Sunday, August 5, 2018

ಡೈವ್!

೦೯ ಜೂನ್ ೨೦೧೮

ಹ ಹ ಹಾ.. ಎನ್ ಸ್ಪೆಷಲ್ ಅನ್ಕೋಂಡ್ರಾ.. ಛೇ ಛೇ ಹಾಗೇನು ಇಲ್ಲ ;-). ಹಾಗೆ ಹೊಸ ಕಾರಿನಲ್ಲಿ ಊರಿಗೆ ಹೋಗುತ್ತಿರುವಾಗ ಕಂಡಾಗ ದೃಶ್ಯ. ಮಳೆಗಾಲ ಭರ್ಜರಿಯಾಗೆ ಕರಾವಳಿಯಲ್ಲಿ ಸುರಿತಾ ಇದೆ. ಕಾರನ್ನು ಚಲಾಯಿಸುತ್ತಿರುವಾಗ ಒಂದೆಡೆ ಉಲ್ಲಾಸ ಮತ್ತೊಂದೆಡೆ ತಳಮಳ. ಉಲ್ಲಾಸ ಯಾಕೆಂದರೆ ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ಸೊಬಗು ವರ್ಣನಾತೀತ. ಅದರ ಸೌಂದರ್ಯವನ್ನು ಕಣ್ಣಿನಿಂದ ಸವಿಯುವುದು ಮನಸ್ಸಿಗೆ ಒಂತರಾ ಭೂರಿ ಭೋಜನವಿದ್ದಂತೆ. ಮತ್ತೊಂದೆಡೆ ತಳಮಳ ಕೂಡ. ಭಾರಿ ಮಳೆಯ ಮಧ್ಯೆ ಎಲ್ಲಿ ಭೂಕುಸಿತವಾಗುವುದೋ ಎಂಬ ಭಯ. ಹೊಸ ಕಾರು ಬೇರೆ ಅದರ ಜೊತೆ ಮಳೆಯ ಅವಾಂತರ ಏನೇನು ಅವಘಡಗಳನ್ನು ಸೃಷ್ಟಿಸುತ್ತೋ ಅನ್ನೋ ದುಗುಡ. ಕೊನೆಗೆ ಇದ್ಯಾವುದು ಆಗಿಲ್ಲವೆನ್ನಿ :-). ದೇವರ ದಯೆಯಿಂದ ಎಲ್ಲೆಲ್ಲೂ ಉತ್ಸಾಹವೇ ಮನೆ ಮಾಡಿತ್ತು. ತಳಮಳಕ್ಕೆ ಅವಕಾಶವೇ ಇರಲಿಲ್ಲ. ಮಳೆ ರಾತ್ರಿ ಸುರಿದು ಬೆಳಗ್ಗಿನ ಜಾವ ಬಿಡುವು ನೀಡಿತ್ತು. ನೀರೆಲ್ಲ ಹರಿದು ಹೋಗಿದ್ದವು. ಸಂಜೆ ಮನೆ ತಲುಪಿದಾಗ ಕರಾವಳಿಯ ಮಳೆಯೂ ಶಾಂತವಾಗಿತ್ತು. ಇದರ ಜೊತೆ ಕೊಟ್ಟಿಗೆಹಾರದಲ್ಲಿ ಸಮಯ ಕಳೆದಿದ್ದೇ ತಿಳಿಯಲಿಲ್ಲ. ಎಲ್ಲಿ ನೋಡಿದರೂ ಪ್ರಕೃತಿಯದ್ದೆ ವೈಯ್ಯಾರ. ಎಂತಹವರ ಮನಸ್ಸನ್ನೂ ಸೆಳೆಯುವ ಹಾಲಿನ ಹೊಳೆ. ಸಹ್ಯಾದ್ರಿಯ ಶ್ರೇಣಿಯಿಂದ ಬೆಳ್ಳಿಯ ನೊರೆ ಮೈದುಂಬಿ ಧುಮುಕುತ್ತಿತ್ತು. ಆಹಾ ಎಂತಹ ವಿಸ್ಮಯಕಾರಿ ಜಲಪಾತಗಳು. ಸುಮಾರು ೧೦ ಕಿ.ಮೀ ಅವುಗಳದ್ದೆ ರಾಜ್ಯ. ನಮಗಂತೂ ಹಬ್ಬವೇ ಹಬ್ಬ. ಜೂನ್, ಜುಲೈ ತಿಂಗಳುಗಳು ಶುಭಕಾರ್ಯಗಳಿಗೆ ಒಣಹವೆ ಇದ್ದಂತೆ ಆದರೆ ನಿಸರ್ಗ ಪ್ರಿಯರಿಗೆ ಹಬ್ಬವೆ ಹಬ್ಬ!

ಮೇಲೆ ತಿಳಿಸಿದಂತೆ ನನ್ನ ಡ್ರೈವ್ ಕೂಡ ನಿರಾಳವಾಗಿತ್ತು. ಯಾವುದೇ ಅಡೆತಡೆ ಇಲ್ಲದೆ ಚಾರ್ಮಾಡಿ ಘಾಟಿ ಇಳಿದಾಯಿತು. ಗುರುವಾಯನಕೆರೆ ತಲುಪಿದಾಗ ಮಳೆಯ ಪ್ರಮಾಣ ಸ್ವಲ್ಪ ಜಾಸ್ತಿಯೇ ಇದೆ ಎನ್ನುವುದು ಮನದಟ್ಟಾಯಿತು. ಅಲ್ಲಿನ ಕೆರೆಯ ಸಾಮರ್ಥ್ಯಕ್ಕೆ ತಕ್ಕಂತೆ ಈಗಲೇ ನೀರು ತುಂಬಿಕೊಂಡಿದೆ. ಇನ್ನೂ ಮುಂಗಾರಿನ ಮೊದಲನೆಯ ವಾರ ಅಷ್ಟೇ! ಮುಂದಿನ ದಿನಗಳಲ್ಲಿ ಕೆರೆ ಉಕ್ಕಿ ಹರಿಯುವುದರಲ್ಲಿ ಸಂಶಯವೇ ಇಲ್ಲ.ಅಂದ ಹಾಗೆ ಅದು ರೋಡ್ ಸೈನ್ ಮಾರಾಯ್ರೆ ನಿಮಗೆ ಡೈವ್ ಹೊಡೆಯಲು ಸೂಚನೆ ಅಲ್ಲ.. ಅಲ್ಲೇ ಪಕ್ಕ ರೋಡ್ ಸ್ವಲ್ಪ ಕರ್ವ್ ಇದೆ ಅದಕ್ಕೆ ಸೈನ್-ಬೋರ್ಡ್ ಹಾಕಿದ್ದಾರೆ. ಇದನ್ನು ನೀವು ಈಜುವ ಸೂಚನೆ ಅಂದು ಕೊಂಡರೆ ಮತ್ತೆ ವಾಪಾಸ್ ಬರುವುದು ಡೌಟೆ! ಟೈಟ್ ಆಗಿ ಗಾಡಿ ಓಡಿಸೋರು ಇದನ್ನು ನೋಡಿ ಜಲಮಾರ್ಗಕ್ಕೆ ನುಗ್ಗುವುದರಲ್ಲಿ ಸಂಶಯವೇ ಇಲ್ಲ. ಕೆರೆಗೆ ರಕ್ಷಣಾ ಗೋಡೆ ಕಟ್ಟಿದ್ದರೂ ಮಳೆಗಾಲಕ್ಕೆ ಅದು ಸವೆದು ಹೋಗುವುದರಿಂದ ಅದರ ಸಾಮರ್ಥ್ಯದ ಮೇಲೂ ಸಂಶಯ ಮೂಡುವುದು ಸಹಜವೇ ಆಗಿದೆ. ಅದರಲ್ಲೂ ಕಿಕ್ ಏರಿದ ಮೇಲೆ ಗಾಡಿ ಮೆಲ್ಲಗೆ ಓಡಿಸುವವರನ್ನ ಎಲ್ಲಾದರೂ ಕೇಳೀದ್ದೀರಾ ;-)

ಇರಲಿ, ಬರಹ ಇಷ್ಟ ಆಯಿತು ಅಂದುಕೊಳ್ಳುತ್ತೇನೆ.

Thursday, July 19, 2018

Live from Above

May 12 2018,

Overwhelming pre-monsoon rains have rendered exorbitant beauty in my village and adjoining areas ahead of monsoon season which is a month away. The trough over Karnataka is the main reason behind such a healthy pre-monsoon shower. The area is completely filled with greenery and the water bodies have resurrected. The atmosphere is azure during day and the horizon filled with beauty during golden hour. The shore nearby the water bodies is the best place to rejoice the beauty of nature presenting splendid contrast between warm and cool tones. During this day, I chose to visit the Kaup beach during evening to relish the beauty of nature. It's baking in Karnataka being voting day and nature was not behind. The sweltering weather is soaking the body with profuse sodium chloride. The humid weather is what keeping the rains alive and consequently everybody bears it inevitably.

As I reached Kaup beach, the beauty was profound. It has been long time since I hiked to summit of Kaup beach light house. This was golden opportunity to capture evening golden hue. The overlook from light house was obviously spectacular thanks to haze free sky. The entire 360 degree area around the light house was worth the capture. Here are the pictures from the summit of light house. "Live from Above" the light-house provided some extraordinary glimpses of backwaters, coconut trees, the sea-shore and the golden western horizon. Hope you enjoy the pictures too!
Dont miss the impeccable music from SoundLift "Live From Above" and feel the rhythm of nature!!


And an equivalently extraordinary remix by Arctic Moon


Linked to Skywatch Friday

Saturday, July 14, 2018

Improved software in SBI ATM

If you are regular SBI ATM user, you must have noticed the ATM openly exposing your account balance to the public. This is OK if nobody is present in ATM, but in cities like Bangalore where crowd never dissolves, the uncontrolled balance display intimidates the user and opens up a lot of insecurities. This balance display is peeked by people who are in the queue and the situation is worse when there are parallel ATMs. I would say this was one of the worst designs in the financial world and being a software engineer this insecure feature is valued learning for me.

Earlier, the ATMs insecurely displayed account balance without user's consent.Recently, I visited the nearby SBI ATM which always held "out of cash" placard. Fortunately, fresh notes were fed into the ATM and cash was available. When I finished the transaction, I noticed this prompt from ATM."Do you want to display account balance?". Finally, SBI learned from users that exposing account balance is insecure and updated the software. Now the user can control the balance display and most of the occasion, it would be a confident "No". Since the user receives SMS on transaction along with available balance, my opinion is to ditch this facility in near future. This software update is a welcome step by SBI and hopefully, every ATM is updated with the latest enhancement.

As of now not all ATMs have updated software.  Considering that software update could be performed remotely, every SBI ATM should have the update available already. My suspicion is that the machines dispensing newly introduced notes only have this software. The legacy still carries older software.

Thursday, July 12, 2018

A stroll down to fields

May 13, 2018

After dabbling with colors of nature and befriending the mighty sea-tides, it was time to relax and behold the morning rays shimmering the deserted paddy fields. Soon these areas will be filled with  ploughing activities or even may be sometimes morphed into rivers :D. A month later, upright saplings garnish these fields enlivening the bucolic charm. As of now, the heavy pre-monsoon rains have scribbled verdant sketches over the dormant fields which photographer admires a lot. This morning me with my nephew went for a stroll towards these paddy fields to share the joy with nature.

I turned nostalgic for a moment, ruminating those school days during monsoon season. We strolled along the pathway between the fields fearlessly and enthusiastically amidst the brimming fields. Few days were declared holiday as well during torrential rains. Despite the lack of roads, safety measure we sailed through those furious moments of nature seamlessly.

Back to today's musings! It was fresh grass grown over the field and the cattle were enjoying it. The sumptuous meal was unbounded. They were free to wander even towards adjoining fields to devour the fresh grass as much as they want. It was beautiful day to capture photograph as well! Miraculously, a small cloud system was moving from north to south blocking the way of Sun. This is the ultimate moment landscapers look for. The rays dispersed by Sun through the clouds over the rural arena is just impeccable to photograph. I grabbed few moments till the clouds faded away. It was 10AM and not an ideal time. Despite the scorching Sun, the clouds hindering the rays entering the field momentarily provided an excellent aura to photograph the nature.

Nature is tough riddle and its manifestations are unpredictable. At the end, the complacent photographer was enthralled with fruitful stroll.

Linked to Skywatch Friday

Friday, June 22, 2018

ಮೇ ತಿಂಗಳಲ್ಲಿ ಮಳೆಗಾಲದ ಚಿತ್ರಣ

ಮೇ ೧೨, ೨೦೧೮

"ಮೊನ್ನೆ ಮಳೆ ಬಂದಿದೆ ಮಾರಾಯಾ ಅರ್ಧ ಬಾವಿ ತುಂಬಿ ಹೋಗಿದೆ. ಇಂತಹ ಬೇಸಗೆ ಮಳೆಯನ್ನೇ ಕಂಡಿಲ್ಲ!" ಒಂದೆಡೆ ಆಶ್ಚರ್ಯ ಮತ್ತೊಂದೆಡೆ ಆತಂಕದಿಂದ ನುಡಿದಳು ಅಮ್ಮ. ಆತಂಕಕ್ಕೆ ಎರಡು ಕಾರಣಗಳಿವೆ. ಗುಡುಗು-ಮಿಂಚಿನ ಜುಗಲ್-ಬಂದಿ ರಾತ್ರಿ ಮಲಗಲು ಬಿಡುತ್ತಿರಲಿಲ್ಲ. ಅದರೊಂದಿಗೆ ಎಲ್ಲಿ ವಿದ್ಯುತ್ ಉಪಕರಣಗಳು ಕೈಕೊಡುವವೋ ಹೇಳಲಾಗದು. ಜೊತೆಗೆ ಬಿರುಗಾಳಿ. ವಿದ್ಯುತ್ ಕೈಕೊಡುವುದು ಮಾಮೂಲಿ. ಅದರಲ್ಲೂ ಹಳ್ಳಿಯ ಚಿತ್ರಣ ಎಲ್ಲರಿಗು ತಿಳಿದದ್ದೇ. ಕರೆಂಟ್ ಹೋಯಿತು ಅಂದ್ರೆ ಕೆಲವೊಮ್ಮೆ ೨ ದಿನ ಆದರೂ ಪತ್ತೆ ಇರುವುದಿಲ್ಲ. ಎಷ್ಟೇ ಮಳೆ ಬಂದರೂ ಕರಾವಳಿಯ ಸೆಖೆ ಕಡಿಮೆ ಆಗುವುದಿಲ್ಲ ಎಂಬುದು ಎಲ್ಲರಿಗು ತಿಳಿದ ವಿಷಯ. ಕರೆಂಟ್ ಹೋದರೆ ರಾತ್ರಿ ನಿದ್ರೆ ಮಾಡುವುದು ಮರೀಚಿಕೆಯೇ!ಬೆಂಗಳೂರಿನಲ್ಲಿ ನಿನ್ನೆ ಜೋರು ಮಳೆ. ಸುಮಾರು ಅರ್ಧ ಘಂಟೆ ಬಾರಿಸಿರಬೇಕು. ಅದಕ್ಕೆ ಸರಿಯಾಗಿ ಊರಿಗೆ ತೆರಳುವ ಬಸ್ಸು ಕೂಡ ತಡ. ಮರುದಿನದ ಮತ ಚಲಾವಣೆಗೆ ಉತ್ಸುಕನಾಗಿ ನಾನು ಊರಿಗೆ ಹೊರಟಿದ್ದೆ. ಮಳೆಯಿಂದಾಗಿ ಬಸ್ಸು ಕೆ.ರ್.ಪುರಂ ನಲ್ಲೆ ಸಿಕ್ಕಿಹಾಕಿಕೊಂಡಿತ್ತು. ರಾತ್ರಿ ಬೇಗನೆ ತಿಂದಿದ್ದರಿಂದ ಬಸ್ಸು ಕಾಯುವಾಗ ಹೊಟ್ಟೆ ಕೂಡ ಮತ್ತೆ ಆಹಾರಕ್ಕಾಗಿ ಕಾಯುತ್ತಿತ್ತು. ಪುಣ್ಯಕ್ಕೆ ೫ ರುಪಾಯಿಯ ಪಾರ್ಲೆ-ಜಿ ಬಿಸ್ಕತ್ತು ತೆಗೆದುಕೊಂಡಿದ್ದೆ. ಬಸ್ಸು ಬರುವವರೆಗೆ ಎಲ್ಲಾ ಬಿಸ್ಕತ್ತುಗಳು ಹೊಟ್ಟೆಗೆ ಸೇರಿದ್ದವು. ಸುಮಾರು ೯೦ ನಿಮಿಷಗಳ ವಿಳಂಬವಾಗಿ ನಮ್ಮ ಬಸ್ಸು ಬಂತು. ತದನಂತರ ಒಳದಾರಿಯಲ್ಲಿ ಸಂಚರಿಸುವುದರಿಂದ ಮತ್ತೆಲ್ಲೂ ಜಾಮ್ ಇರಲಿಲ್ಲ.
ಕರಾವಳಿ ಕಡೆ ಸಂಚರಿಸುವವರಿಗೆ ಘಾಟಿ ಇಳಿದದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಥಟ್ಟೆಂದು ಎಚ್ಚರವಾಗುತ್ತದೆ ಏಕೆಂದರೆ ಸೆಕೆ ಒಮ್ಮೆಲೆ ಹೆಚ್ಚಾಗುತ್ತದೆ :-). ನನಗೂ ಚಾರ್ಮಾಡಿ ಘಾಟಿ ಇಳಿದದ್ದು ಬೇಗನೆ ತಿಳಿಯಿತು. ಚಳಿಯೆಂದು ಮುಚ್ಚಿದ ಕಿಟಕಿಯನ್ನು ಬೆವರಿನಿಂದಾಗಿ ತೆರೆಯಲೇಬೇಕಾಯಿತು. ನಂತರವೇ ಮತ್ತೊಮ್ಮೆ ನಿದ್ದೆ ಏರಿದ್ದು. ಬೆಳಿಗ್ಗೆ  ೬:೩೦ ಗೆ ಎದ್ದಾಗ ಬಂಟ್ವಾಳದಲ್ಲಿದ್ದೆ. ಸುತ್ತಲೂ ಕಣ್ಣಾಡಿಸಿದಾಗ ಎಲ್ಲೆಲ್ಲೂ ಹಸಿರಿನ ಹೊದಿಕೆ. ನೇತ್ರಾವತಿ ಆಗಲೇ ಕೆಸರುಮಯವಾಗಿದ್ದಳು. ದೀಪದಲಂಕಾರದಂತೆ ಕಂಗೊಳಿಸುತ್ತಿರುವ ಸೂರ್ಯೋದಯದ ಬಾನು. ಅಬ್ಬಬ್ಬಾ! ಎಂತಹ ನಯನಮನೋಹರ ಸೌಂದರ್ಯ. ಇಂದೇ ನೇತ್ರಾವತಿಯ ಮದುವೆಯಂತೆ ಭಾಸವಾಗುತಿತ್ತು. ನದಿಯ ಸುತ್ತಲೂ ಹಸಿರಿನ ಹೊದಿಕೆ ಜೊತೆಗೆ ಸೂರ್ಯನ ಕೇಸರಿ ತಿಲಕ. ಮದುವೆಗೆ ಪ್ರಕೃತಿಯ ಸುಂದರ ಮೇಕಪ್. ಇನ್ನೇನು ಮಳೆ ಬಂದರೆ ಗಟ್ಟಿಮೇಳ ಬಾರಿಸಬಹುದು :-). ಇಂತಹ ಸನ್ನಿವೇಶಗಳಲ್ಲಿ ಕಾರಿನಲ್ಲಿ ಬರಬೇಕು. ಮದುವೆಯ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಳ್ಳಬಹುದು :-).
ಬಸ್ಸು ಮಂಗಳೂರಿಗೆ ಬಂದಿತು. ಅಲ್ಲಿಂದ ಮುಲ್ಕಿ ನಂತರ ಕಾಪು. ಎಲ್ಲೆಲ್ಲೂ ಪ್ರಕೃತಿಯದ್ದೇ ಸೆಳೆತ. ಶಾಂಭವಿ ನದಿ ತಾನೇನು ಕಡಿಮೆ ಇಲ್ಲವೆಂದು ರಾಡಿಯಲ್ಲಿ ತೊಯ್ದು ಹರಿಯುತ್ತಿದ್ದಾಳೆ. ಕರ್ನಾಟಕದ ಮೇಲಿನ ಸುಳಿಗಾಳಿ ಪೂರ್ವ ಮುಂಗಾರಿಗೆ ಅತೀವ ಶಕ್ತಿ ತುಂಬಿರುವುದಂತು ನಿಜ! ಎಲ್ಲೆಲ್ಲೂ ವರ್ಣಿಸಲಾಗದಷ್ಟು ಸೌಂದರ್ಯ. ಮುಲ್ಕಿಯ ತಗ್ಗು ಪ್ರದೇಶಗಳಲ್ಲಿ ಆಗಲೇ ಒಂದಿಂಚು ನೀರು ತುಂಬಿಕೊಂಡಿದೆ.ಕೆಲವರು ಆದಾಗಲೇ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಷ್ಟು ದಿನ ಮಳೆ ಸುರಿಯುವುದೋ ತಿಳಿಯೆ. ಸಧ್ಯಕ್ಕೆ ಮಾತ್ರ ಎಲ್ಲೆಲ್ಲೋ ನೀರೆ ನೀರು. ಮಳೆಯಿಂದ ಜೀವಜಲಕ್ಕೆ ಕಳೆ ಬಂದಿದೆಯಾದರೂ ಆಕಾಶದ ಘರ್ಜನೆ ಎಲ್ಲರಲ್ಲೂ ಭಯ ಆವರಿಸಿದೆ ಕೂಡ.
ಊರಿಗೆ ಬಂದಿಳಿದಾಗ ಮನಸ್ಸು ಮುದಗೊಂಡಿತು. ಕಾಪುವಿನಿಂದ ಹಳ್ಳಿಗೆ ನಾಲ್ಕು ಕಿ.ಮೀ ರಸ್ತೆಯಲ್ಲಿ  ಸಂಚಿರುಸುವಾಗ ಧನಾತ್ಮಕ ಚಿಂತನೆ ದ್ವಿಗುಣವಾಗುತ್ತದೆ. ಸದ್ದಿಲ್ಲದೆ ಸಂಚರಿಸುವ ಮೋಡಗಳು, ಮೋಡದ ಬಲೆಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವ ರವಿ, ಸುತ್ತಲೂ ಬೆಳೆದಿರುವ ಹಚ್ಚಹಸುರಿನ ಹುಲ್ಲು ಮತ್ತು ಅದನ್ನು ಮೇಯುತ್ತಿರುವ ದನಕರುಗಳು, ಜೊತೆಗೆ ಅಲ್ಲಲ್ಲಿ ಹರಿಯುತ್ತಿರುವ ಕಾಲುವೆ, ಆಹಾಹಾ ಎಂತಹ ಸುಮಧುರ ಚಿತ್ರಣ ಅರೆರೆ ಮನೆ ಪಕ್ಕದ ಸಣ್ಣ ಚೆಕ್-ಡ್ಯಾಮ್ ಕೂಡ ಫುಲ್ ಆಗಿದೆ. ಹಾಗಾದರೆ ಅಮ್ಮ ಹೇಳಿದ್ದು ಉತ್ಪ್ರೇಕ್ಷೆಯಂತೂ ಅಲ್ಲಾ.
ಮನೆಗೆ ತಲುಪಿದಂತೆ ಚಹಾ ಸವಿದಂತೆ ಮೊದಲು ನೋಡಿದ್ದು ಬಾವಿಯ ನೀರಿನ ಮಟ್ಟ ನಂತರ ಹೊರಟಿದ್ದು ಹೊಲದ ಕಡೆಗೆ. ಕೇವಲ ಮೊಬೈಲ್ ಕ್ಯಾಮೆರಾ ಸಾಕಾಗಿತ್ತು ಪ್ರಕೃತಿಯ ಸುಂದರತೆಯನ್ನು ಸೆರೆಹಿಡಿಯಲು. ಸ್ಥೂಲ ಕಾಯದ DSLR ಕ್ಯಾಮರಾದ ಅವಶ್ಯಕತೆಯೇ ಇರಲಿಲ್ಲ. ಅಷ್ಟು ಸ್ವಚ್ಚಂದವಾಗಿತ್ತು ಅಂದಿನ ವಾತಾವರಣ.

ಮುಂಗಾರು ಪೂರ್ವ ಮಳೆ
ಹಸಿರಾಯಿತು ಇಳೆ  |
ಬಾವಿಗೆ ಬಂತು ಕಳೆ
ಛಾಯಾಚಿತ್ರಕನ ಪ್ರಕೃತಿ ಸೆಳೆ ||ಜೋರು ಮಳೆ ಹುಯ್ದಾಗ, ಬೆಳಗ್ಗೆ ಆಕಾಶ ಶುಭ್ರವಾಗಿರುವುದು. ಸೂರ್ಯನ ಮೊದಲ ಕಿರಣಗಳು ಆ ಸುಂದರ ಭೂದೃಶ್ಯದ ಮೇಲೆ ಹರಡಿದಾಗ, ನೀಲಿಯ ಬಾನಿನ ಮತ್ತು ಹಸಿರಿನ ಸಮ್ಮಿಲನ ಕಣ್ಣಿಗೆ ಆಹ್ಲಾದವನ್ನುಂಟು ಮಾಡುವವು.

ಶುಭ್ರ ನೀಲಿ ಆಕಾಶ
ಪೂರ್ವದಿ ಸೂರ್ಯನ ಪ್ರಕಾಶ  |
ಪಶ್ಚಿಮದಿ ಪ್ರಕೃತಿಯ ಗಾಂಭೀರ್ಯ
ಸೆರೆ ಹಿಡಿದೆನು ಅದರ ಸೌಂದರ್ಯ  ||
ಎಷ್ಟು ಮಳೆ ಬಂದರೂ ಮನೆಯ ಪಕ್ಕದ ಕಾಲುವೆಯಲ್ಲಿ ನೀರು ಹರಿಯಲು ಮಳೆಗಾಲ ಶುರುವಾಗಲೇಬೇಕು.ಬೇಸಗೆಯಲ್ಲಿ ಕೃತಕವಾಗಿ ನೀರನ್ನು ಬಿಟ್ಟು ಹುಲ್ಲು ಬೆಳೆಸಬೇಕು. ಆದರೆ ಮಳೆಯ ಮೋಡಿಯಿಂದ ಎಲ್ಲೆಲ್ಲೂ ಸೊಂಪಾಗಿ ಬೆಳೆದಿರುವ ಫ್ರೆಶ್ ಹುಲ್ಲು. ದನಗಳಿಗೆ ಸುಗ್ಗಿಯೋ ಸುಗ್ಗಿ.

ಅಯ್ಯೋ ಮಾರಾಯ ಕಣ್ಣು ಹಾಕಬೇಡಪ್ಪ. ಮುಂಗಾರು ಕೈಕೊಟ್ರೆ ಕಷ್ಟ :-).


ಶ್ರೀನಿವಾಸ ಕಲ್ಯಾಣ ಚಿತ್ರದ ಕಾನಡ ರಾಗದಲ್ಲಿ ಸಂಯೋಜಿಸಿರುವ "ನಾನೇ ಭಾಗ್ಯವತಿ" ಹಾಡನ್ನು ಈ ಸನ್ನಿವೇಶಕ್ಕೆ  ಮಾರ್ಪಾಡು ಮಾಡಿದಾಗ ಮೂಡಿದ ಪದ್ಯ. ಅಣ್ಣಾವ್ರು ಮತ್ತು ಜಾನಕಿ ಅವರ ಸುಮಧುರ ಕಂಠಕ್ಕೆ ಸರಿಸಾಟಿಯಿಲ್ಲ.

ಎಲ್ಲಾದರೂ ಮೇಯುವ ಸ್ವಾತಂತ್ರ್ಯ ಹೊಂದಿರುವ ನಾನೇ ಭಾಗ್ಯವತಿ
ವರುಣನೇ ನಿನ್ನಿಂದ ಹೊಟ್ಟೆ ತುಂಬಾ ಮೇಯುತ್ತಿರುವ ನಾನೇ ಭಾಗ್ಯವತಿ

ಎನ್ನುವಂತಿದೆ ಅವುಗಳ ಮುಖ ಭಾವ.

ಛೇ! ಇವ್ನು ಇನ್ನು ಸಾ ಫೋಟೋ ಹೋಡಿತಾ ಮಾರಾಯ. ಹೋಗೋ ಮಾರಯಾ ನಮ್ ಹೊಟ್ಟೆಗೆ ಕಣ್ ಹಾಕ್ಬೇಡ

ಇಂದು ಮತದಾನದ ಕಾವು ಬೇರೆ. ಮಳೆರಾಯನು ಅದನ್ನು ತಣ್ಣಗಾಗಿಸಲು ಪ್ರಯತ್ನಿಸಿದರೂ ಕರಾವಳಿಯ ಸೆಖೆ ಬಿಡಬೇಕೆ! ಆರ್ದ್ರತೆ ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆವರು ಜಲಪಾತದಂತೆ ಸುರಿಯುತ್ತಿದೆ. ಆಕಾಶದಿಂದ ಮಳೆಯಂತೆ, ದೇಹದಿಂದ ಬೆವರು. ಸೆಖೆ ಇಳಿದಂತೆ ಮಳೆ ಕೂಡ ಇಳಿಯುತ್ತದೆ. ಮಳೆಬೀಳಲು ಆರ್ದ್ರತೆ ಕೂಡ ಅತಿ ಮುಖ್ಯ. ವಿಪರೀತ ಮಳೆ ಮತ್ತೊಂದು ರೀತಿಯಲ್ಲಿ ಭಯ ಹುಟ್ಟಿಸುತ್ತಿದೆ. ಹಲವು ಬಾರಿ ಬೇಸಿಗೆ ಮಳೆ ಹೆಚ್ಚಿದಾಗ, ಮುಂಗಾರು ಕೈಕೊಟ್ಟಿದೆ. ಈ ಬಾರಿಯೂ ಅದೇ ಸ್ಥಿತಿ ಉದ್ಭವವಾಗುತ್ತದೋ ಎನ್ನುವ ಭಯ ಸಹಜ. ಮುಂಗಾರು ಮಳೆ ದೇಶದೆಲ್ಲೆಡೆ ಸರಿಯಾದ ಪ್ರಮಾಣದಲ್ಲಿ ಬೀಳಲೆಂದು ಬನ್ನಿ  ಶ್ರೀ ಕೃಷ್ಣನನ್ನು, ಶ್ರೀ ಮುಖ್ಯಪ್ರಾಣನನ್ನು ಹಾಗೂ ಶ್ರೀ ಮಹೇಶ್ವರನನ್ನು ಪ್ರಾರ್ಥಿಸೋಣ.

ಭರ್ಜರಿ ಪೂರ್ವ ಮುಂಗಾರು ಸುರಿದಿದೆ
ನೈಜ ಮುಂಗಾರು ಕೈಕೊಡುವ ಭೀತಿ ಆವರಿಸಿದೆ  |
ಹಾಗೆನ್ನುವುದು ತಿಳಿದವರ ಅಂಬೋಣ
ಹಾಗಾಗದಿರಲೆಂದು ದೇವರನ್ನು ಪ್ರಾರ್ಥಿಸೋಣ  ||

ಅರೆರೆ ಚಿತ್ರ ಹೊಡಕೊಂಡು ಬೊಗಳೆ ಮಾತ್ರ ಬರ್ದಿದಲ್ಲ, ವೋಟ್ ಕೂಡಾ ಹಾಕಿ ಬಂದೆ ನಾನು ಕಲಿತ ಶಾಲೆಯಲ್ಲಿ ;-). ಹೌದು ವೋಟ್ ಹಾಕಲೆಂದೇ ಬಂದಿದ್ದು. ನನಗೆ ರಾಜಕೀಯ ಮಾತನಾಡುವುದೆಂದರೆ ಅಲರ್ಜಿ. ಆದರೆ ವೋಟನ್ನು ತಪ್ಪದೆ ಚಲಾಯಿಸುತ್ತೇನೆ. ವೋಟಿಗೆಂದೆ ಬಂದು ಊರಿನ ಪ್ರಕೃತಿಯ ನೋಟಕ್ಕೆ ನಾ ಬೆರಗಾಗಿದ್ದು ಉತ್ಪ್ರೇಕ್ಷೆಯಲ್ಲ!ಸಂಜೆ ಕಾಪು ಕಡಲ ತೀರದಲ್ಲಿ ಸುಮಾರು ಹೊತ್ತು ಕಳೆದಾಗ ಊರಿಗೆ ಬಂದಿದ್ದು ಪರಿಪೂರ್ಣವಾಯಿತು. ಈ ರಮಣೀಯ ದೃಶ್ಯಕ್ಕೆ ಮಳೆಯ ಕೊಡುಗೆ ಅಪಾರ. ಮರುದಿನ ಮಕ್ಕಳೊಂದಿಗೆ ಬೆರೆತಾಗ ಬದುಕು ಅರ್ಥಪೂರ್ಣವಾಯಿತು.

ಮಳೆ ಬಂದ ಮರುದಿನದ ಸೂರ್ಯಾಸ್ತದ ದೃಶ್ಯ ಎಂತಹವರ ಮನವನ್ನು ಸೆಳೆಯುತ್ತದೆ. ನಿಮಗಾಗಿ ಬೋನ್ಸಸ್ ಚಿತ್ರಗಳು.  ಚಿತ್ರಗಳನ್ನು ನನ್ನ ಹಳ್ಳಿಯಲ್ಲಿ, ಪಕ್ಕದ ಹಳ್ಳಿಯಲ್ಲಿ ಮತ್ತು ಕುಂದಾಪುರ ಬಳಿಯ ಹಳ್ಳಿಯಲ್ಲಿ ಸೆರೆಹಿಡಿದದ್ದು!ಹೊರಡುವ ಮುನ್ನ:

ಸುರಿಯಲಿ ಉತ್ತಮ ಮುಂಗಾರು
ಮೂಡಲಿ ಪ್ರಕೃತಿಯ ಚಿಗುರು  |
ಹೆಚ್ಚಲಿ ಜಲಾಶಯಗಳ ಪೊಗರು
ಫಲ ನೀಡಲಿ ನೇಗಿಲಯೋಗಿಯ ಬೆವರು  ||

ಎಲ್ಲಾ ಚಿತ್ರಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದದ್ದು. ನಿಮಗೆಲ್ಲರಿಗೂ ಇಷ್ಟವಾಯಿತೆಂದು ಊಹಿಸುತ್ತೇನೆ. ಮತ್ತಷ್ಟು ಚಿತ್ರಗಳನ್ನು ಆಂಗ್ಲ ಬರಹದಲ್ಲಿ ಸೇರಿಸುತ್ತೇನೆ. ಓದಿದ್ದಕ್ಕಾಗಿ ಅನಂತಾನಂತ ಧನ್ಯವಾದಗಳು :-)

Thursday, June 7, 2018

Rays of Hope

This time I was again lucky. An evening stroll along Rachenahalli lake turned out to be productive both for my physical body as well the camera eye ;-). The sky was glowing with crepuscular rays thanks to the fragmented evening clouds.

Landscape Photography member entitled the pictures as "Skies of Friendship". It was sultry that evening which tempted me to modify the title as "Rays of Hope". No friendship with hot weather :-). It's those rays which befriended my soul. The rays provided hope that clouds would stay leading to healthier monsoon season. It was also these rays which ignited the mobile camera and also provided hope that life would be thrilling as these infinite parallel beams.Linked to Skywatch Friday

Sunday, June 3, 2018

Technology glitch and covert money

17 Feb 2018,

Today, SBI ATMs are not functioning since evening. Initially I thought its isolated but later I found none of ATMs are releasing money due to lost connectivity towards server. That is not the topic of discussion here :-). As usual, I rode bike towards Temple on Saturday evening. On the way, I generally fuel up when necessary. Today, I had that necessity but no cash. Nowadays many of the petrol pumps accept debit cards and hence I thought money won't be problem.

The biker ahead of me in petrol pump had 3 failed transactions before bailing out. He did not fuel the bike. When it was my turn, I requested the service person to check if card is functioning based on earlier results. "No sir, its problem with his card" the personnel uttered confidently. After fueling, the machine declined my card transaction :-). 2 times it spewed server timeout and later on, it was just DECLINED. "Sir you seemed to have exhausted your bank balance", uttered the personnel impertinently. I lost patience but contained my heat. I am reeling under bad days currently. There was no scope for further moaning. I parked the bike and walked towards nearby SBI ATM and similar scene appeared. It was the time of realization that servers were down at the bank end. Not sure if it was planned or ephemeral fault. I was frustrated since there were no more ATMs nearby Hebbal Flyover. As I was pondering heavily, something flashed to my mind. I have a secret compartment in purse where I keep emergency fund. Recently, I have increased the cap from Rs.100/- to 300. Yes, that was the saviour at the moment. I walked towards the bunk and handed over 200 from the covert kitty :D. "Sir, I have sufficient balance but SBI servers are down and hence transaction declined", I replied him politely before leaving.Having secret location for emergency fund is something practiced in olden days especially in India. I remember my grandparents having various hideouts for money to cater emergency requirements. I too practiced this recently owing to above cases. It has been useful under many circumstances. This situation one of my experience. Last but not least, this covert place needs immediate replenishing without fail. Otherwise, the practice is not at all worth following :-).

I plan to incorporate varied denominations in the covert treasure. Probably, couple of hundreds and fifties. The denominations are chosen in such a way as not to swell the purse itself :-)

Printfriendly

Related Posts Plugin for WordPress, Blogger...