Sunday, November 29, 2015

ಬ್ಯಾಕೆಂಡ್ - ೧೩

[ಪವರ್ ಸ್ಟೆರಿಂಗ್]

ಯೆಲ್ಲಿಗ್ರಿ ಮೆಲ್ ಹತ್ತೋದು, ಮೆಟ್ಲೇ ಇಲ್ಲಾ? ರೋಡ್ ಇಂದ ಗಾಡಿನಲ್ಲಿ ಡೈರೆಕ್ಟ್ ಫ್ಲೈ-ಓವರ್ ಗೆ "stairing" ಮೂಲಕ ಹತ್ತೋಕೆ ಆಗಲ್ಲ. ಅಷ್ಟು ಗೊತ್ತಾಗಲ್ವಾ. ಜೊತೆಗೆ ಪವರ್ ಬೇರೆ ಎಲ್ಲಿಂದ ತಯಾರಿಸೋದು. ಬೇಕಾದ್ರೆ ನಿಮ್ ಗಾಡಿ ಮೇಲೆ ಏಣಿ ಇಟ್ಕೊಂಡು ಹತ್ಬಹದು ಅಷ್ಟೇ. ಏನು?!! ನಿಮ್ ಗಾಡಿ "power" ತಯಾರಿಸಿ "stair" ಹತ್ಸುತ್ತಾ? ಬೇಡಪ್ಪಾ.. ನಾನಿಗ್ಲೇ ಹೊರಟೆ!! ಪವರ್ ಇಟ್ಕೊಂಡು ಮೆಟ್ಲು ಹತ್ತಿಸ್ತಾರಂತೆ. ಆಕಾಶಕ್ಕೆ ಏಣಿ ಇಡ್ಲಿಕ್ಕೆ ಹೊರ್ಟಿದ್ದಾರೆ ಇವರು. ಸುಮ್ನೆ ಯಾವ್ದೋ ಮೆಟ್ಲು ಹತ್ಸಿದ್ರು ಅಂತ ಗಾಡಿನೇ ರಾಕೆಟ್ ಅನ್ಕೊಬಿಟ್ಟಿದ್ದಾರೆ. ಮೋಸ ಮಾಡೋಕ್ಕೆ ಎಂತೆಂತಹ ಐಡಿಯಾಗಳಪ್ಪಾ ಈಗಿನ್ ಕಾಲದಲ್ಲಿ.


ಅಯ್ಯಯ್ಯೋ ಹೌದೇ! ಸ್ಪೆಲ್ಲಿಂಗ್ ಮಿಸ್ಟೇಕ್ ಅಂತೆ.. ಸಾರಿ ಕಣ್ರಿ ಏನೇನೋ ಮಾತಾಡ್ಬಿಟ್ಟೆ ಬೇಜಾರ್ ಮಾಡ್ಕೋಬೇಡಿ. ಏನೋ ಪವರ್ ಸ್ಟೀರಿಂಗ್ ಇಟ್ಕೊಂಡು ರೋಯ್ ಅಂತ ತಿರಿಗಿಸುವಾಗ ಸ್ವಲ್ಪ ಸ್ಪೆಲ್ಲಿಂಗ್ ಕೂಡ ತಿರ್ಕೊಂಡಿದೆ ಅನ್ಸುತ್ತೆ. ಅತ್ವಾ "power-steering" ಗಾಡಿ ಓಡ್ಸೋವಾಗ ಎಲ್ಲೋ ಹತ್ಸಕ್ಕೆ ಹೋಗಿ "power-stairing" ಆಗೋಯ್ತಾ? ಏನೇ ಇರ್ಲಿ ಮತ್ತೊಮ್ಮೆ ಐ ಆಮ್ ಎಕ್ಸ್-ಟ್ರೀಮ್ಲಿ ಸಾರಿ ಕಣ್ರೀ.


ಸಿಕ್ಕಾಪಟ್ಟೆ ಟ್ರಾಫಿಕ್ ಮಧ್ಯೆ ಗಾಡಿ "power-off" ಆಗಿರೋವಾಗ ಹೆಬ್ಬಾಳ ಸಿಗ್ನಲ್ ಬಳಿ ತೆಗ್ದಿದ್ದು.

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

No comments:

Post a Comment

Printfriendly

Related Posts Plugin for WordPress, Blogger...