Thursday, February 10, 2022

ಗೂಗಲ್ ಟೈಮ್ ಗಮ್ಮತ್ತು, ಜಿಲೇಬಿಗೆ ಕುತ್ತು

ರಾತ್ರಿ ಊಟದ ನಂತರ ಗುಂಡ ಮತ್ತು ನಿಂಗಿ ಎಂದಿನಂತೆ ಹರಟೆಗೆ ಮನೆಯ ಹೊರಗಡೆ ಕುಳಿತುಕೊಂಡರು. ಹೆಚ್ಚಾಗಿ  ೯ ರಿಂದ ೧೦ ರವರೆಗೆ ನಡೆಯುತ್ತೆ ಇವರ ಹರಟೆ. ಒಂದು ತರಹದ single-sided talk ಅಂದ್ರೂ ತಪ್ಪಾಗಲಾರದು. ನಿಂಗಿ ಮಾತನ್ನು ಅರಗಿಸಿ, ಕರಗಿಸಿಕೊಳ್ಳುವಷ್ಟರಲ್ಲಿ ಗುಂಡನಿಗೆ ಕೆಲವೊಮ್ಮೆ ತೂಕಡಿಕೆ ಬರುವುದು ಉಂಟು. ಆದರೂ ಅರ್ಧಾಂಗಿ ಅಲ್ಲವೇ! ಸಹಿಸಿಕೊಳ್ಳಬೇಕು ೧೦ ರ ವರೆಗೆ.

ಅದೊಂದು ದಿನ ಹರಟೆ ಹಾಗೆ ನಡಿತಾ ಇತ್ತು. ದಿನಪೂರ್ತಿ ನಡೆದ ಘಟನೆಗಳನ್ನು ನಿಂಗಿ ಉದುರುತ್ತಲೇ ಇದ್ದಳು. ಗುಂಡನಿಗೆ ಇಷ್ಟೊಂದು ಆಕಳಿಕೆ ಇದುವರೆಗೆ ಬಂದಿಲ್ಲವೇನೋ! ಬಹುಶಃ ಆಕಳಿಕೆ ಸ್ಪರ್ಧೆ ಇದ್ದಾರೆ ಬಹುಮಾನ ಬರುತ್ತಿತ್ತು ಗುಂಡನಿಗೆ.

೧೦ಕ್ಕೆ ಇನ್ನೇನು ಹತ್ತಿ ನಿಮಿಷ ಇರುವಾಗ ಗುಂಡ ನಿಂಗಿಗೆ "ನಡೆ ಮಲಗಲು ತೆರಳೋಣ ಅಂತ" ತಾಕೀತು ಮಾಡಿದನು.

ನಿಂಗಿ ಮಾತನ್ನು ನಿಲ್ಲಿಸಿ, ಮೊಬೈಲ್ ಮೇಲೆ ಕಣ್ಣಾಡಿಸಿದಳು. ಸುಮಾರು ೫ ನಿಮಿಷ  ಆಗಿರಬೇಕು, "ಅಲ್ಲವೇ ನಿದ್ರೆಗಿಂತ ಒಂದು ಗಂಟೆ ಮುಂಚೆ ಮೊಬೈಲ್ ನೋಡಬೇಡಿ ಅಂತಾ ಹೇಳಿದ್ದಲ್ಲ? ಯಾಕೆ ನೋಡ್ತಾ ಇದ್ದೀಯ" ಅಂತಾ ಗುಂಡ ಮೊಬೈಲ್ ಮುಚ್ಚಿಡಲು ನಿಂಗಿಗೆ ಹೇಳಿದನು. "ಏನಿಲ್ಲ ರೀ ಟೈಮ್ ಎಷ್ಟು ಅಂತಾ confirm ಮಾಡಕ್ಕೆ ಮೊಬೈಲ್ ಸ್ವಲ್ಪ ಓಪನ್ ಮಾಡಿದೆ ಅಷ್ಟೇ" ಅಂತಾ ನಿಂಗಿ ಮಾರುತ್ತರ ನೀಡಿದಳು. 

"ಅಲ್ಲವೇ ೫ ನಿಮಿಷ ಏನು ಟೈಮ್ ನೋಡಿದ್ದು? ಏನು ಗೂಗಲ್ ಸರ್ಚ್ ಮಾಡಿ ಟೈಮ್ ನೋಡಿದ್ಯಾ ಏನು" ಅಂತ ಅಣಕವಾಡಿದನು ಗುಂಡ. 

ಅಷ್ಟು ಹೇಳಿದ್ದೆ ತಡ , ಎರಡು ಗುದ್ದು ಗುಂಡನ ಮೇಲೆ ಬಿತ್ತು. "ಏನ್ರಿ ಹಾಸ್ಯ ಮಾಡ್ತೀರಾ? ತಾಳಿ ನಾಳೆ ಜಿಲೇಬಿ ಪ್ರೋಗ್ರಾಮ್ ಕ್ಯಾನ್ಸಲ್.  ಮೂರೂ ಹೊತ್ತು ಗಂಜಿ. ಏನಾದ್ರೂ ಮಾಡ್ಕೊಳಿ" ಅಂತ ದರದರನೆ ಮಲಗುವ ಕೋಣೆಗೆ ನುಗ್ಗಿದಳು ನಿಂಗಿ. 

"ಅಯ್ಯೋ ಶಿವನೇ. Joke provoked wife to revoke Jilebi plan" ಅಂತಾ ಗುಂಡನು ಕೂಡಾ ನಿದ್ದೆಗೆ ಜಾರಲು ಅಣಿಯಾದನು.

No comments:

Post a Comment

Printfriendly

Related Posts Plugin for WordPress, Blogger...