Monday, March 11, 2024

ಅಜ್ಞಾನಿಗಳಿಗೆ ಬೆಲೆ ಹೆಚ್ಚು!

ಅನಿವಾರ್ಯ ಕಾರಣಗಳಿಂದಾಗಿ ಮನೆ ಬದಲಾಯಿಸುವ ಪರಿಸ್ಥಿತಿ ಬಂದೊದಗಿತು. ಮೊದಲೇ ಎಲ್ಲವೂ ಯೋಜನೆ ಹಾಕಿಕೊಂಡಿದ್ದೆವು. ಹಾಗೂ ಹೀಗೂ ಸುತ್ತಾಡಿ ಕೊನೆಗೆ ನಮಗೆ ತೃಪ್ತಿಯಾಗುವಂತಹ ಮನೆ ಸೆಟ್ ಆಯಿತು. ಶಿಫ್ಟ್ ಕೂಡಾ ಆಯಿತು, ಎಲ್ಲವನ್ನೂ ಒಪ್ಪ ಮಾಡಿಯೂ ಆಯಿತು ಮಡದಿಯ ಸಾಧನೆಯಿಂದ. ಕೊನೆಗೆ ಕಾಮನ್ ಸ್ನಾನದ ಮನೆಯ ಗೀಸರ್ ಕೆಲಸ ಮಾಡುತ್ತಿರಲಿಲ್ಲ. ಮಾಲಕರನ್ನು ಸಂಪರ್ಕಿಸಿದಾಗ ಅವರು ಹಳೆಯ ಬಾಡಿಗೆಯವರೊಂದಿಗೆ ವಿಚಾರಿಸಿದರು. ಕಾಯಿಲ್ ಈಗಷ್ಟೆ ಹೊಸದಾಗಿ ಹಾಕಿಸಿದ್ದಂತೆ. ರಿಪೇರಿ ಮಾಡಿದವನು ಊರಿಗೆ ತೆರಳಿದ್ದನಂತೆ ಒಂದು ವಾರ ಬಿಟ್ಟು ಬರುವನೆಂದು ಮಾಲಕರಿಗೆ ತಿಳಿಸಿದನಂತೆ. 

ವಾರದ ಬಳಿಕ ಬಂದ electrician ಪುಣ್ಯಾತ್ಮ. ಬರುವಾಗಲೇ ಗಾಂಭೀರ್ಯ. ಅವನ ಮುಖದಲ್ಲಿ ಸ್ವಲ್ಪ ತಳಮಳ ಕಾಣಿಸುತ್ತಿತ್ತು. ಒಮ್ಮೆಲೇ ಬಹಳ ಮಾತಾಡಲು ಶುರು ಮಾಡಿದ. ಮಡದಿಗೆ ಆವಾಗಲೇ ತಿಳಿದಿದ್ದು ಇವನು ಯಾವನೋ ಠಪೋರಿ ಎಂದು. ಯಾವಾಗಲೂ ವಟ ವಟ ಒದರುವ ಮಹಿಳೆಯರಿಗೆ ಅದೆಲ್ಲ ಬೇಗನೆ ತಿಳಿಯುತ್ತದೆ ಬಿಡಿ! "ಇಲ್ಲ ಸಾರ್ ನೀವು ಅರ್ಧ ಘಂಟೆ ಬಿಡಬೇಕು ಆವಾಗಲೇ ತಿಳಿಯೋದು ಎಷ್ಟು ಚೆನ್ನಾಗಿದೆ ಅಂತಾ!" ಯಾವೇ ಸೀಮೆ ಕಾಯಿಲ್ ಹಾಕಿದಾನೋ ದೇವರೇ ಬಲ್ಲ. ಅರ್ಧ ಘಂಟೆಯಲ್ಲಿ ಓಲೆಯಲ್ಲಿ ಇಟ್ಟ ನೀರೂ ಕೂಡ ಕುದಿದು ಆವಿಯಾಗಲು ಪ್ರಾರಂಭವಾಗುತ್ತದೆ. ಇದೆಂತಾ ಸೀಮೆ ಕಾಯಿಲ್ ಹಾಕಿದ್ದಾನೋ ದೇವರೇ ಬಲ್ಲ. ನೀರು ಕೂಡಾ ಸ್ವಲ್ಪವೇ ಬಿಸಿ ಆಗಿತ್ತು. "ಅಲ್ಲ ಸಾರ್ ಒಂದು ವಾರ ಯೂಸ್ ಮಾಡಿಲ್ಲ ಅಂತೀರಾ ಆದರು ಯಾಕೆ ನೀರು ಸ್ವಲ್ಪ ಬಿಸಿ ಇದೆ?" ಎಂದಾಗ ನಮಗೂ ಆಶ್ಚರ್ಯ ಆಯಿತು "ಯಾರಿಗೊತ್ತು ನಮಗೇನು ತಿಳಿದಿದೆ. ನಾವು ಬಂದು ಕೂಡಾ ೧೦ ದಿನ ಆಯಿತು ಅಷ್ಟೇ!" ಎಂದು ಮಾರುತ್ತರ ನೀಡಿದೆವು.

ಮೇಲ್ನೋಟಕ್ಕ ಅವನ ತಪ್ಪಿಗೆ ನಮ್ಮ ಮೇಲೆ ಗೂಬೆ ಕೂರಿಸಲು ಹೊರಟ್ಟಿದ್ದ ಅನ್ಸುತ್ತೆ.  ಆನ್ ಮಾಡಿ ೩೦ ನಿಮಿಷ ಆಯಿತು, ನೀರು ಮಾತ್ರ ಉಗುರು ಬೆಚ್ಚಗೆ ಮಾತ್ರ ಬರುತ್ತಿತ್ತು. ಆವಾಗಲೇ ಗೊತ್ತಾಗಿದ್ದು ಇವ ಗೋಲ್-ಮಾಲ್ ಎಲೆಕ್ಟ್ರಿಷಿಯನ್ ಅಂತಾ. "ಎಲ್ಲಾ ಸರಿಯಾಗಿಯೇ ಬರ್ತಾ ಇದೆ ಅಲ್ವಾ ಸರ್ " ಅಂತಾ ಹಗಲು ದರೋಡೆ ರೀತಿ ನಮಗೆ ಸಮಜಾಯಿಷಿ ನೀಡುತ್ತಾನೆ. "ಎಲ್ಲಿ ಆಗಿದೆ ಹೇಳಿ. ಇದ್ರಲ್ಲಿ ಸ್ನಾನ ಮಾಡಿದ್ರೆ ಮರುದಿನ ಜ್ವರ ಬರೋದು ಗ್ಯಾರಂಟಿ" ಎಂದು ಅವನಿಗೆ ಮಾರುತ್ತರ ನೀಡಿದೆವು. 

ಅವನು ಮಾಡಿರೋದು ಹಾಳು ಕೆಲಸ ಅಥವಾ ಅವನಿಗೆ ಕೆಲಸವೇ ತಿಳಿದಿಲ್ಲ ಅನ್ನೋದನ್ನ ಮರೆಮಾಚಲು ಪ್ರಯತ್ನಿಸುತ್ತಿದ್ದ. ಸ್ಕ್ರೂ ಏನೋ ಆಚೀಚೆ ಮಾಡಿದ. ಏನೂ ಪ್ರಯೋಜನ ಆಗಲಿಲ್ಲ. ನೀರು ಮಾತ್ರ cool ಆಗೇ ಇತ್ತು! ಅವನಿಗೆ ಏನು ಮಾಡಲೂ ತೋಚಲಿಲ್ಲ.

ನನಗೆ ಅಫೀಸ್ ಕೆಲಸ ಇದ್ದರಿಂದ ಸ್ವಲ್ಪ ರೂಮ್ ಕಡೆಗೆ ಹೋದೆ. ೧೦ ನಿಮಿಷದಲ್ಲಿ ವಾಪಸ್ ಬಂದಾಗ ಅವನ ಉತ್ತರ ಕೇಳಿ ತಲೆನೋವು ಬಂತು. "ಸರ್ ನಿಮ್ಮ UPS ಕೆಲಸ ಮಾಡಿರುವವನು ಫೇಸ್ ಬದಲಿಸಿದ್ದಾನೆ ಆದ್ದರಿಂದ ಕರೆಕ್ಟ್ ಹೀಟ್ ಆಗ್ತಾ ಇಲ್ಲ ನೋಡಿ. ಈಗ ಆಫ್ ಆಯಿತು ಇಂಡಿಕೇಟರ್". ಎಲ್ಲೋ ಅವನೇ ವೈರ್ ಬಿಚ್ಚಿ ಆಫ್ ಮಾಡಿದ್ದಂತೆ ಇತ್ತು. "ಇನ್ನು ಸರಿ ಹೋಗುತ್ತೆ ಬಿಡಿ ಅಂತಾ ಪಾರ್ಟಿ ಕೆಲಸ ಮುಗಿಸಿ ಹೋರಾಡಲು ಅಣಿಯಾಗಿದ್ದ!"

"ಸರಿ ಬಿಡಿ ನಾನು UPS ಅವನಿಗೆ ಫೋನ್ ಮಾಡುತ್ತೇನೆ ಈಗಲೇ" ಅಂದಾಗ ಪಾರ್ಟಿ electricianಗೆ ಧಕ್ ಅಂದಿರಬೇಕು. "ಅದೇನು ಆಗಲ್ಲ ಸರ್ ಬಿಡಿ" ಎಂದಾಗ ನಮ್ಮ ಸಂಶಯ ಇಮ್ಮಡಿಯಾಯಿತು. ಪೂರ್ತಿ ಮನೆಯ ವಿದ್ಯುತ್ ಉಪಕರಣಗಳು ಸರಿ ಇದೆ. ಇವನ ಗೀಸರ್ ಮಾತ್ರ ಬೇರೇನೇ ಫೇಸ್ ಅಲ್ಲಿ ಕೆಲಸ ಮಾಡುವುದೋ ಅಥವಾ ಅವನು ಹೇಳುವ ಫೇಸ್ ಮಾತ್ರ ಕೇಳುತ್ತೋ ಎಂಬ ನಗೆ ಚಟಾಕಿ ಹರಿಯಿತು.

ಕೊನೆಗೆ ಪಾರ್ಟಿ ಹೊರಟನು. ಗೀಸರ್ ಹೋಗಿದೆ ಅಂತಾ ತೀರ್ಮಾನ ಮಾಡಿದೆವು. ಸ್ವಲ್ಪ ಹೊತ್ತಿನ ಬಳಿಕ ಸ್ವಿಚ್ ಬಂದ್ ಆಗಿದ್ದರೂ ಗೀಸರ್ ಉರಿಯುತ್ತಿತ್ತು. ತಕ್ಷಣವೇ ಗೀಸರ್ ಪ್ಲಗ್ ತೆಗೆದೆವು. ಅಂದರೆ ವಾರಪೂರ್ತಿ ಗೀಸರ್ ಉರಿಯುತ್ತಿತ್ತೇ!!!! ದೇವನೇ ಬಲ್ಲ! ಬಿಟ್ಟಿ ಭಾಗ್ಯಗಳಿಟ್ಟುಕೊಂಡು ಅಧಿಕಾರಕ್ಕೆ ಬಂದ ಪ್ರಸ್ತುತ ಸರ್ಕಾರದ ಕರೆಂಟ್ ದರ ಏರಿಕೆಯ ಶಾಕ್ ಇಟ್ಟುಕೊಂಡು ಗೀಸರ್ ದಿನ ಪೂರ್ತಿ ಉರಿದರೆ ದೇವರೇ ಬಲ್ಲ ಬಿಲ್ ಎಷ್ಟು ಬರಬಹುದೆಂದು!!  ಪುಣ್ಯಾತ್ಮ ಇಲೆಕ್ಟ್ರೀಷಿಯನ್ ಗೆ ಫೋನ್ ಹಚ್ಚಿದರೆ "ಸರ್ ಅದೇ ಹೇಳಿದ್ದು ನಾನು. ಏನೋ ಸ್ವಿಚ್ ಸ್ಪ್ರಿಂಗ್ ಪ್ರಾಬ್ಲೆಮ್ ಇದೆ ಅನ್ಸುತ್ತೆ" ಅಂತಾ ಹೇಳಿ ಮತ್ತೆ ಜಾರಿಕೊಂಡನು. ದೊಡ್ಡ ಫ್ರಾಡ್ ಇವ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ ಬಿಡಿ. ಇವನ ಅಜ್ಞಾನದ ಪರಾಕಾಷ್ಠೆ ನಮಗೆ ದಟ್ಟವಾಯಿತು. ಪಾರ್ಟಿಗೆ ಕೆಲಸ ಮಾಡಲೇ ಬರುವುದಿಲ್ಲ. ಎಲ್ಲವು ಮಾತಲ್ಲೇ ಶಾಕ್ ಬರಿಸುತ್ತಿದ್ದನು ಅಷ್ಟೇ! ಇನ್ನು ದೊಡ್ಡ ಮಟ್ಟದ ಕೆಲಸ ಇವನು ಮಾಡಿದರೆ ಆ ಮನೆ ಭಸ್ಮ ಆಗುವುದರಲ್ಲಿ ಸಂಶಯವೇ ಇಲ್ಲ!

ಮಾಲಕರನ್ನು ಒಪ್ಪಿಸಿ ಹೊಸ ಗೀಸರ್ ತೆಗೆದುಕೊಂಡೆವು. ಹೊಸ ಗೀಸರನ್ನು ಪ್ರತಿಷ್ಠಾಪಿಸಲು ಇಂಜಿನಿಯರ್ ಕೂಡಾ. ಬಂದಿದ್ದು ಆಯಿತು. ಅವನನ್ನು ವಿಚಾರಿಸಿದಾಗ "ಫೇಸ್, ಕನೆಕ್ಷನ್ ಎಲ್ಲಾ ಸರಿ ಇದೆ ಸರ್. ಇಲ್ಲಅಂದ್ರೆ ನಮ್ಮ ಗೀಸರ್ ಸ್ಟಾರ್ಟ್ ಆಗೋದೇ ಇಲ್ಲಾ" ಅನ್ನೋದೇ! ಗೀಸರ್ ಅವನು ಹೇಳಿದಂತೆ ಸಧ್ಯಕ್ಕೆ ಸರಿಯಾಗಿ ಕೆಲಸ ಮಾಡುತ್ತಿದೆ. ಆದರೂ ನಮಗೆ ಒಳಗಿನ ತಳಮಳ. ನೋಡೋಣ ಗೀಸರ್ ಬಂದ್ ಆದಮೇಲೆನೂ ಉರಿಯುತ್ತಾ ಅಂತಾ. ಉರಿಯುತ್ತಿರಲಿಲ್ಲ! ಇರಲಿ ಗೀಸರ್ ಬಂದ್ ಮಾಡಿದ ಸ್ವಲ್ಪ ಹೊತ್ತಿನ ಬಳಿಕ  ನೀರು ತಣ್ಣಗಾಗುತ್ತಾ ಅಂತಾ ಮತ್ತೆ ಮತ್ತೆ ಚೆಕ್ ಮಾಡುತ್ತಿದ್ದೆವು. ಎಲ್ಲವೂ ಸರಿ ಇದ್ದರೂ ಅಜ್ಞಾನಿ electrician ಮಾತುಗಳಿಗೆ ಮರುಳಾದೆವು ಅನ್ನಿಸುತ್ತೆ. ಅವನದೆಲ್ಲವೂ ಬೋಗಸ್ ಇದ್ದರೂ ನಾವು ವಿಧಿ ಇಲ್ಲದೆ ಹೊಸ ಗೀಸರ್ ಬಂದಾಗ ಕಂಫ್ಯೂಸ್ ಆಗಿದ್ದೆವು! ಯಾಕೋ ಈ ಅಜ್ಞಾನಿಗಳಿಗೆ ಬೆಲೆ ಹೆಚ್ಚು ಕಲಿಯುಗದಲ್ಲಿ ಅನ್ನಿಸುತ್ತೆ. ಅದರಲ್ಲೂ ಇತಿಹಾಸ ತಿರುಚುವ ಅಜ್ಞಾನಿಗಳಿಗೆ ನಮ್ಮ ದೇಶದಲ್ಲೇನೋ ಕಡಿಮೆ ಇಲ್ಲ ಬಿಡಿ. ಇಂತಹ ಪೇಯ್ಡ್ ಅಜ್ಞಾನಿಗಳಿಗೆ ನಾವು ತುಂಬಾ ಪ್ರಚಾರ ಕೊಡುತ್ತೇವೆ ಅನ್ನಿಸುತ್ತದೆ. 

No comments:

Post a Comment

Printfriendly

Related Posts Plugin for WordPress, Blogger...