ಹಲವಾರು ದಿನದ ಬಳಿಕ ಮತ್ತೆ backend ಸರಣಿ ಸ್ವಾಗತ ಸುಸ್ವಾಗತ. ಬಹಳಷ್ಟು ಹಾಗೆ ಮೊಬೈಲಿನಲ್ಲಿ ಉಳಿದುಕೊಂಡಿದೆ. unicode ಟೈಪಿಸಲು ಸ್ವಲ್ಪ ಸೋಮಾರಿತನ. ಈಗ motivation ತಗೊಂಡು ಕಡೆಗೂ ಒಂದು ಬರೆದಿದ್ದೇನೆ ನೋಡಿ!
SOUND HORD
ಹೆಬ್ಬಾಳ ಇಂದ ಹೆಣ್ಣೂರು ರಿಂಗ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕಂಡ ದೃಶ್ಯ. ಟ್ರಾಫಿಕ್ ಏನೂ ಅಷ್ಟು ಇರಲಿಲ್ಲ ಆದರೂ ಈ ವಾಹನದ ಹಿಂದಿನ ಬರಹ ಕಂಡು ಬೆಂಗಳೂರಿಗೆ ಸಮಂಜಸ ಎನಿಸಿತು.
ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚು. ಆದ್ದರಿಂದ sound ಸ್ವಲ್ಪ hard ಆಗಿ ಹೊಡಿಬೇಕು ಅಂತ ಗಾಡಿ ಮಾವುತ ಬರೆಸಿದ್ದಾರೆ ಅನ್ಸುತ್ತೆ. hard ಗಿಂತ ಸ್ವಲ್ಪ ಜಾಸ್ತಿ ಬೇಕೆಂದರೆ ಅದು hord ಆಗುತ್ತದೆ.
ಅದು ಬೇರೆ ಮೂಟೆ ತುಂಬಾ ಹೊತ್ತುಕೊಂಡು ಹೋಗುವ ವಾಹನ. ಗಾಡಿ ಬೇರೆ pickup ಕಡಿಮೆ. flyover ಏರುವಾಗ ಪಾರ್ಟಿಗೆ ಉಸಿರೇ ಬಾರದು. ಮಹಾನುಭಾವರು timepass ಮಾಡಲು
ಕಿವಿಗೆ ಹಾಕಿಕೊಂಡಿದ್ದರೆ horn ತುಂಬಾ ಜೋರಾಗಿಯೇ ಹಾಕಬೇಕಾಗುತ್ತದೆ. horn ಹೊಡೆದು ಹೊಡೆದು ಕಡೆಗೆ ನಾವೇ ಸಿಟ್ಟಿನಿಂದ hard ಆಗುತ್ತೇವೆ ಅನ್ಸುತ್ತೆ.
ತಪ್ಪಾಗಿ ಬರೆದಿದ್ದು ಅಂತಾ ಗೋತ್ತಿದೆ. ಸುಮ್ಮನೆ ತಮಾಷೆಗೆ ಹೇಳಿದೆ ಅಷ್ಟೇ! ಏನೇ ಆಗಲಿ ತಪ್ಪಾಗಿಯಾದರೂ ಸರಿಯಾಗಿ ಬರೆದಿದ್ದಾರೆ. Even a stopped clock is correct twice a day ಅನ್ನೋ ತರ!

No comments:
Post a Comment