬಿಟ್ಟಿ ಮಳೆ ಸುರಿಸಿಯೇ ಬಿಡ್ತು. IMD ಇಂದ ಯಾವ warning ಕೂಡಾ ಇರಲಿಲ್ಲ. ಧೋ ಎಂದು ಮಳೆ ಸುರಿದಿದೆ. ಅಂಕೋಲಾದಲ್ಲಿ ೨೭೦mm ಸುರಿದಿದೆ ಮಾರ್ರೆ 😂. Quirky monsoon ಅಥವಾ ಪಿರ್ಕಿ monsoon, ಏನಾದ್ರೂ ಹೆಸರು ಕೊಡಿ. ಒಟ್ನಲ್ಲಿ ಮಳೆ ಅಂತೂ ಮತ್ತೆ ಶುರುವಾಯಿತು. ಅದಕ್ಕೆ ಹೇಳೋದು IMD ಅವ್ರು warning ಕೊಡೋದು ನಿಲ್ಲಿಸಬೇಕು. ಕೊಟ್ಟ ತಕ್ಷಣ ಬಿಸಿಲು ವಕ್ಕರಿಸಿಬಿಡುತ್ತೆ ನೋಡಿ! What a turn around man was this monsoon blast!

No comments:

Post a Comment

Printfriendly

Related Posts Plugin for WordPress, Blogger...