Saturday, December 19, 2015

ಬ್ಯಾಕೆಂಡ್-೧೬

[ಸೋಲಿಲ್ಲದ ಸರದಾರ]

 


ನಿಮಗೆ ಒಂದು ವಿಷಯ ಗೊತ್ತುಂಟಾ ಮಾರಾಯ್ರೆ. ನಮ್ಮ ಕರಾವಳಿ ಬದಿಯಲ್ಲಿ ಖಾಸಗಿ ಬಸ್ಸುಗಳದ್ದೇ ಕಾರುಬಾರು. ಬಸ್ಸುಗಳನ್ನು ಎರಡು ತರಹ ವಿಂಗಡಿಸಬಹುದು. ಒಂದು ಸರ್ವೀಸ್ ಮತ್ತೊಂದು ಎಕ್ಸ್-ಪ್ರೆಸ್. ಎರಡರದ್ದು ಸ್ಪೀಡ್ ವ್ಯತ್ಯಾಸ ಇರಬಹುದು ಆದರೆ ಎರಡೂ ಸೋಲಿಲ್ಲದ ಸರದಾರರೇ ಅನ್ನುವ ವಿಷಯ ನಿಮಗೆ ಗೊತ್ತುಂಟಾ? ಹೇಗೆಂದರೆ ಸರ್ವೀಸ್ ಬಸ್ಸನ್ನು ವೇಗದಲ್ಲಿ ಸೋಲಿಸಲು ಸಾಧ್ಯವೇ ಇಲ್ಲ. ಕೊನೆಗೆ ನೀವೆ ಅದನ್ನು ಓವರ್-ಟೇಕ್ ಮಾಡುವಷ್ಟು ತಾಳ್ಮೆ ಕಳೆದುಕೊಳ್ಳುತ್ತೀರಾ ಮಾರಾಯ್ರೆ. ಹಾಗೆಯೇ ಎಕ್ಸ್-ಪ್ರೆಸ್ಸ್ ಬಸ್ಸನ್ನು ಬೆಂಬೆತ್ತಿ ನೋಡುವಾ!! ಎಲ್ಲಾದರೂ ಉಂಟೇ ಮಾರಾಯ್ರೆ! ಕೊನೆಗೆ ನೀವು ಓವರ್-ಟೇಕ್ ಮಾಡಲು ಸಾದಿ ಬಿಟ್ಟುಕೊಡಬೇಕಾಗುತ್ತದೆ ಮಾರಾಯ್ರೆ. ಇಂಗ್ಲೀಷ್ ಕಲಬೆರಕೆ ಮಾಡಿದರೆ ಎರಡೂ ಬಸ್ಸುಗಳಲ್ಲಿಹೆಚ್ಚಿನ ವ್ಯತ್ಯಾಸ ಇಲ್ಲ ಗೊತ್ತುಂಟಾ? ಒಬ್ಬ 'slow'ವಿನಲ್ಲಿ ಸರದಾರನಾದರೆ ಮತ್ತೊಬ್ಬ 'slow'ವಿಲ್ಲದ ಸರದಾರ ಮಾರಾಯ್ರೇ! ಒಟ್ಟಾರೆ ಇಬ್ಬರೂ ಕೂಡ ವೇಗದಲ್ಲಿ ಸೋಲಿಲ್ಲದ ಸರದಾರರೆ!! ಮತ್ತೊಂದು ವಿಷಯ ಗೊತ್ತುಂಟಾ? ಈ ಎರಡೂ ಬಸ್ಸಿನಲ್ಲಿ ಹೋದರೆ ಯಮಲೋಕಕ್ಕೆ ಹೋಗುವ ಸಾಧ್ಯತೆಗಳು ಕೂಡಾ ಅದರ ವೇಗಕ್ಕೆ ಸರಿಸಮಾನವಾಗಿದೆ ಮಾರಾಯ್ರೆ.


ಅಂದಹಾಗೆ ನನ್ನವಳು ಅವರ ಗಾಡಿ slow ಚಲಿಸುತ್ತಿರುವಾಗ ಬಸ್ಸಿನ ಹಿಂದೆ ಕ್ಲಿಕ್ಕಿಸಿದ್ದು ಮಾರಾಯ್ರೆ! ಅಷ್ಟು ಗೊತ್ತಾಗುವುದಿಲ್ಲವೇ ನಿಮಗೆ ಸ್ವಲ್ಪ ಮಂಡೆ ಉಪಯೋಸಿವುದಕ್ಕೆ. ಯಮವೇಗದಲ್ಲಿ ಸಂಚರಿಸುವ ಎಕ್ಸ್-ಪ್ರೆಸ್ ಬಸ್ ಚಿತ್ರ ತೆಗೆಯುವುದು ಎಲ್ಲಾದರೂ ಉಂಟೇ?!! ಇದು ಸರ್ವೀಸ್ ಬಸ್ ಹಿಂದಿನ ಚಿತ್ರ ಮಾರಾಯ್ರೇ. ಕ್ಲಿಕ್ ಮಾಡಿದ ಕೂಡಲೇ ಇವರು ತಾಳ್ಮೆ ಕಳೆದುಕೊಂಡು ಓವರ್-ಟೇಕ್ ಮಾಡಿ ಕೊನೆಗೆ ಸರ್ವೀಸ್ ಬಸ್ಸಿನ "ಸೋಲಿಲ್ಲದ ಸರದಾರ"ನ ಪಟ್ಟ ಉಳಿಸಿಕೊಟ್ಟರು ಮಾರಾಯ್ರೇ!!

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

No comments:

Post a Comment

Printfriendly

Related Posts Plugin for WordPress, Blogger...