ಹಳ್ಳಿ ಹೋಟೆಲ್ ನೋಡಿದ್ದೀರಾ? ಇದು ಕರಾವಳಿಯ ಟಿಪಿಕಲ್ ಹಳ್ಳಿ ಹೋಟೆಲ್. ಉಪಾಹಾರ ಗೃಹ ಎಂದು ಬಹಳಷ್ಟು ಜನ ಬರೆದಿರುತ್ತಾರೆ. ಮೊದಲು ಚಿತ್ರ ಕಾಣಿರಿ!
ಅರೆರೆ ಹಳ್ಳಿ ಹೋಟೆಲ್ ಬಗ್ಗೆ ಅಷ್ಟೊಂದು ಅಸಡ್ಡೆ ಬೇಡ. ಚೆನ್ನಾಗಿರುತ್ತೆ ಮಾರ್ರೆ! ನಾನು ಕೂಡಾ ಮಂಗಳೂರು ಹತ್ತಿರದ ಗುರುಪುರ ಎಂಬ ಹಳ್ಳಿಯಲ್ಲಿ ಇಂತದೆ ಹೋಟೆಲ್ ಅಲ್ಲಿ ತಿಂದಿದ್ದಿನಿ. ಬಹಳಷ್ಟು ರುಚಿ ಹಾಗೂ ಶುಚಿಯಾಗಿಯೇ ಇರುತ್ತದೆ. ಹೆಚ್ಚಾಗಿ ಇಂತಹ ಹೋಟೆಲ್-ಗಳು ಮನೆಯಲ್ಲಿ ಇರುತ್ತವೆ. ಹಾಗಾಗಿ ದರ ಕೂಡಾ ಕಡಿಮೆಯೇ! ಕುರ್ಚಿಗಳು ಇರುವುದಿಲ್ಲ ಬದಲಾಗಿ ಒಟ್ಟಾಗಿ ಕುಳಿತುಕೊಂಡು ಮಾತನಾಡಬಹುದಾಗ ಬೆಂಚ್-ಗಳು ಇರುತ್ತವೆ. ಹಾಗೆ ಟೇಬಲ್-ಗಳು ಹಳ್ಳಿ ಶಾಲೆ ಅಂತೆ ಇರುತ್ತದೆ. ಎಲ್ಲವೂ ಮರದಿಂದ ತಯಾರಿಸಿರುತ್ತಾರೆ. ಕರಾವಳಿಯಲ್ಲಿ ಇಂತಹ ಹೋಟೆಲ್-ಗಳು ಬನ್ಸ್, ಗೋಳಿಬಜೆ ಮತ್ತು ಇಡ್ಲಿಯನ್ನು ಬಹಳಷ್ಟು ರುಚಿಯಾಗಿ ತಯಾರಿಸುತ್ತಾರೆ. ಅವಕಾಶ ಸಿಕ್ಕರೆ ಇಂತದೆ ಹೋಟೆಲ್ ಒಳಹೊಕ್ಕಿ ಬನ್ನಿ!
No comments:
Post a Comment