ಕಣ್ಮನ ಸೆಳೆಯುವ ಮಾರಿಕಣಿವೆಯನ್ನು ಕಂಡು, ಬೆಂಗಳೂರಿನ ಕಡೆಗೆ ಜಾರುವ ಕ್ಷಣದಲ್ಲಿ ಕಂಡ ಸುಂದರ ಎತ್ತುಗಳ ದೃಶ್ಯ. ಬಹುಶಃ ಮಾರಿ ದೇವಿಯ ದರುಶನ ಪಡೆದು ಹಿಂದಿರುಗಿ ಬರುತ್ತಿರಬಹುದು. ಸುಗ್ಗಿಯ ಸಮಯವಾದ್ದರಿಂದ ದೇವಿಯ ಆಶೀರ್ವಾದ ಪಡೆದು ವಾಪಾಸ್ ಬರುತ್ತಿರಬಹುದೆಂಬ ಊಹೆ ನನ್ನದು. ಸುಗ್ಗಿಯ ಫಲ ಉತ್ತಮವಾಗಿರಲಿ ಎಂದು ಮಾರಿ ದೇವಿಯ ಮೊರೆ ಹೋಗಿರಬೇಕು. ಏಕೆಂದರೆ ಫಸಲು
ಚೆನ್ನಾಗಿ ಮೂಡಿದರೆ ತಮ್ಮ ಊಟಕ್ಕೂ ಸಂಕಟ ಇರದು ಜೊತೆಗೆ ಒಡೆಯ ಕೂಡ ತಮಗೆ ಒಳ್ಳೆಯ ಆಹಾರ
ನೀಡಲು ಸಮರ್ಥನಾಗುವನು ಎಂಬುದು ಅವುಗಳ ಅಚಲವಾದ ನಂಬಿಕೆ ಇರಬೇಕು. ಒಡೆಯನ ಸುಖವೇ ತಮ್ಮ
ಸುಖ ಎಂಬ ನಿಸ್ವಾರ್ಥ ಮನೋಭಾವ ಈ ಎತ್ತುಗಳಲ್ಲಿ ಮೂಡಿರಬಹುದು. ದೇವಸ್ಥಾನಕ್ಕೆ ಹೋಗುವುದಲ್ಲವೇ ಅದಕ್ಕೆ ಥೈ ಥೈ ಅಂತ ಸಿಂಗಾರ ಮಾಡಿಕೊಂಡು ಹೋಗಿ ವಾಪಸ್ ಬಂದಿರಲೂಬಹುದು :). ಅವುಗಳ ಚಲನದಿಂದ ಕತ್ತಿನ ಗೆಜ್ಜೆ ಕೂಡ ಸುಮಧುರವಾಗಿ ಥೈ ಥೈ ಅನ್ನುತ್ತಿತ್ತು. ಈ ಗ್ರಾಮೀಣ ಭಾಗವೇ ಒಂದು ಆಹ್ಲಾದಕರ ಅನುಭವ. ಇಂತಹ ದೃಶ್ಯಗಳು ಮನದಲ್ಲಿ ಎಂದೆಂದಿಗೂ ಅಚ್ಚಾಗಿ ಉಳಿದು ಮನೋಲ್ಲಾಸವನ್ನು ತರುತ್ತದೆ. ಈ ಸುಮಧರ ಕ್ಷಣದ ಚಿತ್ರಗಳು ನಿಮಗಾಗಿ ಇಲ್ಲಿದೆ.
ಏ ಬನ್ರೊಲೆ ಫೋಟೋ ಹೊಡಿತವ್ನೇ ಸಿಟಿ ಹುಡುಗ. ಬ್ಲಾಗ್ ನಾಗೆ ಹಾಕ್ತಾನಂತೆ. |
ನೋಡಪ್ಪಾ ನಂದು ಮೊದ್ಲು ಹೊಡಿ. ಕೊಂಬು ಮೇಲಿಂದು ಮತ್ತೆ ನನ್ನ ಸುಂದರ ಮುಖ ಚೆನ್ನಾಗಿ ಬರ್ಬೇಕು ಅರ್ಥ ಆಯ್ತಾ? |
ಥೂ ದರಿದ್ರ! ಫೋಟೋ ಹೊಡಿವಾಗ್ಲೆ ಇದು ಅಡ್ಡ ಬರ್ಬೇಕಾ |
ಅಯ್ಯಯ್ಯೋ ಅವಸರ ಯಾಕೆ. ಜುಯ್ಯ್ ಅಂತ ಓಡ್ಸೋ ಮೊದ್ಲು ನಂದು ತೆಗಿಯಣ್ಣ. ಬಂದೇ ಬಿಟ್ವಿ |
ಕೋಡಿನ ಮೇಲಿರೋ ಕವಚ ಚೆನ್ನಾಗಿ ಬಂದಿದೆ ತಾನೇ? |
No comments:
Post a Comment