೦೩ ಜೂನ್ ೨೦೨೧
ಅರೆರೆ ಯಾವುದೋ ರೋಮಾಂಟಿಕ್ ಮೂಡ್ ಅಲ್ಲ ಮಾರಾಯ್ರೆ. ಇನ್ನೇನು ಮಳೆಗಾಲ ಹತ್ರ ಬರ್ತಾ ಇದೆ. ಹಕ್ಕಿಗಳೂ ಕೂಡಾ ಖುಷಿ ಪಡುತ್ತಿವೆ. ನಮ್ಮ ಬುಲ್-ಬುಲ್ ಹಕ್ಕಿ ಮಳೆಯ ನಂತರ ಯಾವಾಗಲೂ ದಾಳಿಂಬೆ ಮರದ ಬಳಿ ಬಂದು ಹಾಡುತ್ತೆ ನೋಡಿ. ಇವತ್ತು ಸ್ವಲ್ಪ ಕಡಿಮೆ ಹಾಡಿದೆ ಯಾಕೋ ಗೊತ್ತಿಲ್ಲ. ತುಂಬಾ ಬೇಸರದಲ್ಲಿ ಇರೋ ತರ ಇತ್ತು ಮತ್ತು ಅಷ್ಟೋಂದು ಚುರುಕುತನ ಕೂಡಾ ಕಾಣಿಸಲಿಲ್ಲ ಅದರಲ್ಲಿ. ಬಹುಶಃ ಅದರ ಗೂಡಿಗೆ ಏನಾದರೂ ಆಯಿತೋ ಗೊತ್ತಿಲ್ಲ. ಯಾವತ್ತಿನ ಹಾಗೆ ಹಾಡಿಲ್ಲ ಜೊತೆಗೆ ಅದರ ದನಿಯಲ್ಲು ಸ್ವಲ್ಪ ಶೋಕ ಎದ್ದು ಕಾಣುತ್ತಿತ್ತು. ಏನೇ ಆಗಲಿ ಚೆನ್ನಾಗಿರಲಿ. ಈ ಹಕ್ಕಿಗಳಿಗೂ ಬದುಕೋ ಹಕ್ಕಿದೆ.
ನಾನು ಕ್ಯಾಮರಾದಲ್ಲಿ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿದೆ. ಅದರ ಧ್ವನಿ ಕೂಡಾ ಇದೆ ಕೇಳಿ ಕೊನೆಯಲ್ಲಿ. ಮಳೆ ನಿಂತ ಮೇಲೆ ಅದರ ಧ್ವನಿ ಕೂಡಾ ಬಹಳ ಇಂಪಾಗಿ ಕೇಳುತ್ತಿದೆ. ಲಾಕ್-ಡೌನ್ ಬೇರೆ, ವಾತಾವರಣವೂ ಶುಭ್ರವಾಗಿದೆ. ಹಾಡು ಕೂಡಾ ಶುಭ್ರವಾಗಿ ಕೇಳುತ್ತೆ. ಎಲ್ಲರಿಗೂ ಒಳ್ಳೆಯದಾಗಲಿ!
ಮತ್ತಷ್ಟು ಹಕ್ಕಿ ಸರಣಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : NKBirdSeries
No comments:
Post a Comment