Monday, December 3, 2018

ಹಾಗೆ ಸುಮ್ಮನೆ - ಕೆರೆಯ ನೀರನು ಕೆರೆಗೆ ಚೆಲ್ಲಿ

ಇದು ಪಕ್ಕದ ರಾಚೇನಹಳ್ಳಿ ಕೆರೆಯಲ್ಲಿ ತೆಗೆದ ಚಿತ್ರ. "ಏ ಪಂಪ್ ಮಾಡೋ" ಗಿಡಗಳಿಗೆ ನೀರುಣಿಸಲು ಅಲ್ಲಿದ್ದ ಮಾಲಿ ತನ್ನ ಸಹೋದ್ಯೋಗಿಗೆ ಸನ್ನೆ ಮಾಡಿದ. ಪಂಪ್ ಚಾಲು ಮಾಡಿದ್ದೆ ತಡ, ಇಲ್ಲಿರುವ ಪೈಪಿನಿಂದ ಒಂದೇ ಸಮನೆ ನೀರು ಬುಸುಗುಟ್ಟಲು ಪ್ರಾರಂಭವಾಯಿತು. ಇದರಿಂದ ಬಂದ ಜಲಧಾರೆ ಸೀದಾ ಕೆರೆಗೆ ಚೆಲ್ಲುತ್ತಿತ್ತು ಎನ್ನಿ. ಪೈಪ್ ಏನೋ ತೊಂದರೆ ಇರಬೇಕು ಅನ್ಸುತ್ತೆ ಅದಿಕ್ಕೆ ನೀರೆಲ್ಲಾ ಕೆರೆಗೆ ವಾಪಾಸ್ ಹೋಗುತ್ತಿತ್ತು ಆದ್ದರಿಂದ ವೇಸ್ಟ್ ವೇಸ್ಟ್ ಅಂತಾ ಬೊಬ್ಬೆ ಹೊಡೆಯಲು ಆಸ್ಪದವಿಲ್ಲ. ಅಂದ ಹಾಗೆ ಇಲ್ಲಿ ಬೋರ್-ವೆಲ್ ಅಗತ್ಯವಿಲ್ಲ, ಕೆರೆ ನೀರನ್ನೇ ಬಳಸಿರಬೇಕು ಎಂಬುದು ನನ್ನ ಊಹೆ. ಅದಕ್ಕೆ  ಸರಿಯಾಗಿ ತಲೆಬರಹ ಹೊಂದಿಸಿದ್ದೇನೆ.




ಸ್ವಲ್ಪ ಸಮಯದ ಬಳಿಕ ತಿಳಿಯಿತು. ಇದೆ ಪೈಪಿನಿಂದ ಕೆರೆಯ ನೀರನ್ನು ತೆಗೆಯುತ್ತಾರೆ. ಆದರೆ ಗಿಡಗಳಿಗೆ ನೀರುಣಿಸುವ ಪೈಪು ಸಣ್ಣದಾಗಿದೆ. ಆದ್ದರಿಂದ ಅದಕ್ಕೆ ಬರುವ ನೀರಿ ಒತ್ತಡ ಕಡಿಮೆ ಮಾಡುವುದಕ್ಕಾಗಿ, ಮುಕ್ಕಾಲು ಭಾಗ ನೀರನ್ನು ವಾಪಾಸ್ ಕೆರೆಗೆ ಬಿಡುತ್ತಾರೆ ಅನ್ನುವುದು ನನ್ನ ಅನಿಸಿಕೆ. ಅಲ್ಲಿರುವ ಗೇಟ್-ವಾಲ್ ಮೂಲಕ ನೀರಿನ ಒತ್ತಡವನ್ನು ನಿಯಂತ್ರಿಸಬಹುದು!


ಏನೇ ಆಗಲಿ ಗಿಡಗಳಿಗೆ ನೀರುಣಿಸಿದರೆ ಅದು ಮರವಾಗಿ ಮಳೆ ಮುಖಾಂತರ ಮತ್ತೆ ನೀರನ್ನು ಧರೆಗೆ ಇಳಿಸುತ್ತದೆ. ಮನುಷ್ಯನು ಅದನ್ನೇ ಧರಾಶಾಯಿ ಮಾಡುತ್ತಿದ್ದಾನೆ ನೋಡಿ. ಏನು ಮಾಡೋದು!

ಅಂದ ಹಾಗೆ ಇಲ್ಲಿರುವ ಗಿಡಗಳು ಶೋಕಿಯದ್ದೋ ಅಥವಾ ಆಲದ ಮರದಂತಹ ಅತ್ಯುತ್ತಮ ತಳಿಯದ್ದೋ ತಿಳಿಯದು. ನೋಡಿದಾಗ ಸುಮ್ಮನೆ ಶೋಕಿಗಾಗಿ ತಂದಿಟ್ಟಿದ್ದರೆ ಅನ್ನಿಸುತ್ತದೆ. ಇದಕ್ಕಿಂತ ಕೆಲವು ಔಷಧೀಯ ಗಿಡಗಳನ್ನಾದರೂ ತರಿಸಬಹುದಿತ್ತು. ನಗರವಾಸಿಗಳು ಹಾಗೆ ಬಿಡಿ. ಎಕರೆ ತುಂಬಾ ಅಕೇಶಿಯಾ ಮರಗಳಿದ್ದರೂ "ವಾವ್ ವಾಟ್ ಏ ನೇಚರ್" ಅಂತಾ ಉದ್ಘಾರ ತೆಗೆಯುತ್ತಾರೆ. ಇವರಿಗೆ ಕಾಡು ಜಾತಿಯ ಮರಗಳಿಗೂ ಮತ್ತು ಶೋಕಿ ಮರಗಳಿಗೂ ಇರುವ ವ್ಯತ್ಯಾಸ ತಿಳಿದಿಲ್ಲ. ದಿನಾ ಯಂತ್ರಗಳನ್ನು ನೋಡುವವರಿಗೆ ಸಸ್ಯಗಳ ಪರಿಚಯವೆಲ್ಲಿರುತ್ತದೆ. 

No comments:

Post a Comment

Printfriendly

Related Posts Plugin for WordPress, Blogger...