ಬೆಂಗಳೂರು ಅಥವಾ ಕರ್ನಾಟಕದ ವಾಹನಗಳ ಹಿಂದಿನ ಬದಿಯ ವಿಶಿಷ್ಟ ಲೇಬಲ್ ಗಳನ್ನು ಕ್ಲಿಕ್ಕಿಸಿ ಬ್ಲಾಗ್ ಪುಟಕ್ಕೆ ಅಂಟಿಸಿ ಅದಕ್ಕೆ ವಿಶಿಷ್ಟ ಅರ್ಥ ಕಲ್ಪಿಸುವ ಈ ಸರಣಿಯೇ ಬ್ಯಾಕೆಂಡ್. ಚಿತ್ರಗಳು ಸಿಕ್ಕಿದಂತೆ ಇಲ್ಲಿ ಪೋಸ್ಟ್ ಮಾಡುತ್ತೇನೆ. ಈ ಸರಮಾಲೆ ಯಾರನ್ನೋ ಅಣಕವಾಡಲು ಅಥವಾ ಸ್ವಹಿತಾಸಕ್ತಿಗೆ ಬಳಸಿಕೊಳ್ಳಲು ಬರೆದಿಲ್ಲ. ಬದಲಾಗಿ ನನ್ನ ವ್ಯಾಖ್ಯಾನ ನೀಡಲು ಇಚ್ಚಿಸುತ್ತೇನೆ (ಕೆಲವೊಮ್ಮೆ ಹಾಸ್ಯಮಯವಾಗಿ). ಇನ್ನೇಕೆ ತಡ! ಶುರು ಮಾಡೋಣವೇ ;).
೨ ತಿಂಗಳ ಹಿಂದೆ ಹೆಬ್ಬಾಳ ಸಿಗ್ನಲ್ ಬಳಿ ಅರಚುವ ಟ್ರಾಫಿಕ್ ಮಧ್ಯೆ ತೆಗೆದ ಚಿತ್ರ :).
"ನೋಡೆ ನನ್ನ ಬಂಗಾರಿ, ಇದೇ ನನ್ನ ಅಂಬಾರಿ"
ಏನು ಇರಬಹುದು ಇದರ ಮರ್ಮ? ಬಹುಶಃ ತನ್ನನ್ನು ಮದುವೆ ಮಾಡಿಕೊಳ್ಳುವವಳಿಗೆ ಮೊದಲ ಸನ್ನೆಯೇ ಅಥವಾ ಮದುವೆಯ ನಂತರ ಈ ವಾಹನದಲ್ಲೇ ಮನೆಗೆ ತೆರಳಬೇಕೋ? ಅಂಬಾರಿ ಎಂದಾಕ್ಷಣ ನಿಮ್ಮ ವಾಹನವನ್ನು ಅದರ ಮೇಲೆ ಹತ್ತಿಸಲು ಹೋದಿರಿ ಜೋಕೆ ;).
ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

No comments:
Post a Comment