"ಉಪವಾಸ ಈ .. ನೀ ಚೂರು ಮರೆಯಾದರೆ" ಕನ್ನಡದ ರೊಮಾಂಟಿಕ್ ಪದವನ್ನು ಇತ್ತೀಚಿಗೆ ಕೇಳಿದೆ. ಅದರ ಜೊತೆ ಈ ಕಾಲ್ಪನಿಕ ಹಾಸ್ಯ ಪುಟಿದೆದ್ದಿತು. ಅದರ ನಿಮಿತ್ತ ಈ ಸಣ್ಣ ಬರಹ. ಒಂತರ "battle of sarcasm" ಅನ್ನಬಹುದು.
"ಉಪವಾಸ ಈ ದೇಹಕ್ಕೆ .. ನೀ ಚೂರು ಮರೆಯಾದರೆ" ಗುಂಡನ ಗಾರ್ಧಭ ಕಂಠದಿಂದ ಪದಗಳು ಉದುರಿತು. ಬೆಳಗ್ಗಿನ ಬಿಸಿಬಿಸಿ ದೋಸೆ ಸವಿಯುತ್ತ ಪದೇ ಪದೇ ಹಾಡನ್ನು ಹೇಳುತ್ತಿದ್ದನು. ಒಂದೆರಡು ಸಲ ತಿನ್ನುವಾಗ ಹಾಡಿದ್ದರಿಂದ ತಿಂದ ದೋಸೆ ಸ್ವರಕ್ಕೆ ಸೇರಿ, "ದೋಸೆ ಸ್ವರದೊಳಗೋ, ಸ್ವರ ದೋಸೆಯೊಳಗೋ" ಎಂಬ ದಾಸರ ಹಾಡನ್ನು ಹೇಳುವ ಮಟ್ಟಿಗೆ ಕೆಮ್ಮುತ್ತಿದ್ದನು. ಮಡದಿ ನೀರು ತಂದುಕೊಟ್ಟಾಗಲೇ ಅದು ಕಡಿಮೆಯಾಗಿದ್ದು.
"ಏನ್ರಿ.. ಬಾರಿ ಹಾಡು ಹೇಳ್ತಿದೀರಾ.." ನಾಚಿಕೊಂಡು ದೋಸೆಯನ್ನು ತಟ್ಟಿಗೆ ಹಾಕಿದಳು.
"ಹೂ ಕಣೆ.. ನೀನು ಪ್ರತಿ ಸಲ ಊರಿಗೆ ಹೋದಾಗ ನನಿಗೆ ಉಪವಾಸನೆ ಆಲ್ವಾ ಇಲ್ಲಿ" ಎಂದು ತಟ್ಟನೆ ಉತ್ತರಿಸಿದನು.
ಮಡದಿಗೆ ಏನು ಹೇಳುವುದೋ ತಿಳಿಯಲಿಲ್ಲ. ಸೀದಾ ಅಡುಗೆ ಮನೆಗೆ ನಡೆದಳು. ಅವಳ ರೊಮಾಂಟಿಕ್ ಲಹರಿಗೆ ಗುಂಡ ತಣ್ಣೀರೆರಚಿದ್ದನು.
ಮಧ್ಯಾಹ್ನದ ಊಟದ ಸಮಯವಾಯಿತು. ಗುಂಡನಿಗೆ ಸಾರಿನ ಖಾರ ತಡೆಯಲು ಸಾಧ್ಯವಾಗಲಿಲ್ಲ. ಪಲ್ಯ ಗೊತ್ತಾಗಿದ್ದು ಮಡದಿ ಜ್ವಾಲಾಮುಖಿಯಾಗಿದ್ದಾಳೆಂದು!! ಅದೇ ಸಮಯಕ್ಕೆ ಅಡುಗೆ ಮನೆಯಿಂದ "ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ" ಎಂದು ಮಡದಿ ಉದುರಿದಾಗಲೇ ಗುಂಡನಿಗೆ ತನ್ನಿಂದಾದ ಪ್ರಮಾದ ಮನದಟ್ಟಾಗಿದ್ದು.

No comments:
Post a Comment