Sunday, November 29, 2015

ಬ್ಯಾಕೆಂಡ್ - ೧೩

[ಪವರ್ ಸ್ಟೆರಿಂಗ್]

ಯೆಲ್ಲಿಗ್ರಿ ಮೆಲ್ ಹತ್ತೋದು, ಮೆಟ್ಲೇ ಇಲ್ಲಾ? ರೋಡ್ ಇಂದ ಗಾಡಿನಲ್ಲಿ ಡೈರೆಕ್ಟ್ ಫ್ಲೈ-ಓವರ್ ಗೆ "stairing" ಮೂಲಕ ಹತ್ತೋಕೆ ಆಗಲ್ಲ. ಅಷ್ಟು ಗೊತ್ತಾಗಲ್ವಾ. ಜೊತೆಗೆ ಪವರ್ ಬೇರೆ ಎಲ್ಲಿಂದ ತಯಾರಿಸೋದು. ಬೇಕಾದ್ರೆ ನಿಮ್ ಗಾಡಿ ಮೇಲೆ ಏಣಿ ಇಟ್ಕೊಂಡು ಹತ್ಬಹದು ಅಷ್ಟೇ. ಏನು?!! ನಿಮ್ ಗಾಡಿ "power" ತಯಾರಿಸಿ "stair" ಹತ್ಸುತ್ತಾ? ಬೇಡಪ್ಪಾ.. ನಾನಿಗ್ಲೇ ಹೊರಟೆ!! ಪವರ್ ಇಟ್ಕೊಂಡು ಮೆಟ್ಲು ಹತ್ತಿಸ್ತಾರಂತೆ. ಆಕಾಶಕ್ಕೆ ಏಣಿ ಇಡ್ಲಿಕ್ಕೆ ಹೊರ್ಟಿದ್ದಾರೆ ಇವರು. ಸುಮ್ನೆ ಯಾವ್ದೋ ಮೆಟ್ಲು ಹತ್ಸಿದ್ರು ಅಂತ ಗಾಡಿನೇ ರಾಕೆಟ್ ಅನ್ಕೊಬಿಟ್ಟಿದ್ದಾರೆ. ಮೋಸ ಮಾಡೋಕ್ಕೆ ಎಂತೆಂತಹ ಐಡಿಯಾಗಳಪ್ಪಾ ಈಗಿನ್ ಕಾಲದಲ್ಲಿ.


ಅಯ್ಯಯ್ಯೋ ಹೌದೇ! ಸ್ಪೆಲ್ಲಿಂಗ್ ಮಿಸ್ಟೇಕ್ ಅಂತೆ.. ಸಾರಿ ಕಣ್ರಿ ಏನೇನೋ ಮಾತಾಡ್ಬಿಟ್ಟೆ ಬೇಜಾರ್ ಮಾಡ್ಕೋಬೇಡಿ. ಏನೋ ಪವರ್ ಸ್ಟೀರಿಂಗ್ ಇಟ್ಕೊಂಡು ರೋಯ್ ಅಂತ ತಿರಿಗಿಸುವಾಗ ಸ್ವಲ್ಪ ಸ್ಪೆಲ್ಲಿಂಗ್ ಕೂಡ ತಿರ್ಕೊಂಡಿದೆ ಅನ್ಸುತ್ತೆ. ಅತ್ವಾ "power-steering" ಗಾಡಿ ಓಡ್ಸೋವಾಗ ಎಲ್ಲೋ ಹತ್ಸಕ್ಕೆ ಹೋಗಿ "power-stairing" ಆಗೋಯ್ತಾ? ಏನೇ ಇರ್ಲಿ ಮತ್ತೊಮ್ಮೆ ಐ ಆಮ್ ಎಕ್ಸ್-ಟ್ರೀಮ್ಲಿ ಸಾರಿ ಕಣ್ರೀ.


ಸಿಕ್ಕಾಪಟ್ಟೆ ಟ್ರಾಫಿಕ್ ಮಧ್ಯೆ ಗಾಡಿ "power-off" ಆಗಿರೋವಾಗ ಹೆಬ್ಬಾಳ ಸಿಗ್ನಲ್ ಬಳಿ ತೆಗ್ದಿದ್ದು.

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Saturday, November 28, 2015

Paddy Harvesting Machinery

Recent years, agriculture has become one of the complicated ways of living.  It is constantly battered by climate changes, middleman and dearth of field labourers. This situation is no different in our village. The labourers demand high perks with breakfast & lunch as complement. The efficiency of labourers is also non-deterministic. They sometimes elude from work for trivial reasons. All these factors have forced paddy cultivators to embrace modernization. They have been attracted towards the paddy harvestor machineries which is perpetual in coastal Karnataka.


I had an opportunity this November to have closer look at the functioning of the machinery. Here is short highlight

  • It costs .2200 per hour (subject to change). This is almost equivalent to hiring labourers or may be slightly costlier. However there is no pain of feeding and monitoring labourers.
  • The machine is rented from local contractor who rents from a vendor in TamilNadu
  • The machine can harvest an acre of land in one hour.
  • The paddy is separated from straw and stored in machine buffer. Capacity is not known to me. Don't worry, the lubrication of machine do not stick to hay!
  • The buffered paddy is channelled from the outlet present at the side of harvester towards local storage.
  • The hay is cut rather than being left as whole. This turns out disadvantageous to the cultivators since the buyers measure only in terms of bundle of uncut hay.
  • The other not so disadvantageous factor is that if straws are stuck in between rollers, a manual intervention is required to clear them.
  • Despite the advantage of obtaining cut hays, the consumers are hesitant to buy this stock.
  • Most of the times, the cultivators sell them at lower prices. There is also a machinery available which separates the hay uncut. I am yet to experience it.
  • If many cultivators adopt this type of harvesting, the machinery rental  prices may come down. Also the haystack price would turn to normal rates.
Signing off, do watch a short video if you are not familiar with the process. Sorry, I forgot to capture paddy draining action. At the end, my body (including camera) was spattered with hay dust which I cleaned at home :).

Thursday, November 26, 2015

ಬ್ಯಾಕೆಂಡ್ - ೧೨

[ಸವಿ ನೆನಪು; ವೀರ ಯೋಧ; ಮೇಜರ್ ಸಂದೀಪ್ ಉನ್ನಿ ಕೃಷ್ಣನ್]


ಇದಪ್ಪಾ ತಲೆಬರಹ ಅಂದ್ರೆ. ನಮ್ಮ ದೇಶವನ್ನು ಕಾಯೋ ಸೇನಾನಿಗಳಿಗೆ ರೆಸ್ಪೆಕ್ಟ್ ಕೋಡೋದು ಅಲ್ಲದೆ, ಹಿಂದಿನ ವಾಹನದವರಿಗೂ ಸದಾಕಾಲ ನೆನಪಿಸುವ ಮಹತ್ಕಾರ್ಯ ಇವರದ್ದು. ನಮಗೆ ಬಂದೂಕು ಹಿಡಿಯೋ ತಾಕತ್ ಇಲ್ಲಾಂದ್ರು ನಮ್ಮ ದೇಶದ ವೀರ ಯೋಧರಿಗೆ ಸಲ್ಯೂಟ್ ಹೊಡೆದು ಗೌರವ ಸೂಚಿಸೋಣ.

ಅರಚಿತ್ತುರಿವ ಹಾಟ್ ಟ್ರಾಫಿಕ್ ಮಧ್ಯೆ ನಿಮ್ಮ ಕಷ್ಟವೇ ದೊಡ್ಡದೆನಿಸಿದರೆ, ಇಂತಹ ಬರಹಗಳನ್ನು ನೋಡಿದರೆ ಬಹಳ ಒಳ್ಳೆಯದು. ಕೊರೆಯುತ್ತಿರುವ ಚಳಿಯಲ್ಲಿ ನಮ್ಮ ಗಡಿಗಳನ್ನು ಕಾಯುತ್ತಿರುವ ಯೋಧರನ್ನು ನೆನೆಸಿಕೊಂಡರೆ ನಮ್ಮ ಸಮಸ್ಯೆಗಳು ತೃಣ ಸಮಾನವೆನಿಸುತ್ತದೆ. ಏನ್ ನೋಡ್ತಾ ಇದೀರಾ? ಬಿಸಿಲಿನ ಝಳಕ್ಕೆ ಬರಹ ಕಾಣುತ್ತಿಲ್ಲವೇ? ಸತ್ಯ ಹೇಳುತ್ತಿದ್ದೇನೆ ಮಾರಾಯ್ರೆ, ತಪ್ಪದೆ ಸಲ್ಯೂಟ್ ಹೊಡೆಯಿರಿ!

ಇಲ್ಲೆ ಪಕ್ಕ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಸಲ್ಯೂಟ್ ಹೊಡೆದು [ಮೇಜರ್ ಸಾಹೇಬರಿಗೆ, ವೀರ ಯೋಧರಿಗೆ ಮತ್ತು ರಿಕ್ಷಾ ಸಾರಥಿಯವರಿಗೆ] ಕ್ಲಿಕ್ಕಿಸಿದ್ದು.

ಜೈ ಹಿಂದ್!

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Monday, November 23, 2015

ಬ್ಯಾಕೆಂಡ್ - ೧೧

[ಓಲಾ ತೂತಿನ ನೆನಪು]

ಎನ್ನಾ ಸುರುತಾ ತುಳು ಬ್ಯಾಕೆಂಡ್ ಬರೆಯೊಂದುಲ್ಲೆ ಜೊತೆಕು ಜಿಂಜ ಖುಷಿ ಆವೊಂದುಂಡು! ನನಲ ಸುಮಾರು ತಿಕ್ಕುಂಡುಂತು ಎನ್ನ ನಂಬಿಕೆಲಾ!

ಅಂದೇ! ಯೆಂಕು ಮಾತ್ರ ತೂತಿನ ನೆನಪಿಜ್ಜಿ. ಬಹುಶ ಕಪ್ಪು ಕನ್ನಟಿಟು ತೂಯ್ನಿಗ ಪೂರಲಾ ಪೊಸತುದಕ್ಕ ತೋಜುಂಡಾಂದು. ಇಜ್ಯಡ ಮೇರು ತನ್ನ ಆಟೋನು ಜನಕ್ಲು ನೆನಪಿಜನಡು ಪಂದು ಇಂಚ ಗೀಚಿದೆರಾಂದು. ಸುರುಕೆ ಕಡಲಡು ದೈವೆರು ಜಾಸ್ತಿ ಅಯ್ತೋ ಮಧ್ಯಡು ಇಂಚ ಬರೆಂಡ ಆಟೋನು ಮಿತ್ತೊಯ್ರೆನೆ ಪೊಡಿಗೆ ಆಪುಂಡು ಮಾರ್ರೆ. ಫ್ರೆಂಚ್ ಭಾಸೆಡು "deja-vu" ಪಣ್ಡಿಲಕ್ಕ ಆಂಡು.

ಪಣ್ಣಿಲಕ್ಕ ಯಾನು ಮಾತ್ರ ಉಂದೆನು ಮೂಲೆ ಕಾಪು ಪಟ್ಟಣಡು ತೂಯಿನಿ (ಕ್ಯಾಮರಡ್ಲಾ ಬೊಕ್ಕ ಕಣ್ಣುಡ್ಲಾ). ಬೆಂಗ್ಳೂರುಡು ಖಾಲಿ 'ಓಲಾ' ಕ್ಯಾಬ್ ಮಾತ್ರ ತೂತಿನ ನೆನಪು. ತುಳು ಗೊತ್ತಿಪ್ಪನಾಕ್ಲು 'ಓಲಾ' ಕ್ಯಾಬ್-ಡು ಒಟ್ಟೆ ಉಂಡುಂತು ಅಪಾರ್ಥ ಮಲ್ತೊನ್ನುವೆರು. ಬರ್ಪೆ ಆವೇ!

<ಕನ್ನಡಿಗರಿಗಾಗಿ>


[ಎಲ್ಲೋ ನೋಡಿದ್ದು ನೆನಪು]

ಮೊಟ್ಟ ಮೊದಲ ತುಳು ಬ್ಯಾಕೆಂಡ್ ಪ್ರಕಟಿಸಲು ಬಹಳ ಸಂತಸವಾಗುತ್ತಿದೆ. ಇದರೊಂದಿಗೆ ಮತ್ತಷ್ಟು ಬ್ಯಾಕೆಂಡ್ ಗಳು ಸಿಗಬಹುದೆಂಬ ನಂಬಿಕೆ ಕೂಡ!

ಹೌದೇ! ನನಗೆ ಮಾತ್ರ ನೋಡಿದ್ದು ನೆನಪಿಲ್ಲ. ಬಹುಶಃ ಕಪ್ಪು ಕನ್ನಡಿಯಲ್ಲಿ ನೋಡಿದಾಗ ಎಲ್ಲವೂ ಹೊಸದಾಗಿ ಕಾಣುತ್ತಿರಬಹುದು. ಇಲ್ಲವೇ ಜನರು ಈ ರಿಕ್ಷಾವನ್ನು ನೆನಪಿಟ್ಟುಕೊಳ್ಳಲು ಹೀಗೆ ಬರೆದಿರಬಹುದೋ. ಮೊದಲೇ ಕರಾವಳಿಯಲ್ಲಿ ದೈವಗಳು ಹೆಚ್ಚು ಅದರ ಮಧ್ಯೆ ಹೀಗೆ ಬರೆದರೆ ಆಟೋ ಹತ್ತವುದಕ್ಕೆ ಹೆದರಿಕೆಯಾಗುತ್ತದೆ. ಫ್ರೆಂಚ್ ಭಾಷೆಯಲ್ಲಿ "" ಅಂದಂತಾಯಿತು.

ಅಂದಹಾಗೆ ನಾನು ಮಾತ್ರ ಇದನ್ನು ಇಲ್ಲೇ ಕಾಪು ಪಟ್ಟಣದಲ್ಲೇ ಕಂಡಿದ್ದು (ಕ್ಯಾಮೆರಾದಲ್ಲೂ ಮತ್ತು ಕಣ್ಣಲ್ಲೂ). ಬೆಂಗ್ಳೂರಿನಲ್ಲಿ 'ಒಲಾ" ಕ್ಯಾಬ್ ಗಳನ್ನು ನೋಡಿದ್ದು ಮಾತ್ರ ನೆನಪು. ತುಳು ಗೊತ್ತಿಲ್ಲದಿರುವವರು 'ಓಲಾ' ಕ್ಯಾಬಿನಲ್ಲಿ ತೂತು ಇದೆ ಎಂದು ಅಪಾರ್ಥ ಮಾಡಿಕೊಳ್ಳಬಹುದು. ಬರ್ತಿನಿ ಆಯ್ತಾ!
 
ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Sunday, November 22, 2015

ಬ್ಯಾಕೆಂಡ್-೧೦

[ತನ್ನ ಅರೀವೆ ತನಗೇ ಗುರು]


ಭೋ ದೊಡ್ ಮಾತಾಡವ್ರೆ ಕಣಣ್ಣ ಈ ಮಹನೀಯರು. ನಿಮ್ಗೆಷ್ಟು ತಿಳಿತೈತೋ ಅಷ್ಟು ಒಳ್ಳೆದು ಅಂತ ಯೋಳ್ತವ್ರೆ ಅನ್ಸುತ್ತೆ. ಅತ್ವಾ ನಿನ್ನ ನೀನು ತಿಳ್ಕೊಂಡ್ರೆ ನೀನೆ ನಿಂಗೆ ಗುರು ಆಯ್ತಿಯಾ ಅಂತ ಯೋಳ್ತಿರ್ಬಹುದು. ಇವ್ರಿಗೆ ಇನ್ನು ಅರಿವಾಗೋದು ಭಾಳ ಇರೋ ತರ ಕಾಣಸ್ತೈತೆ. ಅದಿಕ್ಕೆ "ಅರೀವೆ" ಪದದಲ್ಲಿ ಧೀರ್ಘ ಉಲ್ಟಾ ಆಗೈತೆ. "ತನಗೇ" ಪದದಲ್ಲಿರೋ ದೀರ್ಘ ನೋಡಿದ್ರೆ ಮ್ಯಾಟರ್ ತುಂಬಾ ಸೀರಿಯಸ್ ಇರೋ ತರ ಅನ್ಸುತ್ತೇ? ಅನುಭವಾನ ತುಂಬಾ ಒತ್ತಿ ಯೋಳಕ್ಕೆ ಹಿಂಗೆ ಬರ್ದಿರ್ಬಹುದೇನೋ.

ಅಂದಂಗೆ ನನ್ಗು ಯೇನು ತಿಳಿಯಕ್ಕಿಲ್ಲ ಕಣಣ್ಣ; ಸುಮ್ನೆ ಕಾಮೆಡಿಗೆ ಹಾಕಿರೋದು!

ಇಲ್ಲೇ ಪಕ್ಕ ಮಾರ್ತಳ್ಳಿನಾಗೆ ನಮ್ ಹೆಂಡ್ರು ಫೋಟೋ ಹೊಡ್ದಾಗ ಅರಿವಾಗಿದ್ದು!

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Saturday, November 21, 2015

Affection

Shot at Chunchi falls near Bangalore. They were just preparing to go home.


IDEAL PLACE TO GRAZE & RELAX :)NICE & GENTLEDONE CAPTURING? HOPE IT HAS COME GOOD!


Friday, November 20, 2015

ಬ್ಯಾಕೆಂಡ್-೯

[ಹಾಯ್ ಚಿನ್ನು, ಹಠವಾದಿ ವೀರಮದಕರಿ]
ಹಾಯ್ ಪುಟ್ಟ ಅಂತ ನಿಮ್ಮ ವಾಹನದೊಂದಿಗೆ ಖುಷಿಯಿಂದ ಅಪ್ಪಿಕೊಳ್ಳಲು ಹೋದಿರಿ ಜೋಕೆ! ಎಲ್ಲವೂ ರಿವರ್ಸ್ ಆಗುವುದರಲ್ಲಿ ಸಂಶಯವಿಲ್ಲ. ಹಾಯ್ ಹೋಗಿ ಬಾಯ್ ಮಾಡಿಸುತ್ತಾರೆ ಇದರ ಸಾರಥಿ. ಮೊದಲೇ ವೀರಮದಕರಿ ಜೊತೆಗೆ ಹಠವಾದಿ ಬೇರೆ, ಬೆಂಡೆತ್ತಲು ತಯಾರಿದ್ದಾರೆ ಹುಶಾರ್. ಬೇಕಾದರೆ ಕೆಳಗೆ ಇಳಿದು ತಾಳ್ಮೆಯಿಂದ ಹಾಯ್ ಹೇಳಿ ಪರವಾಗಿಲ್ಲ, ಹಠ ಸಾಧಿಸಲು ಹೋಗಬೇಡಿ ;)

ಹೆಬ್ಬಾಳ ಮೇಲುಸೇತುವೆ ಬಳಿ ನನ್ನ ವೀರವನಿತೆ ಕ್ಯಾಮೆರಾದಲ್ಲಿ ಹಾಯ್ ಅಂದಿದ್ದು.


ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Sunday, November 8, 2015

ಬ್ಯಾಕೆಂಡ್-೮

["ಇಲ್ಲಿ ಕಸವನ್ನು ಹಾಕಬಾರದು"]


ಬಹುಶಃ ಇದನ್ನು ಮರದ ಕಾಂಡದ ಎಂಡ್ ಅನ್ನಬಹುದು. ಇರಲಿ ಬಿಡಿ, ಮರದ ಯಾವುದೋ ಬದಿಯ ಬ್ಯಾಕೆಂಡ್ ಅಂತ ಊಹಿಸಿಕೊಳ್ಳಿ! ಅಂದ ಹಾಗೆ ಇಲ್ಲಿ ಖಂಡಿತವಾಗಿ ಕಸ ಹಾಕುವ ಸಾಹಸಕ್ಕಿಳಿಯಬೇಡಿ. ಯಾಕೆಂದ್ರೆ ಪಕ್ಕದಲ್ಲಿ ಪಾದರಕ್ಷೆ ಸೇವೆ ರೆಡಿಯಾಗಿದೆ ;). ಸುಮಾರು ೨-೩ ಬಾರಿ ಅದರಿಂದ ಸೇವೆ ಮಾಡಿಸಿಕೊಳ್ಳಬೇಕಾಗಬಹುದು! (ಸದ್ಯಕ್ಕೆ ಲೂನಾರ್ಸ್ ಸೇವೆ ಮಾತ್ರ ಲಭ್ಯವಿದೆ. ಬೇಡಿಕೆಗೆ ತಕ್ಕಂತೆ ಹಲವು ವಿಧದ ಚಪ್ಪಲಿ ಸೇವೆಯನ್ನು ಪರಿಚಯಿಸಲಾಗುವುದು) ಕಸ ಹೆಚ್ಚು ಹಾಕಿದಂತೆ ಸೇವೆಯ ವಿಸ್ತಾರವೂ ಜಾಸ್ತಿ. ಧರ್ಮದೇಟು ತಿನ್ನಲು ರೆಡಿ ಇದ್ದೀರೋ? ಇಗೋ ಈಗಲೆ ಕಸ ತಂದು ಸುರಿಯಿರಿ

ಮನೆ  ಪಕ್ಕ ಹಾಕಿದ್ದು. ಕಸ ಅಲ್ಲ ಮಾರಾಯ್ರೆ, ಬೋರ್ಡ್ :(

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

ಬ್ಯಾಕೆಂಡ್-೭

["ಲೇ ನಿಧಾನ್ಕಲಾ"]


ಅದೇನೋ ಹೇಳ್ತಾರೆ  ಬೆಂಗ್ಳೂರಲ್ಲಿ ಎಲ್ಲರಿಗೂ ಅವಸರ ಆದ್ರೆ ಯಾರು ಟೈಮಿಗೆ ಸರಿಯಾಗಿ ತಲುಪಲ್ಲ ಅಂತ. ಅದಿಕ್ಕೆ ಆರಾಮಾಗಿ ಹೋಗಿ ಅಂತ ಹೀಗೆ ಬರ್ದಿರ್ಬಹುದು. ಇಲ್ಲಾ, ಮೊದ್ಲೇ ಗುದ್ದಿರೋ ಜಾಗಕ್ಕೆ ಅವಸರದಲ್ಲಿ ಮತ್ತೆ ಹೊಡೆಯೋದು ಬೇಡಾಂತ ಹಿಂಬದಿ ವಾಹನದವರಿಗೆ "ಯೇ ನಿಧಾನಿಸೋ ಮಾರಾಯ" ಅಂತ ಅರುಹುತ್ತಿರಬಹುದು!


ಮನೆ ಪಕ್ಕ ಕ್ಲಿಕ್ಕಿಸಿದ್ದು!

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Friday, November 6, 2015

ಬ್ಯಾಕೆಂಡ್-೬

["ನನ್ನ ಜೀವನ, ನನ್ನ ನಿರ್ಧಾರ"]


ಕನ್ನಡ ರಾಜ್ಯೋತ್ಸವ ನಿಮಿತ್ತ ಮತ್ತಷ್ಟು ರುಚಿಕರ ಬ್ಯಾಕೆಂಡ್ಗಳು.

ಸಕ್ಕತ್ ಬೋಲ್ಡ್ ಕಣ್ರಿ ಇವ್ರು ಅಂತ ಬೌಲ್ಡ್ ಆದಿರಿ ಜೋಕೆ! ಇಂಡಿಯಾದಲ್ಲಿ ಹಂಗಂದ್ರೆ "ನಂದೆ ಜೀವನ, ನಂದೆ ರಾಜಕೀಯ" ಅನ್ನೋದು ಮರಿಬೇಡಿ. ಇವರ ಹಿಂದೆ ಜಾಗ್ರತೆಯಿಂದ ಗಾಡಿ ಓಡ್ಸೋದು ಒಳ್ಳೇದು. ಇಲ್ಲಾಂದ್ರೆ 'ನಂದೆ ರಸ್ತೆ, ನಂದೆ ನಿಯಮ' ಅಂತ ಯಡ್ದಾ-ದಿಡ್ಡಿ ಓಡಿಸಿ ನಿಮ್ಮನ್ನ ದಾರಿ ತಪ್ಪಿಸೋದು ನಿಶ್ಚಿತ! ಅದೇ ತರ ನಿಮ್ ಹಿಂದಗಡೆ ಇವ್ರು ಕಾಣಿಸಿಕೊಂಡ್ರೆ ಸುಮ್ನೆ ದಾರಿ ಬಿಟ್ಕೊಡಿ. ಗಾಡಿ ಒಳಗೆ "ನನ್ನ ಹಾಡು ನನ್ನದು, ನನ್ನ ತಾಳ ನನ್ನದು" ಅಂತ ಹಾಡು ಕೂಡ ಹೇಳ್ತಿರ್ಬಹುದು.

ಹಿರಿಯೂರು ಪಕ್ಕ ಮಾರಿ ಕಣಿವೆಯಲ್ಲಿ ಕ್ಲಿಕ್ ಮಾಡಿದ್ದು. ಮಾರಿ ಮೈಮೇಲೆ ಬಂದು ಗಾಡಿ ಓಡ್ಸಿದ್ರೆ ಅಧೋಗತಿ!

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್ 

Thursday, November 5, 2015

Did you utter food?!!

HUNGRY ANCESTOR!!

ಬ್ಯಾಕೆಂಡ್-೫

["ಗೌಡ್ರು ಹುಲಿ, ಮುಟ್ಟಿದರೆ ಬಲಿ"]ಗೊತ್ತಾಯ್ತಲ್ವ ಇಲ್ಲಿ ಗೀಚಿದ್ದು! ಇವರೆನ್ನಾರ ಸ್ವಲ್ಪ ಟಚ್ ಮಾಡಿದ್ರೆ ಜೋಕೆ, ಅಂಗೆ ಭಸ್ಮ ಆಗೋಯ್ತದೆ ನಿಮ್ ಬಂಡಿ. ಅಷ್ಟೇ ಅಲ್ಲ ಹುಲಿ ತರ ನಿಮ್ಮನ್ನೂ ಬೇಟೆಯಾಡಿ ಮೂಳೆನೂ ಇಲ್ದಂಗೆ ನೋಡ್ಕೋತದೆ!! ಒಂದಲ್ಲ, ಎರಡಲ್ಲ, ಬರೋಬ್ಬರಿ "ತ್ರಿ ಬ್ರದರ್ಸ್" ಅವ್ರೆ ತಿಳ್ಕೊಳಿ . ಉಸಾರು!!ಗೊರುಗೊಂಟೆಪಾಳ್ಯ ಸಿಗ್ನಲ್-ನಾಗೆ ಹೊಡ್ದಿದ್ದು. ಎನ್-ಹೊಡ್ದಿದ್ದು ಅನ್ಕೊಡ್ರಿ? ಫೋಟೊ ಕಣ್ರಿ ಗಾಡಿ ಅಲ್ಲ!

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Wednesday, November 4, 2015

ಬ್ಯಾಕೆಂಡ್-೪


ಇದನ್ನು ಬ್ಯಾಕೆಂಡ್ ಬದಲು ಸೈಡ್-ಎಂಡ್ ಕರೆಯಬಹುದೇನೋ! ಇರಲಿ ಟಾಪಿಕ್ ಗೆ ಬರುವ. 

["ಮುತ್ತಿನ ಪಲ್ಲಕ್ಕಿ"]
 

ಹ್ಹ ಹ್ಹ..  ಹಾಗೆ ಅಂದುಕೊಂಡು ಮೇಲೆ ಕಟ್ಟಿರೋದು ಮುತ್ತಿನ ಗಂಟು ಅನ್ಕೋಬೇಡಿ, ಚಿಪ್ಪು ಕೂಡ ಇರಬಹುದು ;). ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುವ ಈ ಪಲ್ಲಕ್ಕಿಯ ಸಾರಥಿಯು, ಬಹುಶಃ ಗ್ರಾಹಕರನ್ನು ಅತ್ಯಂತ ದೊಡ್ಡ ಮುತ್ತು ಎಂದು ಬಿಂಬಿಸುತ್ತಿರಬಹುದೋ?

ಮಾರಿ ಕಣಿವೆಯಲ್ಲಿ ಕಂಡ ದೃಶ್ಯ.

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Tuesday, November 3, 2015

ಬ್ಯಾಕೆಂಡ್-೩

"ಬುಲ್-ಬುಲ್ ಮಾತಾಡಕ್ಕಿಲ್ವಾ"


ಮಾಮೂಲಿ ಸಿನಿಮಾ ಡೈಲಾಗ್ ಅಂತ ಇತ್ತೀಚಿಗೆ ತಿಳಿದಿದ್ದು. ಬೆಂಗ್ಳೂರ್ ಟ್ರಾಫಿಕ್ ನಲ್ಲಿ ವಾಹನಗಳದ್ದೇ ಮಾತು. ಇಷ್ಟೊಂದು ಶಬ್ಧ ಕೇಳ್ಸಿದ್ರು ಈ ಗಾಡಿಗೆ ಕಿವಿಡು ಅನ್ಸುತ್ತೆ, ಅದಿಕ್ಕೆ ಹೀಗೆ ಗೀಚಿರೋದು. ಕೇಳ್ಸಲ್ಲ ಅಂತ ಗಾಡಿ ಕಿಸ್ ಕೊಡಲು ಹೋದಿರಿ ಜೋಕೆ. ಅದರ ಸಾರಥಿ ಸರಕ್ಕನೆ ಇಳಿದು ನಿಮಗೆ ಮಾತು ಬರದಂತೆ ಮಾಡುವುದು ಗ್ಯಾರಂಟಿ.

ಬೆಂಗ್ಳೂರ್ ಟ್ರಾಫಿಕ್ನಲ್ಲಿ ಮನದನ್ನೆ ಕ್ಲಿಕ್ಕಿಸಿದ್ದು.


ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Monday, November 2, 2015

ಬ್ಯಾಕೆಂಡ್-೨


"ಉತ್ತಮ ಸಮತೋಲನ, ನಿರ್ಣಯ, ಮತ್ತು ಸಮಯ ಇವು ಒಬ್ಬ ನಿಪುಣ ಸವಾರನ ಲಕ್ಷಣಗಳು. ಇದೇ ರೀತಿಯಲ್ಲಿ ಉತ್ತಮ ಪ್ರಿಯತಮನ ಗುಣ ಕೂಡ"

ತುಂಬಾ ಅನುಭವಸ್ತರು ಅನ್ಸುತ್ತೆ ;). ಬಹುಶಃ ಆಗಲೇ ಒಮ್ಮೆ ಎಡವಿರಬೇಕು ಅಥವಾ ಕರಿಜ್ಮ ಬೈಕು ಇಟ್ಟುಕೊಂಡು ತನ್ನ ನೋಟದ ಮತ್ತು ಓಟದ ಕರಿಷ್ಮ ಪ್ರದರ್ಶಿಸಲು ಹೀಗೆ ಬರೆದುಕೊಂಡಿರಬೇಕು. ಕರಿಜ್ಮ ಬೈಕು ನೋಡಿದ ತಕ್ಷಣ ಕರಿಶ್ಮಾನಂತವರು ಆಕರ್ಷಿತರಾಗಿ ನಿಮ್ಮ ಮೇಲೆ ಒಲವು ಚಿಗುರಿದರೆ, ಈ ಸುಭಾಷಿತವು ನೆನಪಿರಲಿ ಎನ್ನುವ ಕಿವಿಮಾತು ಕೂಡ ಅಡಗಿರಬಹುದು!

ಚುಂಚನಕಟ್ಟೆಯಲ್ಲಿ ಕಂಡ ದೃಶ್ಯ

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Sunday, November 1, 2015

The pathetic Muthyalammanagar traffic heck

There is an absolute standby. Few minutes before the train arrival, the gate turns orthogonal and a huge pile of frenetic vehicles impatiently waiting at either side of barrier. This resembles a war scene where both parties gather at battlefield and wait for the conch to ignite the battle. The difference here is, the descending amplitude of railway honk in lieu of conch. Gazillion motors are lined up on either side of gates, outset for marathon eagerly waiting for the gates to open. Within moments, the train arrives rattling past the railway gate with giant honk. As the final bogie of train whoosh past the barrier, the inertia is broken on either side of gate. The ignition fires up as soon as the last compartment of train winds past the barrier. The crest gates open finally and the hysteria of prodding wagons erupt. The gate straightens up, the turmoil outsets with jarring honks of motored chariots. The war begins with either side of vehicles encroaching the opponent's lane. Swiftly, the peace is overidden by swarming wagons shoving to surpass treacherous boundary. The ordeal is about to begin and there is absolute mayhem and chaos for long period of time. The long tailed trucks wobble through crumbled path posing biggest menace in terms of breakdown and center of gravity as well. An outburst of dusting (dirting during rainy days) umpteen motors dash towards the boundary line desperately to reach culmination. The wagons snail through the railway gates and relief prevails on successful mission.

Yes, this is everyday scene of tainted Muthyalammanagar railway junction situated along Bangalore outer ring road. It does remind me of thousands of wildebeests storming to cross river bank in search of greener pastures on other side, a phenomenon common in African national parks. If you want to draw any ring of fire along ring road of Bangalore, without hesitation the stretch of Muthyalammanagar towards Goraguntanapalya for 700mts can be marked. This tiny stretch requires whopping 30mins of minimum time to cross. Sometimes the line-up can stretch for kms. This stretch can be rightly called ring-of-fire since any-time the traffic ordeal may strike. Be it festive day, holiday, peak hour, midnight, there is no distinction. Most of the time, the region will be jam packed with neurotic honks of wagons moving along constricted space. It is irony that newspaper which cover distant nuisance (NEWSense), cannot cover perpetual local issues.

TRAILER TRUCKS SNIFFLE THROUGH TRAFFIC
OH GOD! PLEASE GUIDE ME THROUGH CHAOS
UNCOOKED FLY-OVER
CONSTRICTED VEHICULAR ARRANGEMENT

LONG TALE OF TAILED VEHICLES
FINALLY THE VICTORY
HALF COOKED WORK AT THE OTHER SIDE
SAME STORY, OTHER WAY
AND IT GOES ON..
AND ON AND ON AND ON...
The chaos is attributed to none other than our honoured railway authorities. It may also be consequence of lack of co-ordination between railways and local authorities. The half baked fly-over & its rustic bar virtually smiles at the turmoil on the ground. The stubborn & adamant railway authority behaves as if they are epitome of civil engineering. This problem could have been easily overthrown by constructing at-least single lane flyover. However, as of now none of the so called public servants seems to have taken keen interest on this issue. Even if the land acquisition was a problem, a single lane fly over could be easily constructed as quick measure. It is clearly unknown as what is happening in background. Never know if there are any chances of resuming the abandoned fly-over construction.

Peace returns after nearly 30 minutes of commotion as the vehicle density subsides, unfortunately for fleeting moment.


Photo courtesy: My Better Half

PS:

Nowadays it is utter unpleasant experience if you seamlessly cross the railway gate :D

Printfriendly

Related Posts Plugin for WordPress, Blogger...