ಸಂತೆಕಟ್ಟೆ ಸಂತೆ
ಯಾರಿಗಿದೆ ಚಿಂತೆ
ಮುಗಿಯಕ್ಕೆ ಇನ್ನೂ ಒಂದು ವರ್ಷ ಬೇಕಂತೆ 🤦
Underpass ಕಾಮಗಾರಿ
ವಾಹನ ಸವಾರರ ಸಮಯ ದುಬಾರಿ
ಮಳೆಗಾಲದಲ್ಲಿ ಕೆಲಸ ನಡೆಯುವುದು ಕಷ್ಟ
ಜನರಿಗಿದೆ ಬಹುದೊಡ್ಡ ಸಂಕಷ್ಟ
ಸಂತೆ ಎಂದರೆ ಚೆಲ್ಲಾಪಿಲ್ಲಿಯಾಗಿ ಹರಡಿದ ಸಾಮಾನುಗಳು. ತುಳುನಾಡಿನಲ್ಲಿ ಹೆಚ್ಚು ಪ್ರಚಲಿತವಾಗಿದೆ. ಹಾಗೆಯೇ ಇಲ್ಲಿ ಸಂತೆಕಟ್ಟೆ ಯಲ್ಲಿ ವಾಹನದ ಸಂತೆಯೆ ಏರ್ಪಾಟು ಆಗಿದೆ. ಅದರ ಜೊತೆಗೆ ವೇಗದೂತ ಬಸ್ಸುಗಳ ಕಿರಿಕಿರಿ
ತಡವಾದರೂ ಇಲ್ಲಿ ಅಂಡರ್ಪಾಸ್ ನಿರ್ಮಿಸುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಬದಲಿ ವ್ಯವಸ್ಥೆ ಇಲ್ಲದೆ ಹೀಗೆ ಸವಾರರಿಗೆ ಕಾಟ ಕೊಡುವುದು ಎಷ್ಟು ಸರಿ. ಸುಂಕ ಯಾಕೆ ಕಟ್ಟುವುದು.
ಸಂತೆಕಟ್ಟೆಯಲ್ಲಿ ವಾಹನ ಸಂತೆ ಮಧ್ಯೆ ನುಸುಳಿಕೊಂಡು ದಾಟಲು ಸುಮಾರು ೨೫ ನಿಮಿಷ ತಗುಲಿತು. ಸ್ವಲ್ಪ ಸಮಯದಲ್ಲಿ ಸಾಸ್ತಾನ ಸುಂಕ ವಸೂಲಿ ಕೇಂದ್ರವೂ ಸಿಕ್ಕಿತು. ಮೊದಲೇ ಸಮಯ ವ್ಯರ್ಥವಾಗಿತ್ತು ಜೊತೆಗೆ ಸುಂಕದ ಪೆಟ್ಟು. ಗೇಟನ್ನು ಭೇಧಿಸಿಕೊಂಡು ಹೋಗುವಷ್ಟು ಸಿಟ್ಟು ಬರುತ್ತಿತ್ತು. ಕರಾವಳಿಯಲ್ಲಿ ಯಾವೊಂದು ಕೆಲಸಗಳು ಸರಿಯಾಗಿ ಆಗುವುದಿಲ್ಲ. ಜನಪ್ರತಿನಿಧಿಗಳು ನೊಣ ಹೊಡೆಯುತ್ತಾರೋ ಎಂಬಂತೆ ಭಾಸವಾಗುತ್ತದೆ.
No comments:
Post a Comment