Sunday, July 14, 2019

ಬ್ಯಾಕೆಂಡ್ - ೨೨

keep distance, don't be romantic
catch me if you can

" ಅಂತರವಿರಲಿ, ಚಕ್ಕಂದ ಬೇಡ
ಹಿಡಿ ನೋಡೋಣ ನನ್ನ"



ಕರಾವಳಿಯಲ್ಲಿ ಇನ್ನಿಲ್ಲದ ಸೆಖೆ. ಮಂಗಳೂರಿನ ನಂತೂರು ಜಂಕ್ಷನ್ ನಲ್ಲಿ ನಿಂತಾಗ ಅಬ್ಬಬ್ಬಾ ಕಾರಿನ ಏಸಿಗೆ ಸವಾಲೊಡ್ಡುವ ಬೆವರಿನ ಸೆಖೆ. ಏಸಿಯ ಉಷ್ಣಾಂಶ 20ಕ್ಕೆ ಇಳಿಸಿದರೂ ಮೈಯೆಲ್ಲಾ ಅಂಟು. ಸಾಲದೆಂಬಂತೆ ಈ ಬಾರಿಯ ಪೂರ್ವ ಮುಂಗಾರು ಕೂಡಾ ನೀರಸ ಪ್ರದರ್ಶನ ನೀಡಿದೆ. ಆಕಾಶದಲ್ಲೆಲ್ಲ ಮೋಡ ಅವರಿಸಿದರೂ ಮಳೆ ಸುರಿಸಲು ಜಿಪುಣತನ ಅವುಗಳಿಗೆ. ಅಥವಾ ಮರ ಕಡಿಯುವ ಮನುಷ್ಯರಿಗೆ ಪಾಠ ಕಲಿಸುತ್ತಿರಬಹುದೇ!

ಇರಲಿ ಹಾಗೆ ನಿಂತಿರುವಾಗ ರಿಕ್ಷಾದ ಬ್ಯಾಕೆಂಡ್ ಬರಹ ಕಣ್ಣಿಗೆ ಕುಟ್ಟಿತು. ಸೆಖೆಯಾಗುತ್ತೆ ಅಂತಾ ಸಿಟಿಯಿಂದ ಆದಷ್ಟು ಬೇಗ ಎಸ್ಕೇಪ್ ಅವಸರದಲ್ಲಿ ಗಾಡಿಯನ್ನು ಬೇರೆ ಗಾಡಿಯೊಂದಿಗೆ ಅಪ್ಪುಗೆಗೆ ಅವಕಾಶ ಕೊಡಬೇಡಿ ಅಂದಿರಬಹುದು. ಅಷ್ಟಕ್ಕೂ ರಿಕ್ಷಾ ಜೊತೆ ರೋಮಾನ್ಸ್ ಮಾಡಿ ನೋಡೋಣ. ಸೆಖೆ ಜೊತೆ ಅಂದು ಸಿಟ್ಟು ಕೂಡಾ ನೆತ್ತಿಗೇರಬಹುದು. ಅದು ಬೇರೆ ಇವರು ದ್ವಂದ ಇರುವ ಮನುಷ್ಯ ಅನ್ಸುತ್ತೆ. ಒಂದು ಕಡೆ ಹತ್ರ ಬರ್ಬೇಡ ಇನ್ನೊಂದೆಡೆ ಹಿಡಿ ನೋಡೋಣ ಅನ್ನೋದು ಬೇರೆ. ಸುಮ್ಮನೆ ಬ್ಯಾಕೆಂಡ್ ನೋಡಿ ಜಾರಿಕೊಳ್ಳೋದು ಒಳ್ಳೇದು

ಆದರೂ ಒಂದು ಕೈ ನೋಡಿಬಿಡಿ ಅಂತಾ ಕೆಳಗಡೆ ಬರೆದಿದ್ದಾರೆ. ಬೇಕಾದರೆ ಹಿಡಿಯಿರಿ ಆದರೆ ಅಪ್ಪುಗೆ ಮಾತ್ರ ಬೇಡಾ ಒಕೆನಾ. ಆದ್ರೂ ಆಟೋದವರ ಜೊತೆ ಆಟ ಬೇಡಪ್ಪ. ಸುಮ್ಮನೆ ಬದಿಯಿಂದ ಹೋಗಿ ನಿಮ್ಮ ದಾರಿ ಹಿಡಿಯಿರಿ.

1 comment:

Printfriendly

Related Posts Plugin for WordPress, Blogger...