ಒಂತರಾ ಕಂಪಸ್ ಬ್ಯಾಕೆಂಡ್ ಅಂತಲೂ ಕರಿಬಹುದು. ಇಲ್ಲಿ ಬರಹ ಇಲ್ಲ ಕೇವಲ ದಿಕ್ಕುಗಳ ಚಿತ್ತಾರ ಮಾತ್ರ ಇದೆ. ಇದರಲ್ಲಿರುವ ವಿಶೇಷತೆಗಾಗಿ ಪೂರ್ತಿ ಬರಹ ಓದಿ ಪುನೀತರಾಗಿರಿ :-).
ನಮ್ಮ ಮನೆ ಪಕ್ಕ ವಾಣಿಜ್ಯ ಬಿಲ್ಡಿಂಗ್ ಶುರು ಆಗಿ ಸುಮಾರು ೩ ವರ್ಷ ಆಗಿರಬೇಕು. ಇನ್ನೂ ನಡಿತಾನೆ ಇದೆ. ಇನ್ನೇನು ಕೊನೆ ಹಂತಕ್ಕೆ ತಲುಪಿದೆ! ಅರೆರೆ ಬಿಲ್ಡರ್-ಗಳು ಅಪಾರ್ಟಮೆಂಟನ್ನು ೧ ವರ್ಷದೊಳಗೆ ಮುಗಿಸ್ತಾರೆ ಇವರದ್ದೇನೂ ಇನ್ನು ನಡಿತಾನೆ ಇದೆ? ಹಹ್ಹಹ್ಹಾ! ಅಲ್ಲೇ ಇರೋದು ಮಜಾ. ಈ ವಾಣಿಜ್ಯ ಕಟ್ಟಡ ಸ್ವಂತದ್ದು. ಸಧೃಡವಾಗಿರಬೇಕಲ್ಲವೇ ಅದಕ್ಕೆ ಸಮಯ ತಗೊಂಡು ಕಟ್ಟುತ್ತಾರೆ. ಅಪಾರ್ಟಮೆಂಟ್ ಕಟ್ಟುವವರಿಗೇನೂ, ಅದು ಮಾರಾಟದ ವಸ್ತುವಲ್ಲವೇ. ದುಡ್ಡು ಬಂದರಾಯಿತು ಕ್ವಾಲಿಟಿ ಯಾರಿಗೆ ಬೇಕು. ಅದಕ್ಕೆ ನೋಡಿ ನಮ್ಮ ಅಪಾರ್ಟಮೆಂಟಿಗೂ ಇನ್ನು ೪ ವರ್ಷ ಆಯಸ್ಸಾದರೂ ಆಗಲೆ ಲೀಕಿಂಗ್, ಕೊಲಾಪ್ಸಿಂಗೂ ಎಲ್ಲಾ ಶುರು ಆಗಿದೆ ನೋಡಿ!
ಇರಲಿ ಬಿಡಿ ವಿಷಯ ಅದಲ್ಲ ಈ ವಾಣಿಜ್ಯ ಕಟ್ಟಡದಲ್ಲಿ ರಚಿಸಿರುವ ಕಂಪಸ್ ಬಗ್ಗೆ ಮಾತನಾಡೋಣ. ಇದು ಒಂತರಾ ಕಂಪಸ್ ಫ್ರಂಟ್-ಎಂಡ್ ಅಂತಾನೂ ಕರಿಬಹುದು. ಅರೆರೆ ಕಂಪಸ್ ತಿರುಗತ್ತದೆ, ಇದೇನಿದು ಚಿತ್ರ ಮಾತ್ರ ಇದೆ ಅಂತ ಅಂದುಕೊಂಡ್ರೆ, ಕಂಪಸ್ ಚಲಿಸುವಾಗ ಮಾತ್ರ ತಿರುಗುವುದು. ಬಿಲ್ಡಿಂಗ್ ಏನು ಚಲಿಸುವುದೇ ಕಂಪಸ್ ತಿರುಗಲಿಕ್ಕೆ! ಬಿಲ್ಡಿಂಗ್ ತಿರುಗಿದರೆ ಅದರ ಮಾಲಿಕರು ದಿವಾಳಿ ಏಳಬೇಕಷ್ಟೇ. ಇದು ಒಂತರಾ ತಿರುಗದ ಸ್ಟಾಟಿಕ್ ಕಂಪಸ್ (static-compass) ಅಂದುಕೊಳ್ಳಿ! ಸುಮ್ಮನೆ ಟಾಪಿಕ್ ಡಿವಿಯೇಟ್ ಮಾಡಬೇಡ್ರಿ ವಿಷಯಕ್ಕೆ ಬರೋಣ. ಇದ್ರಲ್ಲೇನಿದೆ ಸೋಜಿಗ ಅಂತಾ ಕೇಳಿದ್ರೆ ನನಗೂ ಮೊದಮೊದಲು ಹಾಗೆ ಅನ್ನಿಸ್ತಾ ಇತ್ತು. ಏನೋ ಚಿತ್ತಾರ ಇರಬಹುದು ಇರಬಹುದು ಅಂದುಕೊಂಡಿದ್ದೆ. ಒಂದೆರಡು ದಿನದ ಬಳಿಕ ನನ್ನ ತಲೆಯೂ ಸ್ಟಾಟಿಕ್ ಇಂದ ಡೈನಾಮಿಕ್ ರೂಪ ಪಡೆಯಿತು ಅನ್ನಿ. ಹೌದಲ್ವಾ, ಇಲ್ಲಿ ಬಾಡಿಗೆ ಪಡೆಯುವವರಿಗೆ ಇದು ವಾಸ್ತು ಕಂಪ್ಲಯಂಟ್ ಅಂತಾ ಹೇಳುವ ಅಗತ್ಯವೇ ಇಲ್ಲ!!! ಎಲ್ಲವೂ ಈಸ್ಟ್ ಫೇಸಿಂಗ್ ಇದೆ. ಅದಕ್ಕೇಂತನೆ ದಿಕ್ಕುಗಳನ್ನ ಇವರು ರಚಿಸಿದ್ದಿರಬೇಕು. ಕೇವಲ ನಾಲ್ಕು ದಿಕ್ಕುಗಳಲ್ಲ ಬರೋಬ್ಬರಿ ಅಷ್ಟದಿಕ್ಕುಗಳನ್ನೇ ತೋರಿಸಿದ್ದಾರೆ ನೋಡಿ. ಬಹು ಚಾಲಾಕಿ ಮಾರಾಯ್ರೆ ಇವರು :-). ಬೆಂಗಳೂರಿನ ಧಾವಂತದಲ್ಲಿ (busy city life) ಜನರಿಗೆ ಸೂರ್ಯ ನೋಡೋದು ಕಷ್ಟ ಇನ್ನು ಸೂರ್ಯ ನೋಡಿ ದಿಕ್ಕು ಗುರುತಿಸುವಷ್ಟು ಪುರುಸೊತ್ತು ಯಾರಿಗೂ ಇಲ್ಲ. ಜ್ಯೋತಿಷಿಗಳನ್ನು ಕರೆಸಿಕೊಳ್ಳುತ್ತಾರೆ. ಅದನ್ನೇಲ್ಲಾ ತಪ್ಪಿಸಲು ನೋಡಿ ಇವರೇ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಅದು ಕೂಡಾ ಆಂಗ್ಲ ಭಾಷೆಯಲ್ಲಿ ಏಕೆಂದ್ರೆ ಇದು ಬಹುಭಾಷಾ ನಗರಿ ಅಲ್ವೇ ಎಲ್ಲರಿಗೂ ಕನ್ನಡ ಓದುವುದಕ್ಕೆ ಬರಲ್ಲ (ಇದರಲ್ಲಿ ಕನ್ನಡದವರೂ ಸೇರಿದ್ದಾರೆ).
ಒಟ್ನಲ್ಲಿ ಒಳ್ಳೇ ತಲೆ ಓಡ್ಸಿದ್ದಾರೆ ಅಂತಾ ಗ್ರಾಮೀಣ ಭಾಷೆಯಲ್ಲಿ ಶಹಭಾಸ್ ಎನ್ನಬಹುದು. ಇಂತಹ ಐಡಿಯಾವನ್ನು ಪೇಟೆಂಟ್ ಕೂಡಾ ಮಾಡಬಹುದೇನೋ? ಸ್ವಲ್ಪ ಜಾಸ್ತಿ ಆಯ್ತು ಅಲ್ವಾ. ಇರಲಿ ಮತ್ತೆ ಸಿಗೋಣ. ಅಲ್ಲಿ ತನಕ ಬಾಯ್ :-)

Thank You
ReplyDelete