Wednesday, November 21, 2018

ಹಾಗೆ ಸುಮ್ಮನೆ - ದೀಪಾವಳಿ ಊಹಾಪೋಹ

೨೦೧೭ ರ ದೀಪಾವಳಿ ಸಮಯ

ಹೌದು ದೀಪಾವಳಿಯೆಂದರೆ ಎಲ್ಲರ ಮನೆಯಲ್ಲೂ ದೀಪ. ಹಬ್ಬವೆಂದರೆ ಎಲ್ಲವೂ ಹೊಸತು. ಜೊತೆಗೆ ಸಿಹಿತಿಂಡಿ ಕೂಡಾ. ದೀಪಾವಳಿಯಂದು ಹೂವು, ಹಣ್ಣು, ತರಕಾರಿ ಬೆಲೆ ಗಗನಕ್ಕೇರುವುದು ಮಾಮೂಲು. ಬೀನ್ಸ್ ೧೫೦ ದಾಟುವುದಿದೆ, ಕೊತ್ತಂಬರಿ ಸೊಪ್ಪು ಒಂದು ಕಟ್ಟು ೪೦ ರುಪಾಯಿ ಮುಟ್ಟಿದೆ. ಹೀಗೆ ಹತ್ತಾರು ಉದಾಹರಣೆಗಳನ್ನು ನೀಡಬಹುದು. ಪತ್ರಿಕೆಯವರಿಗೆ ತುಂಬಾ ಸಂತೋಷದ ವಿಷಯ ಏಕೆಂದರೆ ಮೋದಿಯನ್ನು ಯದ್ವಾ-ತದ್ವಾ ಹಿಯಾಳಿಸಬಹುದು. ಅವರಿಗೇನೂ ಪಾಯಿಖಾನೆ ಮಾಡಲು ನೀರು ಖಾಲಿಯಾದರೂ ಮೋದಿಯನ್ನು ದೂರುತ್ತಾರೆ.

ಪತ್ರಿಕೆಗಳ ವಿಷಯ ಬಿಡೋಣ. ೨೦೧೭ ರಲ್ಲಿ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಭರ್ಜರಿಯಾಗಿ ಸುರಿದಿದೆ. ಸುಮಾರು ದಿನ ಮಳೆ ಬಂದ ಕಾರಣ ತರಕಾರಿ ಎಲ್ಲಾ ಕೊಳೆತು ಇಷ್ಟೊಂದು ದರ ಹೆಚ್ಚಾಗಿದೆ ಎಂಬುದು ನನ್ನ ಊಹೆಯಾಗಿತ್ತು. ಸರಿ ಒಂದು ದಿನ ನಮ್ಮ ತರಕಾರಿ ಅಂಗಡಿಯವನ ಬಳಿ ವಿಚಾರಿಸಿದಾಗ ನನ್ನ ತಪ್ಪು ಅರಿವಾಯಿತು. ಅವನ ಹೇಳಿದ ಕಾರಣ ಕೂಡಾ ಅರ್ಥಪೂರ್ಣವಾಗಿತ್ತು. ಪೂರೈಕೆ ಕಡಿಮೆಯಾಗಿದ್ದಕ್ಕೆ ದರ ಹೆಚ್ಚಾಗಿದ್ದು. ಪೂರೈಕೆ ಯಾಕೆ ಕಡಿಮೆಯಾಗಿದ್ದು ಅಂದರೆ, ಕೆಲಸಗಾರರು ಹಬ್ಬಕ್ಕೆಂದು ರಜೆ ಹಾಕಿದ್ದರಿಂದ. ಇದರಿಂದ ಸ್ವಲ್ಪ ದಿನ ದರ ಹೆಚ್ಚಿದಂತೆ ಕಾಣುತ್ತದೆ. ಹೌದು ಎಲ್ಲರೂ ಹಬ್ಬ ಆಚರಿಸಬೇಕು ಆಗಲೇ ಸಂಭ್ರಮ.

ನನ್ನ ಊಹಾಪೋಹಕ್ಕೆ ಅಂದೇ ತೆರೆಬಿದ್ದಿತ್ತು. ರಸ್ತೆ ಹಾಳಾಗುವುದಕ್ಕೆ ಸರಕಾರಗಳು ಮಳೆಗೆ ಬೈದಂತೆ, ನಮ್ಮ ನ್ಯಾಯಲಯಗಳು ದೀಪಾವಳಿಯಿಂದ ಮಾತ್ರ ಮಾಲಿನ್ಯವಾಗುತ್ತದೆಂಬ ತೀರ್ಪು ಕೊಟ್ಟಂತೆ, ನಮ್ಮ ಕೆಲ ಸರಕಾರಗಳು ಒಂದೇ ಧರ್ಮವನ್ನು ತರಾಟೆಗೆ ತೆಗೆದುಕೊಂಡಂತೆ, ಮಾಧ್ಯಮಗಳು ಮೋದಿಯ ತಪ್ಪನ್ನು ಮಾತ್ರ ಬಿತ್ತರಿಸಿದಂತೆ, ನನ್ನ ಊಹೆ ಕೂಡಾ ಸುಮ್ಮನೆ ಭರ್ಜರಿ ಮುಂಗಾರಿನ ಕಡೆ ಬೊಟ್ಟು ಮಾಡಿತ್ತು. ನನಗೆ ಮುಂಗಾರು ಅಂದರೆ ಬಹಳ ಪ್ರೀತಿ ಮತ್ತು ನನ್ನ ಊಹೆ ಅದನ್ನು ವಿರೋಧಿಸುವಂತಿತ್ತು. ಏನೇ ಆಗಲಿ ಥಟ್ ಎಂದು ನಿರ್ಧಾರಕ್ಕೆ  ಬರುವ ಮುನ್ನ ಸಾಕಷ್ಟು ಆಲೋಚಿಸುವುದು ಮುಖ್ಯ ಅಂತ ಕಂಡುಕೊಂಡೆ

No comments:

Post a Comment

Printfriendly

Related Posts Plugin for WordPress, Blogger...