Sunday, June 5, 2016

ಬ್ಯಾಕೆಂಡ್-೧೮

[
ನಾಡಿನ ಜನಪ್ರಿಯವಾದ
ಮೋಹಿನಿ ನಶ್ಯ
]


ಹ ಹ ಹ್ಹ ಹ್ಹಾ!

ಅರೆರೆ!! ಮೋಹಿನಿಗೆ ಒಲಿದು ಭಸ್ಮಾಸುರ ಬಂದಂನೆಂದು ತಿಳಿದಿರಾ! ಇದೇನು ಯಕ್ಷಗಾನ ಶೋ ಅಲ್ಲ ಬದಲಾಗಿ ನನ್ನ ಬ್ಯಾಕೆಂಡ್ ಪ್ರದರ್ಶನ ಮಾರಾಯ್ರೆ, ಆದರೆ ಸ್ವಲ್ಪ ಡಿಫರೆಂಟ್ ಅಷ್ಟೆ ;). ನಮ್ಮ ಕರಾವಳಿಯ ನಶ್ಯ ಕೂಡ ಹಾಗೆಯೇ. ಮೋಹಿನಿ ಭಸ್ಮಾಸುರನನ್ನು ಬೂದಿ ಮಾಡಿದಂತೆ, ನಮ್ಮ ನಶ್ಯ ಕೂಡ ಮೋಹಿನಿಯಂತೆ ಆಕರ್ಷಿಸಿ ಮತ್ತೆ ಹಾಕೊಂಡವರ ಮೂಗನ್ನು ಭಸ್ಮ ಮಾಡುವುದು ಎಲ್ಲರಿಗೂ ತಿಳಿದ ವಿಷಯವೇ. ಆದರೂ ಮೋಹಿನಿಯ ಆಕರ್ಷಣೆಯಂತೆ, ನಶ್ಯದ ಪಾಪುಲಾರಿಟಿ ಕೂಡ ಕಡಿಮೆಯೇ ಆಗುವುದಿಲ್ಲ. ಚಿತ್ರ ನೋಡಿದರೆ ತಿಳಿಯುವುದಿಲ್ಲವೇ? ನನ್ನ ಕ್ಯಾಮೆರಾ ಕೂಡ ಅದರ ನಶೆಗೆ ಆಕರ್ಷಿತಗೊಂಡು ನಂತರ ನಿರಂತರ ಸೀನು ತಾಳಲಾರದೆ, ಕಣ್ಣು ಪಿಳಿಪಿಳಿಗೊಂಡು ಅದರ ವೈಟ್ ಬ್ಯಾಲೆಂಸ್ ಕೂಡ ಆಚೀಚೆ ಆಗಿ ಚಿತ್ರವೆಲ್ಲಾ ಬೂದು ಬಣ್ಣಕ್ಕೆ ತಿರುಗಿದೆ. ಇದಕ್ಕಿಂತ ಹೆಚ್ಚಿನ ಪ್ರೂಫ್ ಬೇಕೆ? ಚ್ಯಾಂಸೆ ಇಲ್ಲಾ!! ನನ್ನ ಕ್ಯಾಮೆರಕ್ಕೂ ಜೀವ ಇದೆ ಕಣ್ರಿ ನಿರ್ಜೀವ ಅನ್ನಬೇಡಿ! ಹಾಗಂತ ಹೇಳಿ ನನಗೇನು ನಶೆ ಎದ್ದಿಲ್ಲ ಗೊತ್ತಾಯ್ತಾ!

ಅಂದಹಾಗೆ ನಮ್ಮ ಸುಂದರ ಕುಂದಾಪುರ ತಾಲೂಕಿನ ಬಾರ್ಕೂರು ಪಟ್ಟಣದ ಅಂಗಡಿಯವರು ಉತ್ತಮ ತಲೆಬರಹವನ್ನೇ ನೀಡಿದ್ದಾರೆ. ಮೋಹಿನಿಯಂತೆ ಆಕರ್ಷಿಸಲು "ನಾಡಿನ ಜನಪ್ರಿಯವಾದ" ಎಂಬ ಫಾಲ್ಸ್ ಟ್ಯಾಗ್ ಅನ್ನೂ ನೀಡಿದ್ದಾರೆ. ಬಹುಶ: ಇದರಿಂದ ಹಲವು ಭಸ್ಮಾಸುರರನ್ನು ಆಕರ್ಷಿಸಲು ಸಾಧ್ಯ ಎನ್ನುವುದು ಮಹಾನುಭಾವರ ಲೆಕ್ಕಾಚಾರ ಇರಬಹುದು. ಇರಲಿ ನನ್ನ ಬ್ಯಾಕೆಂಡ್ ಸರಣಿಗೆ ಇವರ ಕೊಡುಗೆಯೂ ದೊರೆತಿದೆ ಎಂಬುದು ನನಗೆ ಹರ್ಷದಾಯಕ ವಿಚಾರ. ಸುಮಾರು ವರ್ಷ ಹಿಂದೆ ತೆಗೆದಿದ್ದು ಈಗ ಕೈಗೆ ಸಿಕ್ಕಿತ್ತು. ಏನು! ಇಲ್ಲಪ್ಪಾ ಹಾಗೆ ಸಿಕ್ಕಿದ್ದು, ಇಲ್ಲಿ ತನಕ ಸೀನ್ತಾ ಇರ್ಲಿಲ್ಲ ಮಾರಾಯ್ರೆ!

ಹಾಗೆಯೇ ಹಳೆಯ ಚಿತ್ರಗಳನ್ನು ಜಾಲಾಡುತ್ತಿರುವಾಗ ನನ್ನ ನೋಟಕ್ಕೆ ಸಿಲುಕಿದ ಬ್ಯಾಕೆಂಡ್ ಚಿತ್ರವಿದು. ಬಹುಶಃ "ಬಾಕಿಲು ಎಂಡ್" ಎಂದರೂ ತಪ್ಪಾಗದು. ಅದಕ್ಕೆ ಹೇಳೋದು ಹಳೆದನ್ನು ಹಾಗೆಯೇ ಬಿಸಾಡಬಾರದು [ಹಾಗಂತ ಹೇಳಿ ಹಳೆ ನಶ್ಯೆಯನ್ನು ಉಪಯೋಗಿಸಬೇಡಿ ;)]. ಸುಮಾರು ವರುಷದ ನಂತರ ಹೀಗೆಯೇ ಉಪಯೋಗಕ್ಕೆ ಬಂದರೂ ತಪ್ಪಿಲ್ಲ. ಅರೆರೆ ಇಲ್ಲಪ್ಪಾ! ಚಿತ್ರದ ನೋಟಕ್ಕೆ ನಾನೇನು ಭಸ್ಮ ಆಗಿಲ್ಲ. ಚೆನ್ನಾಗಿಯೇ ಇದ್ದೇನೆ.

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

No comments:

Post a Comment

Printfriendly

Related Posts Plugin for WordPress, Blogger...