"ದುಡ್ಡು ಮಾಡೋ ಬೇವರ್ಸಿ..
ನಿಂಗು ಸಿಗ್ತಾಳೆ ಊರ್ವಶಿ"
ಹೌದು ದುಡಿಯಿರಿ ದುಡ್ಡು ಮಾಡಿ ಆದರೆ ಊರ್ವಶಿ ಸಿಗ್ಲಿಕ್ಕೆ ಬೇಡ. ನಿಮ್ಮ ಗ್ರಹಚಾರ ಕೆಟ್ರೆ ಊರ್ವಶಿ ನಿಮ್ಮ ಐಶ್ವರ್ಯನಾ ಉಡಿಸ್ ಮಾಡಿದ್ರೂ ಮಾಡಬಹುದು. ಬಹುಷಃ ಬೇವರ್ಸಿ ಅನ್ನೋ ಪದ ಸೋಮಾರಿಗಳಿಗೆ ಬಳಸಿರಬಹುದು ಅಥವಾ ಆಫೀಸ್ ರಗಳೆಗಳ ಮಧ್ಯೆ ಕೆಲಸವನ್ನು ಕಡೆಗಳಿಸುವವರಿಗೆ ವಿವರಿಸಿರಬಹುದು. ಇಲ್ಲಿ ಊರ್ವಶಿ ಅನ್ನೋದು ಅಲಂಕಾರಿಕ ಅನ್ನೋತರ ಕೂಡಾ ಇರಬಹುದು, ಎಲ್ಲ ಒಳ್ಳೆಯದು ಸಿಗುತ್ತೆ ಅಂತಾ!
"ತೋರಿಕೆಯ ಜೀವನ" ಅನ್ನೋ ಜಗತ್ತು ಈಗ. ಆದರೆ ನೀವು ಹಾಗೆ ಆಗಬೇಡಿ. ದುಡ್ಡು ನಿಮ್ಮ ಫ್ರೀಡಂ ಗೋಸ್ಕರ ಮಾಡಿ. ನಿಮ್ಮ ರಕ್ಷಣೆ ಗೋಸ್ಕರ ಮಾಡಿ. ದುಡ್ಡು ಇಲ್ಲದೆ ಈ ದೇಶದಲ್ಲಿ ಯಾವ ಕೆಲಸವೂ ನಡೆಯಲ್ಲ. ಕೃಷ್ಣನ ಅವತಾರ ಕೂಡ ನಮ್ಮ ದೇಶವನ್ನು ರಕ್ಷಿಸಲೊಲ್ಲ. ಪ್ರಳಯ ಬರಬೇಕು ಅಷ್ಟೇ. ತೆಂಗಿನಕಾಯಿ ಒಡೆದ್ರೆ, ಬಾವಿ ತರ ತೂತು ಬೀಳೋ ರೋಡ್ ಮಾಡ್ತಾರೆ. ಅಷ್ಟೊಂದು ಭ್ರಷ್ಟಾಚಾರ. ಬಿಟ್ಟಿ ದುಡ್ಡು ತಿನ್ನೋ ಸರ್ಕಾರಿ ನೌಕರರು, ರಾಜಕಾರಣಿಗೋಸ್ಕರನಾದ್ರೂ ದುಡ್ಡು ಮಾಡಬೇಕು ನೋಡಿ. ಹಣ ಸಿಗದಿದ್ದರೂ "ಕೊಡುವವನು ನೀನು, ಕೊಂಬುವವನು ನಾನು" ಅಂತ ದಾಸರು ಹೇಳಿದಂತೆ ಭಗವಂತನನ್ನು ನೆನೆದು ಪ್ರಯತ್ನವನ್ನು ಮುಂದುವರೆಸಬೇಕು.
"ವಿಶ್ವಾಸದಲ್ಲೇ ವಿಷ ಇದೆ.."
ಮೇಲ್ಗಡೆ ಕೂಡ ಬರೆದಿದ್ದಾರೆ. ಓಹೋ, ವಿಶ್ವಾಸದಲ್ಲಿ ವಿಷ ಇದೆ, ಅದಕ್ಕೆ ಊರ್ವಶಿ ಐಶ್ವರ್ಯ ಕಥೆ ಹೇಳಿದ್ದು ನಾನು. ಅದನ್ನು ಕೂಡಾ parallel ಆಗಿ ಬರೆದಿದ್ದಾರೆ. ಅತಿಯಾದ ವಿಶ್ವಾದ ಅನ್ನೋದು ದೊಡ್ಡ ಗಂಡಾಂತರ ನೋಡಿ.
ಡಿ-ಮಾರ್ಟ್ ಪಕ್ಕ ಕಂಡ ಆಟೋ ಬರಹ. ಡಿ-ಮಾರ್ಟ್ ಕೂಡ ಇರೋ ದುಡ್ಡು ಉಳಿಸಲು ಒಂದು ದಾರಿ ಅಂದರೆ ತಪ್ಪಾಗದು. ದುಡ್ಡು ಜಾಸ್ತಿ ದುಡಿದರೆ cheap cheap ಅಂತಾ D-mart ಅಂತಾ ಅಂಗಡಿಯ ನೂಕು ನುಗ್ಗಲಿನಲ್ಲಿ ಕಷ್ಟಪಡೋದು ತಪ್ಪುತ್ತೆ. ನೀವೇ ವಿಚಾರಿಸಿ ನೋಡಿ ಒಮ್ಮೆ!

No comments:
Post a Comment