ಬಹಳ ಹಿಂದೆ ಬರೆದ ಇದು ಒಂದು ಕಾಲ್ಪನಿಕ ಬರಹ. ಕಂಪ್ಯೂಟರಿನ ಯಾವುದೋ ಮೂಲೆಯಲ್ಲಿ ಬಿದ್ದಿದ್ದನ್ನು ಹೆಕ್ಕಿ ಬ್ಲಾಗಿಗೆ ಸೇರಿಸಿದ್ದೇನೆ :-).
ದೀಪಾವಳಿಯ ವೀಕೆಂಡ್, ನೆಮ್ಮದಿಯಾಗಿ ಕುಟುಂಬದವರೊಂದಿಗೆ ಹಬ್ಬ ಆಚರಿಸುವ ಅಂದರೆ, ಅಂದೇ ಮ್ಯಾನೇಜರ್ ಕಾಲ್ ಬರಬೇಕೆ.
"ಮಂಜು ಸಮ್ ಇಶ್ಯೂ ಹಾಸ್ ಕಮ್ ಅಪ್, ಕುಡ್ ಯು ಲುಕ್ ಇಂಟು ಇಟ್ ಆನ್ ಪ್ರಯಾರಿಟಿ" ಅಂತಾ ಬಾಂಬ್ ಸಿಡಿಸಿದರು.
"ಬಟ್ ಸರ್, ಟುಡೆ ಈಸ್ ಫೆಸ್ಟಿವಲ್ ಡೇ. ಕುಡ್ ಯು ಆಸ್ಕ್ ಸಮ್ ಅಧರ್ ಟು ಹಾವ್ ಎ ಲುಕ್?" ಮಂಜು ವಾಪಾಸ್ ಹೇಳಿದನು
"ನೋ ನೋ ಮಂಜು, ದಿಸ್ ಈಸ್ ಪ್ರಯಾರಿಟಿ. ಇಟ್ ವಿಲ್ ಕಾಸ್ಟ್ ೧೦೦ಮಿ$ ಟು ದ ಕಂಪನಿ. ಯು ಹಾವ್ ಟು ಲುಕ್ ಇಂಟು ಇಟ್" ಅಂತಾ ಕಾಲ್ ಕೆಳಗಿಳಿಸಿದನು.
ತಂಡದಲ್ಲಿ ಬೇರೆ ಧರ್ಮದವರಿಗೆ ಸಹಾಯ ಕೇಳಿದರೂ ಯಾರು ಬಂದಿರಲಿಲ್ಲ. ಮಂಜು ಕಷ್ಟಪಟ್ಟು ದುಡಿಯುತ್ತಿದ್ದರಿಂದ, ಮ್ಯಾನೇಜರ್ ಗೂ ಇವನ ಮೇಲೆ ಕೆಲಸ ತಾಗಿಸುವುದು ಗೀಳಾಗಿ ಬಿಟ್ಟಿತ್ತು. ಕೆಲಸಕ್ಕೆ ಸರಿಯಾದ ಬ್ಯಾಕಪ್ ಇಡಿ ಎಂದರೂ, ಮ್ಯಾನೆಜರ್ ನೆಪ ಹೇಳುತ್ತಿದ್ದನು.
ಸರಿ ಎಂದು ಹಬ್ಬದ ದಿನ ಲ್ಯಾಪ್-ಟಾಪ್ ಓಪನ್ ಮಾಡಿ, ಲಾಗ್ ಚೆಕ್ ಮಾಡಿದನು. ಕಂಪನಿಯವರೋ, ಎಲ್ಲರೂ ಸ್ಟೇಟಸ್ ಕೇಳುವವರು, ಕೆಲಸ ಮಾಡುವವನು ಇವನೊಬ್ಬನೆ. ಸರಿ ಐಟಿ ಕೂಲಿಯವರ ಪಾಡು ತಿಳಿಯುವುದಿಲ್ಲವೇ. ಎಲ್ಲಿ ಏನಾಗುತ್ತೋ ಅಂತಾ, ಲಾಗಿನ್ ಆಗುವುದು ಅನಿವಾರ್ಯವಾಯಿತು
.
ಸುಮಾರು ಎರಡು ದಿನ ಕೆಲಸ ಮಾಡಿದ ನಂತರ ತಿಳಿಯಿತು, ಇದು ಕಾಂಫಿಗರೇಶನ್ ಎರರ್ ಅಂತಾ. ಮಂಜು ತಲೆ ಚಚ್ಚಿಕೊಂಡನು. ಎರಡು ದಿನ, ಹಬ್ಬದ ಸುಖವೆಲ್ಲ ಸಾಫ್ಟ್-ವೇರ್ ಪಾಲಾಗಿತ್ತು.
ವೀಕೆಂಡ್ ಕೆಲಸ ಮಾಡಿದ್ದರಿಂದ, ಎರಡು ದಿನ ಬಳಿಕ ಮಂಜುಗೆ ಹುಶಾರು ತಪ್ಪಿತು. ಸಿಕ್ ಲೀವ್ ಕೂಡಾ ಹಾಕಿದ್ದನು. ಮ್ಯಾನೇಜರ್ ಯುರೋಪ್ ಪ್ರವಾಸ ಮಾಡುತ್ತಾ ಮಜಾ ಮಾಡುತ್ತಿದ್ದನು. ಅಂದು ಕೂಡಾ ಕಾಲ್ ಮಾಡಿ, ಇದೇ ತರಹ ಮತ್ತೊಂದು ಇಶ್ಯೂ ಬಂದಿದೆ ಲಾಗಿನ್ ಆಗು ಅಂದನು. ತಂಡದಲ್ಲಿ ಎಲ್ಲರೂ ರಜೆ ಹಾಕಿದ್ದರಿಂದ ಅನಿವಾರ್ಯವಾಗಿ ಮತ್ತೆ ಲಾಗಿನ್ ಆದನು. ಜ್ವರದ ಮಧ್ಯೆಯೆ ಫಿಕ್ಸ್ ಕೂಡಾ ಮಾಡಿ ಆಯಿತು, ಅದು ಬೇರೆ ಅನ್ಯರ ತಪ್ಪಾಗಿತ್ತು. ಇವನ ರೋಗ ಮತ್ತಷ್ಟು ಹೆಚ್ಚಾಗಿ, ಕಡೆಗೆ ಇನ್ನೂ ಎರಡು ದಿನ ರಜೆ ಹಾಕುವಂತಾಗಿತ್ತು.
ಮುಂದಿನ ವಾರ, ರಜೆಯ ಮೋಜಿನ ನಂತರ ಬೀಗುತ್ತಿದ್ದ ಮ್ಯಾನೇಜರ್, ಯುರೋಪಿನಿಂದ ತಂದ ಚಾಕಲೇಟ್ ಹಂಚಿದನು. ವೆಲ್ ಡನ್ ಟೀಮ್ ಅಂತಾ ತಂಡಕ್ಕೆ ಶಹಭಾಸ್ ನೀಡಿದನು. ಮಂಜುಗೆ ಒಮ್ಮೆಲೆ ಧಕ್ ಎಂದಿತು. ಅಲ್ಲಾ ಕೆಲಸ ಮಾಡಿದ್ದು ಒಬ್ಬನೆ, ಪ್ರಶಂಸೆ ಎಲ್ಲಾರಿಗೂ, ಇದೆಂತಹ ನ್ಯಾಯ ಅನ್ನೋದು ಅವನಿಗೆ ಬೇಸರವಾಯಿತು.
ತಿಂಗಳ ಕೊನೆಯ ದಿನ ಎಂದಿನಂತೆ ಎಲ್ಲರೂ ಲೀವ್ಸ್ ಅಪ್ಪ್ಲೈ ಮಾಡಿ ಅಂತಾ ಮ್ಯಾನೇಜರ್ ಮೇಲ್ ಕಳುಹಿಸಿದನು. ಮಂಜು ಕೂಡಾ ಮೂರು ದಿನ ಬದಲು ಎರಡು ದಿನ ಅಪ್ಪ್ಲೈ ಮಾಡಿದನು. ಸ್ವಲ್ಪ ಸಮಯದ ನಂತರ ಮ್ಯಾನೇಜರ್ ಮಂಜು ಬಳಿ ಬಂದು
"ಮಂಜು, ಐ ಸೀ ಯು ಅಪ್ಪ್ಲೈಡ್ ಓನ್ಲಿ ಟು ಡೇಯ್ಸ್ ಲೀವ್. ಪ್ಲೀಸ್ ಆಪ್ಲಾಯ್ ತ್ರೀ ಡೇಯ್ಸ್" ಅಂತಾ ತಾಕೀತು ಮಾಡಿದನು.
"ಬಟ್ ಹ್ಯಾರಿ, ಐ ಹಾವ್ ವರ್ಕಡ್ ಫಾರ್ ಫುಲ್ ವೀಕೆಂಡ್ ಆಂಡ್ ಒನ್ ಫುಲ್ ಡೇ ಡ್ಯೂರಿಂಗ್ ಸಿಕ್ ಲೀವ್. ಸೋ ಐ ಹಾವ್ ಓನ್ಲೀ ಟು ಡೇಯ್ಸ್ ಆಫ್ ಲೀವ್" ಅಂತ ಮಾರುತ್ತರ ನೀಡಿದನು.
"ದಟ್ ವಾಸ್ ಫಾರ್ ಓನ್ಲೀ ಕಸ್ಟಮರ್ ಅರ್ಜೆಂನ್ಸಿ ಯು ನೋ. ಯು ಟುಕ್ ಲಾಟ್ ಆಫ್ ಟೈಮ್ ಟು ಅನಲೈಸ್ ಕಾಂಫಿಗ್ ಎರರ್! ಮೋರವರ್ ಬಗ್ ಡ್ಯೂರಿಂಗ್ ಸಿಕ್ ಲೀವ್ ವಾಸ್ ಬೆಕೌಸ್ ಆಫ್ ಯುರ್ ಮಿಸ್ಟೇಕ್" ಅಂತಾ ನೀಚನಾಗಿ ನುಡಿದನು ಮ್ಯಾನೇಜರ್
ಎಲಾ ಇವನಾ! ತಾಳು ಮಾಡ್ತೀನಿ ಅಂತಾ ಮಂಜು ಸುಮ್ಮನೇ ಹಾಳು ಮ್ಯಾನೇಜರ್ ಹೇಳಿದಂತೆ ಕೇಳಿದನು. ಸುಮಾರು ಒಂದು ತಿಂಗಳ ನಂತರ, ತನ್ನ ರಾಜೀನಾಮೆಯನ್ನು ಸಮರ್ಪಿಸಿದನು.
"ವೈ ಮಂಜು, ಯು ವರ್ ಎಕ್ಸೆಲೆಂಟ್ ಹಿಯರ್. ವೈ ಸಡನ್ ದಿಸಿಶನ್. ಯು ನೋ ಹೌ ಡಿಫಿಕಲ್ಟ್ ಟು ಅಡ್ಜಸ್ಟ್ ಇನ್ ನ್ಯೂ ಕಂಪನಿ? ವಿ ಹಾವ್ ಎಕ್ಸಲೆಂಟ್ ವರ್ಕ್-ಲೈಫ್ ಬ್ಯಾಲೆಂಸ್. ನೋ ಕಂಪನಿ ಪ್ರೊವೈಡ್ಸ್ ಸಚ್ ಪೇ ಪ್ಯಾಕೇಜ್ ಆಸ್ ವೆಲ್" ಅಂತ ಬೆಣ್ಣೆ ಹಚ್ಚಕ್ಕೆ ಪ್ರಯತ್ನಿಸಿದನು.
"ಐ ಹಾವ್ ಸೀನ್ ಕಂಪನಿ ವರ್ಕ್-ಲೈಫ್-ಬ್ಯಾಲೆಂಸ್ ಡ್ಯೂರಿಂಗ್ ದೀಪಾವಳಿ ಟೈಮ್ ಹ್ಯಾರಿ. ಮೈ ರೆಸ್ಪಾಂನಿಸಿಬಿಲಿಟಿ ಈಸ್ ಇಂಕ್ರೀಸಿಂಗ್ ಬಟ್ ಸ್ಯಾಲರಿ ಈಸ್ ಬಿಲೊ ಸ್ಟಾಂಡರ್ಡ್. ಎವೆರಿವೇರ್ ಸೇಮ್ ಸ್ಟೋರಿ ಬಟ್ ನ್ಯೂ ಕಂಪನಿ ಈಸ್ ಗಿವಿಂಗ್ ಮೋರ್ ಕಂಪನ್ಸೇಶನ್ ದಾನ್ ಹಿಯರ್. ಜಸ್ಟ್ ಅಕ್ಸೆಪ್ಟ್ ರೆಸಿಗ್ನೇಶನ್ ಅಂಡ್ ಇನಿಶಿಯೇಟ್ ನಾಲೆಡ್ಜ್ ಸೆಶನ್ಸ್ ಸೂನ್" ಎಂದು ಪರೋಕ್ಷವಾಗಿ ಟಾಂಟ್ ನೀಡಿದನು ಮಂಜು.
ತಲ್ಲಣಗೊಂಡ ಮ್ಯಾನೇಜರ್ ಅಲ್ಲಿಂದ ಸೀದಾ ನಡೆದನು. ನೌಕರರ ಲೀವ್ ಉಳಿಸಿದರೆ ಮ್ಯಾನೇಜರ್ ಗಳಿಗೆ ಉತ್ತಮ ಬೋನಸ್ ಸಿಗುತ್ತದೆ ಎಂದು ಬಹುದಿನದ ಬಳಿಕ ತಿಳಿಯಿತು ಮಂಜುವಿಗೆ. ಎಲ್ಲಾರೂ ಸ್ವಾರ್ಥಕ್ಕಾಗೆ ಕೆಲಸ ಮಾಡುವುದೆಂದು ಅರಿತುಕೊಂಡು ತನ್ನ ದಾರಿ ಹಿಡಿದನು.
ಸರಿ, ೧೦೦ ಮಿಡಾಲರಿನಲ್ಲಿ ಏನು ಪಾಲು ಸಿಕ್ಕಿತು, ಎಲ್ಲಾ ಮಣ್ಣುಪಾಲು!
No comments:
Post a Comment