Tuesday, December 8, 2015

ಬ್ಯಾಕೆಂಡ್-೧೫


[ಸಾರಿ ಕಣೇ!!! ೧೪೩..]


ಕ್ಯಾಬ್-ನವರು ಕೆಲವೊಮ್ಮೆ ಹೆಂಗೆಂಗೋ ಗಾಡಿ ಓಡಿಸ್ತಾರೆ ಯಾಕಂದ್ರೆ ಟ್ರಾಫಿಕ್ ಮಧ್ಯೆ ಅವ್ರಿಗೂ ತಲೆ ಕೆಟ್ ಹೋಗಿರುತ್ತೆ. ಟೈಮ್ ನಿಭಾಯಿಸೋದು ಆಗಿಲ್ಲಾಂದ್ರೆ ಬಿಜಿನೆಸ್ ಸರಿಯಾಗಿ ನಡೆಯಲ್ಲ. ಸುಮಾರ್ ಕ್ಯಾಬ್-ನವರು ಯಡ್ಡಾದಿಡ್ಡಿ ಓಡ್ಸೋದಿಕ್ಕೆ ತಲೆಕೆಡಿಸಿಕೊಳ್ಳಲ್ಲ ಆದ್ರೆ ಇವ್ರು ಸ್ವಲ್ಪ ಡಿಫೆರೆಂಟ್ ಅನ್ಸುತ್ತೆ. ಅದಿಕ್ಕೆ ಅಡ್ವಾಂಸ್ ಆಗಿ ಹಿಂಬದಿ ವಾಹನದವರಿಗೆ ಸಾರಿ ಹೇಳಿ ಮ್ಯಾಟರ್ ಅಲ್ಲೇ ಕ್ಲೋಸ್ ಮಾಡಕ್ಕೆ ಟ್ರೈ ಮಾಡ್ತೋವ್ರೆ. ಆದ್ರೂ ಇಲ್ಲಿ ಸ್ತ್ರೀಲಿಂಗ ಉಪಯೋಗಿಸಿದ್ದು ಯಾಕೆ ಅಂತ ಗೊತಾಯ್ತಿಲ್ಲ. ಬಹುಶಃ ಇದ್ರಿಂದ ಜನ ಬೇಗ ಕನ್ವಿನ್ಸ್ ಆಗ್ತಾರೆ ಅನ್ನೋದು ಈ ಗಾಡಿ ಸವಾರನ ಬಲವಾದ ಗೆಸ್ ಅನ್ಸುತ್ತೆ. ಹಾಗಂತ ಗಾಡಿಗೆ ಗುದ್ಲಿಕ್ಕೆ ಹೋಗ್ಬೇಡಿ. ನೀವು ಸಾರಿ ಹೇಳಿದ್ರೂ ಇವರು ಮಾರಿ ಆಗ್ತಾರೆ.

ನಂಬರ್ ಏನಂತ ಗೊತ್ತಾಗಿಲ್ವಾ? "ಸಾರಿ" ಜೊತೆಗೆ ಶಾಪಿಂಗ್ ಡಿಸ್ಕೌಂಟ್ ಕೂಪನ್ ಕೋಡ್ ಕೂಡ ಬೋನಸ್ ಕೊಟ್ಟಿದ್ದಾರೆ. ಹಾ.....! ಈಗ ಗೊತ್ತಾಯ್ತು ನೋಡಿ "ಸಾರಿ" ಅಂದ್ರೆ ಲೇಡಿಸ್ ಗೆ ಅಲ್ವಾ ಅದಿಕ್ಕೆ ಸ್ತ್ರೀಲಿಂಗ ಶಬ್ಧ ಉಪಯೋಗಿಸಿದ್ದು. ಯಾವ್ ಅಂಗಡಿ ಅನ್ನೋದು ಗಾಡಿಯವರತ್ರ ಕೇಳ್ಬೇಕಪ್ಪ. ಹಾಗಂತ ಆತುರ ಪಡಬೇಡಿ. ಸಾರಿ ಕಣೇ ಪಕ್ಕ ಮೂರು ನಾಮ ಕೂಡ ಇದೆ ಅದು ಕೂಡ ಉಲ್ಟಾ. ಆತರ ಏನಾರ ಆದ್ರೆ ನಾನು ಜವಾಬ್ದಾರನಲ್ಲ ಅನ್ನೋ "ಡಿಸ್-ಕ್ಲೇಮರ್" ಹಾಕಲು ಇಲ್ಲಿ ಬಯಸುತ್ತೇನೆ.

ಸಾರಿ ಕಣ್ರೀ ಡ್ರೈವರ್ ಸಾಹೇಬರೆ! ನೀವು ಕಾಣೆಯಾಗಿದ್ದಾಗ ಒಂದು ಫೋಟೋ ಹೊಡ್ದೇ ಬಿಟ್ಟೆ ಇಲ್ಲೇ ನಮ್ ಮನೆ ಪಕ್ಕ. ಬಹುಶ: ನಿಮ್ ಮ್ಯಾಟರ್ ಬೇರೆನೇ ಇರಬಹುದು ಆದರೂ ಇಂಡಿಯನ್ ಮೀಡಿಯಾತರ ತುಂಬಾ ತಿರುಚಿ ಬರೆದುದ್ದಕ್ಕೆ ಕೂಡಾ ಸಾರಿ ಕಣ್ರೀ.

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

No comments:

Post a Comment

Printfriendly

Related Posts Plugin for WordPress, Blogger...