Wednesday, March 20, 2024

ಚಿತ್ರ ಬರಹ - ವ್ಯಾನಿಟಿ ನೈ೦ಟಿ : Photo Blog - Vanity Ninety

ಈ ಬರಹ ಕನ್ನಡ - ಆಂಗ್ಲದ ಸಮ್ಮಿಲನ ಎಂದರೂ ತಪ್ಪಾಗದು. ಎರಡನ್ನೂ ಆನಂದಿಸುತ್ತೀರಾ ಎಂದು ಅಂದುಕೊಳ್ಳುತ್ತೇನೆ :-). ಆದರೂ ಕನ್ನಡದಷ್ಟು ಸೊಗಸಾಗಿ ಆಂಗ್ಲದಲ್ಲಿ ಬರೆಯಲಾಗುವುದಿಲ್ಲ ಎಂದು ಮೊದಲೇ ಒಪ್ಪಿಕೊಳ್ಳುತ್ತೇನೆ. ಅದರ ಬಗ್ಗೆ ವಾದ-ವಿವಾದಗಳು ಬೇಡ :-)

ಇದು ನಿಮ್ಮ ನಮ್ಮೆಲ್ಲರ ಆರೋಗ್ಯಕರ ನೈ೦ಟಿ, ನಿಮ್ಮ ನೆಚ್ಚಿನ ಅಮಲಿನ ನೈ೦ಟಿ  ಅಲ್ಲ!

ನಮ್ಮ ಗೃಹ ಮಂತ್ರಿಗಳ ವ್ಯಾನಿಟಿ  ಬ್ಯಾಗ್-ನಲ್ಲಿ ಈ ೯೦ml ಬಾಟಲ್ ಯಾವಾಗಲೂ ಇರುತ್ತದೆ. ಅರೆರೆ ಏನು ಚುನಾವಣೆ ಮುಗಿತು ಮತ್ತೆ ಶುರು ಹಚ್ಕೊಂಡ್ರ ಅಂದ್ಕೋಬೇಡಿ. ನಾವು ಅಂತವರಲ್ಲ. ತುರ್ತಾಗಿ ನೀರು ಬೇಕೆಂದರೆ ನಮ್ಮ ಮಡದಿಯ ವ್ಯಾನಿಟಿ ಅಲ್ಲಿ ನೈ೦ಟಿml ನೀರು ಗ್ಯಾರಂಟಿ ಇರುತ್ತದೆ (ನಮ್ಮ ಮುಂದಿನ ಸರಕಾರದ ನಂಬಲಾಗದ ಬಿಟ್ಟಿ ಭಾಗ್ಯದ ತರ ಅಲ್ಲ!). ಹಾಗಾಗಿ ಇದು ನಮಗೆ  emergency ಸಂರಕ್ಷಕ ಎಂದರೂ ತಪ್ಪಾಗದು! ಹೊರಗಡೆ ಮಕ್ಕಳಿಗೆ ತಿಂಡಿ ಖಾರ ಆದರೆ, ಗಂಟಲು ಹಿಡಿದುಕೊಂಡರೆ, ತಕ್ಷಣವೇ ಪರಿಹಾರ ಈ ವ್ಯಾನಿಟಿ ನೈ೦ಟಿ. ವ್ಯಾನಿಟಿ ಅಂದರೆ ಬೇಡದೆ ಇರೋದು  ಅಂತಾ. ಹಾಗಾಗಿ ನಮ್ಮ ಮೇಡಂ ಬ್ಯಾಗನ್ನು ವ್ಯಾನಿಟಿ ಎನ್ನದೆ ಬಹುಪಯೋಗಿ ಎನ್ನಬಹುದೇ?



This post is fusion of Kannada and English. I hope you enjoy both the literature. Since I am not well-versed in English, the write-up will not be appealing like Kannada one. Hopefully, to some extent, standard is met! So do not indulge in arguments :-)

Let me start! This ninety is healthy, not your favorite one ;-)

Our home minister's vanity bag contains permanently 90ml bottle. Do not be astonished, its not the post election celebration. We are not drunkards. This bottle is purely for emergency water needs. The 90ml is guaranteed to be filled (not like our future government's uncertain freebies). Therefore, it would be wise to call this healthy 90ml bottle as emergency savior! When kids eat spicy food outside, during throat dryness, the instant relief is this 90ml bottle. Vanity means useless things but our madam's bag can be termed as resourceful? 

1 comment:

  1. Water is very very good for us, we are blessed to have clean drinking water here.

    ReplyDelete

Printfriendly

Related Posts Plugin for WordPress, Blogger...