[ ಸುವರ್ಣ (ಕ)ನಾ (ರ್ನಾ)ಟಕ ಸಾರಿಗೆ ]
ಇದೊಂದು ತರಹ ಮ್ಯಾನಿಪುಲೇಟೆಡ್ ಬ್ಯಾಕೆಂಡ್ ಅನ್ನಬಹುದು. ಯಾಕೆಂದರೆ ಒರಿಜಿನಾಲಿಟಿಯನ್ನು ಯಾರೋ ಸ್ವಹಿತಾಸಕ್ತಿಗೆ ತಿರುಚಿದ್ದಾರೆಂಬುದು ದಟ್ಟವಾಗಿದೆ. ಅರೆರೆ ನನ್ನ ಬ್ಯಾಕೆಂಡ್ ಸರಣಿ ಟಿಆರ್ಪಿ (TRP) ಹೆಚ್ಚಿಸಲು ಫೋಟೋಶಾಪ್ ಮಾಡಿದ್ದು ಅಲ್ಲ ಮಾರಾಯ್ರೆ. ಹಾಗೆ ದಾರಿಯಲ್ಲಿ ಹೋದಾಗ ಕಂಡಿದ್ದು. ಮೀಡಿಯಾದವರಷ್ಟು ಕ್ರೂರಿ ನಾನಲ್ಲ, ನನಗದರ ಅಗತ್ಯವೂ ಇಲ್ಲ!
ಒಹೋ ಇದು ನಾಟಕ ಮಂದಿಯನ್ನು ಸಾಗಿಸುವ ವಾಹನ ಅನ್ಸುತ್ತೆ ಅದಿಕ್ಕೆ ಸ್ವಲ್ಪ ಮಾಡಿಫೈ ಮಾಡಿರಬೇಕು.ಪಾಪ ಇದರಲ್ಲಿ ಸಂಚರಿಸುವ ಸಭ್ಯರಿಗೂ ಕೂಡ ಟ್ರಾನ್ಸಿಟ್ ಸಮಯದಲ್ಲಿ 'ಡ್ರಾಮಾ ಆರ್ಟಿಸ್ಟ್' ಅನ್ನುವ ಕಳಂಕಿತ ಪಟ್ಟ ಬೇರೆ. ಏನೇ ಇರಲಿ ಸಂಸ್ಥೆಯೂ ಅದೇ ತರಹ ಅನ್ನೋದು ಅವರ ಅಂಬೋಣ. ಡೀಸೆಲ್ ಬೆಲೆ ಕಡಿಮೆ ಆದ್ರೂ ಟಿಕೆಟ್ ಬೆಲೆ ಮಾತ್ರ ಇಳಿಸೊಲ್ಲ. ಬೆಲೆ ಜಾಸ್ತಿ ಆದ್ರೆ ಮಾತ್ರ ಮುಂದಿನ ದಿನವೇ ಬೇಕಾಬಿಟ್ಟಿ ಏರಿಸೇಬಿಡ್ತಾರೆ. ಸಂಸ್ಥೆಗೆ ಅಷ್ಟು ಕೋಟಿ ಇಷ್ಟು ಕೋಟಿ ಲಾಸ್ ಅನ್ನೋದು ಅವರ ನಾಟಕ. ದುಡ್ಡೇನು ಮಾಡ್ತಾರೋ? ಪಾಪ ನೌಕರರು ಯಾವಾಗ್ಲೂ ಸಂಬಳ ಜಾಸ್ತಿ ಮಾಡಕ್ಕೆ ಧರಣಿ ಹೂಡೋದು ಅನಿವಾರ್ಯವಾಗುತ್ತೆ. ಮಧ್ಯದಲ್ಲಿ ಯಾವ ನುಂಗಣ್ಣನ ಕೈವಾಡವಿದೆಯೋ ನಾ ಕಾಣೆ. ಅಲ್ಲಾ! ಇತ್ತೀಚಿಗೆ ಮೂರು ಜನ ಕಾರಿನಲ್ಲಿ ಮಂಗಳೂರಿಗೆ ಹೊರಟರೆ ನಮ್ಮ (ಕ)ನಾ(ರ್ನಾ)ಟಕ ಸಾರಿಗೆಯಲ್ಲಿ ಹೋಗೋದಕ್ಕಿಂತ ಕಡಿಮೆ ಆಗುತ್ತದೆ ಅನ್ನೋದು ಬಹುಜನರ ಲೆಕ್ಕಾಚಾರ. ಏನೇ ಇರಲಿ ದರದ ಬಗ್ಗೆ ಸಂಸ್ಥೆ ಚಿನ್ನದಂತ ನಾಟಕ ಆಡ್ತಿರೋದು ಮಾತ್ರ ಗ್ಯಾರಂಟಿ. ಜೊತೆಗೆ ನಾಟಕ ತೋರಿಸಿ ಮಂಗ ಮಾಡ್ತಿರೋದು ಬಹುಜನರಿಗೆ ತಿಳಿದಿದ್ರೂ, ಬಸ್ ಬಿಡಕ್ಕಾಗುತ್ತದೆಯೇ? ಅದನ್ನೇ ಸಂಸ್ಥೆಯವರೂ ಅರಿತಿದ್ದಾರೆ ಕೂಡ. ಎಲೆಕ್ಷನ್ ಟೇಮಲ್ಲಿ ಮಾತ್ರ ನಮ್ಮ ರಾಜಕೀಯ ಧುರೀಣರ ನಾಟಕ ಇರೋದಿಂದ್ರ ಸಾರಿಗೆ ನಾಟಕ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ.
ಅನ್ನಬ್ರಹ್ಮನ ದೇಗುಲ, ನೋಡಿರಿ ಧರ್ಮಸ್ಥಳ! ಸರಳ ಜೀವಿಯಾದ ಮಂಜುನಾಥನ ದರ್ಶನ ಪಡೆದು, ರುಚಿಕರವಾದ ಮೃಷ್ಟಾನ್ನ ಭೋಜನವ ಸವಿದು, ಮಂಗಳೂರಿನ ಕಡೆಗೆ ಚಲಿಸುತ್ತಿದ್ದಾಗ ದಟ್ಟ ಕಾನನದ ಮಧ್ಯೆ ತೆಗೆದ ನಾಟಕದ ದೃಶ್ಯವಿದು. ಯಾವ ಭಾಗ ಅಂತ ಕೇಳಬೇಡಿ, ಫೋಟೋ ತೆಗೆಯೋ ಮಧ್ಯೆ ಅಷ್ಟೊಂದು ಪುರುಸೊತ್ತಿರಲಿಲ್ಲ ಮಾರಾಯ್ರೆ. ಯಾರೋ ಕಿಡಿಗೇಡಿಗಳ ಕೆಲಸ ಅನ್ನೋದು ನಮಗೂ ಗೊತೈತೆ ಆದ್ರೂ ಸ್ವಲ್ಪ ಶೋ-ಆಫ್ ಮಾಡೋಣ ಅಂತ ಬರೆದಿರೋದು.
ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

No comments:
Post a Comment