ಈ ನಾಯಿ ಮರಿಯಿದ್ದಾಗಿಲಿಂದಲೂ ನನ್ನನ್ನು ಹಿಂಬಾಲಿಸಿ, ಕಾಲು ನೆಕ್ಕಲು ಬರುತ್ತಿತ್ತು. ಈಗ ಸ್ವಲ್ಪ ದೊಡ್ಡದಾಗಿದೆ! ಪಕ್ಕದ ಮನೆಯವರದ್ದು. ಈಗಲೂ ಹೋದಾಗ ನನ್ನನ್ನು ಮಾರುದಕ್ಕೂ ಹಿಂಬಾಲಿಸುತ್ತದೆ. ನಮ್ಮದು ಹಳ್ಳಿ ಊರು ಆದರೂ ಬೀದಿ ನಾಯಿಗಳಿಗೇನೋ ಕಡಿಮೆ ಇಲ್ಲ. ರೋಡಿನಲ್ಲಿ ಸೈಕಲ್ ಅಥವಾ ವಾಕಿಂಗ್ ಮಾಡಿದಾಗಲೂ ಅವುಗಳ ಉಪಟಳ.ಹಾಗಿದ್ದಾಗ ನನ್ನ ಬಳಿ ಇವನು ಒಂತರಾ ಧೈರ್ಯ ಇದ್ದಂತೆ. ಹಾಗೆ ಅದಕ್ಕೂ ಕೂಡಾ ಬೇರೆ ಬೀದಿ ನಾಯಿಗಳಿಂದ ನಾನು ರಕ್ಷಣೆ ಇದ್ದಂತೆ. ಹಾಗೆಯೇ ಇದ್ದಾಗ ಸುಮ್ಮನೆ ಇರುವವ, ನನ್ನ ಜೊತೆ ಬಂದಾಗ ಸ್ವಲ್ಪ ಜಾಸ್ತಿಯೇ attitude ತೋರಿಸಿ ಇದ್ದ ನಾಯಿಗಳಿಗೆಲ್ಲಾ ಬೊಗಳುತ್ತಾನೆ. ಉಳಿದ ನಾಯಿಗಳು ನನ್ನ ನೋಡಿ ಸುಮ್ಮನಾಗುತ್ತದೆ. ನನಗೂ ಬೀದಿ ನಾಯಿಗಳೆಂದರೆ ಧೈರ್ಯ ಕಡಿಮೆ, ಧೈರ್ಯ ಜಾಸ್ತಿನೂ ಬೇಡ ಬಿಡಿ. ಅವುಗಳೊಂದಿಗೇಕೆ ಬೀದಿ ಜಗಳ ಅಂತಾ! ಅವುಗಳ ಹಿಂಡು ಕಂಡರೆ ನಾನು ಹಲವು ಬಾರಿ ವಾಪಸ್ ಹೋಗಿದ್ದು ಉಂಟು. ಏನು ಮಾಡುವುದು ಹೇಳಿ "some battles are not worth fighting". ಇಲ್ಲಿ ಕೂಡಾ ಹಾಗೆ.
ಕೆಳಗಿರುವ ಕಪ್ಪು ನಾಯಿಗೆ ಸ್ವಲ್ಪ ವಯಸ್ಸಾಗಿದೆ ಅದಿಕ್ಕೆ ನಮ್ಮವನು ಸ್ವಲ್ಪ ಜಾಸ್ತಿಯೇ ಗಾಂಚಾಲಿ ತೋರಿಸ್ತಾ ಇದ್ದ!
ಮಗಾ ಮಧ್ಯ ಕೈಕೊಡಲ್ಲ ತಾನೇ!
ದೊಡ್ ನಮಸ್ಕಾರ ಕಣಣ್ಣ!
ಆದರೂ ನನ್ನ ವಾಕಿಂಗ್ ದೋಸ್ತ್ ಬಂದಾಗ ನನಗೂ ಸ್ವಲ್ಪ ಧೈರ್ಯ ಬರುತ್ತದೆ ಆದರೂ ಅವನ ಧೈರ್ಯ ನೋಡಿ ಎಲ್ಲವೂ ಠುಸ್ ಆಗುತ್ತದೆ ನೋಡಿ. ಒಟ್ಟಿನಲ್ಲಿ ಫೇಕ್ ಆದರೂ ಕೊನೆಗೆ, ಇವನಿಗೆ ನಾನು ಧೈರ್ಯ ನನಗೆ ಇವನು ಧೈರ್ಯ! ಯಾರಿಗೊತ್ತು ತನ್ನ ಸಂತತಿಯವರ ಹತ್ತಿರ ಮಾತನಾಡಿ ನನ್ನ ಅಭಿಪ್ರಾಯ ಮೂಡಿಸಿರಲೂಬಹುದು ಮುಂದಿನ ನನಗೆ ಉಪಯೋಗವಾಗುವಂತೆ :-) ಸಧ್ಯಕ್ಕೆ ಇವನ ಚಿತ್ರ ನೋಡಿ ಆನಂದಿಸಿ!
No comments:
Post a Comment