ಊರಿಂದ ತೆಂಗು ತೆಗೆದುಕೊಂಡು ಬಂದು ಬಹಳ ದಿನಗಳಾಗಿವೆ. ಕೆಲವೊಂದರಲ್ಲಿ ನೀರು ಇದ್ದರೆ, ಕೆಲವಲ್ಲಿ ನೀರು ಆವಿಯಾಗಿದೆ. ಇನ್ನು ಕೆಲವು ಅತಿಯಾಗಿ ಬೆಳೆದು ಮರವಾಗಲು ಹೊರಟಿದೆ 😂. ಕೆಳಗೆ ನಮ್ಮ ಮನೆಯಲ್ಲಿ ಆದಂತೆ. ಮುಂಗು ಬಂದಿರುವ ತೆಂಗು ಹಲವರು ಉಪಯೋಗಿಸುವುದಿಲ್ಲ. ಅದನ್ನು ಹೆಚ್ಚಾಗಿ ಕೊಬ್ಬರಿ ಆಗಲು ಬಿಡುತ್ತಾರೆ. ಬಹುಶಃ ಅದರ ರುಚಿ ಕಡಿಮೆ ಇರುತ್ತೇನೋ? ಏಕೆಂದರೆ ಸ್ವಲ್ಪ ರುಚಿ ಮುಂಗಲ್ಲಿ ಹಂಚಿ ಹೋಗಿರುತ್ತದೆ. ಇರಲಿ, ಇಂದು ಕಂಡ ಅತಿ ಬೆಳೆದ ತೆಂಗು ಇಲ್ಲಿದೆ. ಸ್ವಲ್ಪ ದಿನ ಬಿಟ್ಟರೆ ದೊಡ್ಡ ಗಿಡ ಆಗುತ್ತಿತ್ತೇನೋ?
ಹಾಗೆಯೇ ಬಹು ದೊಡ್ಡ ಮುಂಗು ಅದರಲ್ಲಿತ್ತು. ನಮ್ಮ ಮನೆಯಲ್ಲಿ ಮಡದಿಗೆ ಬಿಟ್ಟರೆ ಮುಂಗು ಎಲ್ಲರಿಗೂ ಇಷ್ಟ. ನಾನು ಆಗಲೇ ಅರ್ಧ ಖಾಲಿ ಮಾಡಿದೆ. ಇನ್ನರ್ಧ ಮಕ್ಕಳಿಗೆ ಇಟ್ಟಿದ್ದೇನೆ. ಸಕತ್ ಟೇಸ್ಟ್ ನೋಡಿ. ಒಂತರ ಬಿಂಜ್ ಈಟಿಂಗ್ ನಮ್ಮದು ಮುಂಗೆ ಇದ್ದರೆ. ಇಷ್ಟು ದೊಡ್ಡ ಮುಂಗು ಇದುವರೆಗೆ ಮನೆಯಲ್ಲಿ ನೋಡಿಲ್ಲ. ಹಾಗಂತ ಮುಂಗೆ ದೊಡ್ಡದಾಗಲಿಂತ ನಾವು ತೆಂಗಿನಕಾಯಿ ಬೆಳೆಯಲು ಬಿಟ್ಟಿಲ್ಲ ಮಾರಾಯ್ರೇ :-). ಅದರ ಸಮಯ ಮೀರಿತು ಹಾಗೆ ಹೆಚ್ಚಾಗಿ ಬೆಳೆಯಿತು ಅಷ್ಟೇ! ಸಧ್ಯಕ್ಕೆ ಚಿತ್ರದಲ್ಲೇ ಆಸ್ವಾದಿಸಿ :-)
ಏನು ತೆಂಗಿನಕಾಯಿ ಮುಂಗನ್ನು ಅಷ್ಟೊಂದು ಕಡೆಗಣಿಸಬೇಡಿ! ಅದೊಂದು ವ್ಯಾಪಾರ ಮಾರಾಯ್ರೇ! ಇದನ್ನು ಕತ್ತರಿಸಿ ಜೊತೆಗೆ ಅದಕ್ಕೆ ಬೆಲ್ಲದ ಪುಡಿ ಸವರಿ ಕೊಡುತ್ತಾರೆ ವ್ಯಾಪಾರಸ್ಥರು. ನಂಗೂ ತಿಳಿದಿದ್ದು ಇತ್ತೀಚಿಗೆ!
No comments:
Post a Comment