ವಿಸ್ಮಯಗಳನ್ನು ನೋಡಲು ವಿಶಿಷ್ಟವಾದ ಜಾಗಕ್ಕೆ ತೆರಳಬೇಕೆಂದಿಲ್ಲ. ಪಕ್ಕದ ಬೀದಿಯಲ್ಲಿ ಅಡ್ಡಾಡಿದರೆ ಸಾಕು ಹಲವು ವೈಶಿಷ್ಟ್ಯಗಳನ್ನು ಕಾಣಬಹುದು. ಎಲ್ಲೆಲ್ಲೋ ವಿಶೇಷತೆಗಳನ್ನು ಹುಡುಕುತ್ತಿದ್ದ ನನಗೆ, ಸ್ವಲ್ಪ ವರ್ಷಗಳಿಂದಷ್ಟೇ ಜ್ಞಾನೋದಯವಾಗಿದ್ದು. ಅಂತೆಯೇ, ಬಹಳಷ್ಟು ಸುಧಾರಿಸಿದ್ದೇನೆ ಅನ್ನಲೂಬಹುದು!
ಇಂದು ಮಕ್ಕಳನ್ನು ಶಾಲೆಗೆ ಬಿಡುವ ಸಮಯದಲ್ಲಿ ಕಂಡು ಬಂದ ದೃಶ್ಯ. ಸಮಯ ಮೀರಿದ್ದರಿಂದ, ಕ್ಲಿಕ್ಕಿಸಲು ಸಾಧ್ಯವಾಗಲಿಲ್ಲ. ವಾಪಸ್ ಬರುವಾಗ ಮಹಾರಾಜರು ಅದೇ ಪೀಠದಲ್ಲಿ ಆಸೀನರಾಗಿದ್ದರಿಂದ ಕ್ಲಿಕ್ಕಿಸಲು ಸಮಯ ಪಕ್ವವಾಗಿತ್ತು. ಮಹಾರಾಜರು ಕೂಡಾ ತಾಳ್ಮೆಯಿಂದ ಕ್ಲಿಕ್ಕಿಸಲು ಬಿಟ್ಟರು. ಇಲ್ಲಿದೆ ಛಾಯಾಚಿತ್ರ! ಸೂರ್ಯನನ್ನೇ ದುರುಗುಟ್ಟಿ ರಾಜಕುಮಾರನಂತೆ ನೋಡಿತ್ತಿತ್ತು.
ಬೆಂಗಳೂರಿನಲ್ಲಿ ಬೀದಿ ನಾಯಿಗಳೇ ರಾಜಕುಮಾರರು. ಎಲ್ಲಿ ನೋಡಿದರೂ ಅವುಗಳದ್ದೇ ದರ್ಬಾರು. ರಾತ್ರಿಯಂತೂ ಅವುಗಳನ್ನು ಕಂಡರೆ ಎಲ್ಲರಿಗೂ ಭಯ ಯಾಕೆಂದರೆ ಅವುಗಳ ಫ್ಯಾನ್ಸ್- ಗಳಿಂದಾಗಿ! ಮನುಷ್ಯರಿಗೇನಾದರೂ ಪರ್ವಾಗಿಲ್ಲ, ನಾಯಿಗಳಿಗೆ ಏನು ತೊಂದರೆಯಾಗಕೂಡದು. ಎಷ್ಟೋ ಬಾರಿ ಮಧ್ಯರಾತ್ರಿಯ ಅವುಗಳ ಯುದ್ಧ-ಘರ್ಜನೆಯ ಮಧ್ಯೆ ನಿದ್ದೆಯೇ ಬರುವುದಿಲ್ಲ . ಆದರೂ ಸಹಿಸಿಕೊಳ್ಳಬೇಕು. ಎಷ್ಟೋ ಜನ ಸತ್ತರೂ ಅವುಗಳೇ ನಿರಪರಾಧಿಗಳು. ಏನು ಮಾಡೋದು ವಿಚಿತ್ರ ಕಲಿಯುಗ, ವಿಚಿತ್ರ ಕಾಲ. ಎಲ್ಲವನ್ನೂ ಬುದ್ಧಿಯಿರುವ ಮನುಷ್ಯನೇ ಸಹಿಸಿಕೊಳ್ಳಬೇಕು. ಒಂತರಾ ದೇಶದ ಅಲ್ಪಸಂಖ್ಯಾತರಂತೆ. ಕಚ್ಚಿದರೂ, ಓಡಿಸಿಕೊಂಡರು ಬಂದರೂ, ಅವುಗಳು ಶಾಂತಿದೂತರು ಮತ್ತು ನಿರಪರಾಧಿಗಳು!
ಪುಣ್ಯಕ್ಕೆ ಚಿತ್ರದಲ್ಲಿರುವ ಮಹಾನುಭಾವರು ಉದ್ವೇಗಗೊಳ್ಳಲಿಲ್ಲ. ಬಹುಶಃ ಚರ್ಮರೋಗದಿಂದಾಗಿ ಸೂರ್ಯನ ಬೆಳಕಿಗೆ ಮೈಯೊಡ್ಡಿರಬೇಕು. ತೋಚಿದ್ದು ಬರೆದೆ ಅಷ್ಟೇ ನೋಡಿ. ನಥಿಂಗ್ ಪರ್ಸನಲ್!
He looks very proud of himself, dogs tend to do that.
ReplyDelete