ಅಜ್ಜ ಮತ್ತು ಮೊಮ್ಮಗನ ಹರಟೆ ನಡೆಯುತ್ತಿತ್ತು. ಮೊಬೈಲ್ ಮುಟ್ಟಿದಕ್ಕೆ ಅಮ್ಮ ಹೊಡೆದಳು ಅಂತಾ ಮೊಮ್ಮಗ ತುಂಬಾ ಕೋಪಿಸಿಕೊಂಡಿದ್ದ. ಅವನ ಸಮಾಧಾನಿಸಲು ಅಜ್ಜನ ಮಾತುಗಳು ಹೀಗೆ ಶುರುವಾದವು.
"ಪ್ರಿಯ ಮೊಮ್ಮಗನೇ! ದೊಡ್ಡವನಾದ ಮೇಲೆ ನಿನಗೆ ನಾನು ಕೊಡಿಸುತ್ತೇನೆ ಮೊಬೈಲ್. ಯಾವುದು ಬೇಕು ನಿನಗೆ ಆಂಡ್ರ್ಯಾಯ್ಡ್ ಆಗಬಹುದಾ ಅಥವಾ ಬೇರೇನಾ?" ಎಂದು ಅಜ್ಜ ಮೊಮ್ಮಗನನ್ನು ಸಮಾಧಾನಿಸಲು ಕೇಳಿದರು.
ಮೊಮ್ಮಗ ಯೋಚಿಸುತ್ತಾ.. "ನನಗ್ ಐ-ಫೋನ್ ಬೇಕು ಅಜ್ಜ" ಎಂದಾಗ ಎಲ್ಲರಿಗು ಆಶ್ಚರ್ಯ. ಇವನಿಗೆ ಐ-ಫೋನ್ ಬಗ್ಗೆ ಯಾರು ತಿಳಿಸಿದ್ದು ಅಂತಾ ಅಮ್ಮನಿಗೆ ಆಶ್ಚರ್ಯವಾಯಿತು.
"ನಿನ್ನ ಅಜ್ಜಿ ಬಳಿ ಇರುವ ಬಟನ್ ಫೋನ್ ಇನ್ನು ಚೆನ್ನಾಗಿದೆ ಪುಟ್ಟಾ" ಎಂದು ಅಜ್ಜ ಜಾರಿಕೊಳ್ಳಲು ನೋಡಿದರು.
"ಬಟನ್ ಒತ್ತೋ ಕೈ-ಫೋನ್ ಅಲ್ಲಾ ಅಜ್ಜಾ, ಐ-ಫೋನ್ ಹೇಳಿದ್ದು ಕೊಡಿಸೋದಕ್ಕೆ" ಎಂದು ಮೊಮ್ಮಗ ನುಡಿದಾಗ ಮನೆಯವರೆಲ್ಲಾ ಒಮ್ಮೆಲೆ ಗೊಳ್ಳನೆ ನಕ್ಕರು.
No comments:
Post a Comment