" Beware of your belongings and CCTV cameras "
ಕನ್ನಡದಲ್ಲಿ
" ನಿಮ್ಮ ವಸ್ತುಗಳು ಮತ್ತು ಸಿಸಿಟಿವಿ ಕ್ಯಾಮರಾ ಬಗ್ಗೆ ಎಚ್ಚರದಿಂದ ಇರಿ "
ಹಹ್ಹ! ಎಂತಹಾ ಬೊಂಬಾಟ್ ಸೂಚನಾ ಫಲಕ. ಚನ್ನರಾಯಪಟ್ಟಣ ಸನಿಹದ ಉದಯಪುರದ ಕಾಮತ್ ಉಪಚಾರದಲ್ಲಿ ಕಂಡುಬಂದ ಫಲಕ. ನಿಮ್ಮ ವಸ್ತು ಮಾತ್ರ ಅಲ್ಲ ನೀವು ಕೂಡಾ ಕದಿಯುವವರಾದರೆ ಕ್ಯಾಮರಾ ಬಗ್ಗೆ ಮೊದಲೇ ಗಮನಿಸಿ. ಅಂದರೆ ನೀವು ಕಳ್ಳರಾದರೆ ಎರಡು ಬಾರಿ ಯೋಚಿಸಿ ಕದಿಯುವ ಮುನ್ನ ಎಂದು. ಏಕೆಂದರೆ ಕದ್ದರೂ ಉಪಯೋಗ ಇಲ್ಲ. ಹೆಚ್ಚೇನು ಪ್ರಯತ್ನವಿಲ್ಲದೆ ಸಿಕ್ಕಿ ಹಾಕಿಕೊಳ್ಳುತ್ತೀರಾ ಅಂತಾ ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಸುಮ್ಮನೆ ಹೋಟೆಲ್ ಗೆ ಬಂದು ತಿಂದು ಬಿಲ್ ಪಾವತಿ ಮಾಡಿ ಹೋಗಿ ಅಷ್ಟೇ! ನಿಮ್ಮ ಕೆಲಸವೂ ಇಲ್ಲಿ ಅಷ್ಟೇ, ಜಾಸ್ತಿ ಚಾಲಾಕಿತನ ತೋರಿದರೆ ಪೋಲಿಸರ ಬಂಧಿಯಾಗುವುದು ದೂರವೇನಿಲ್ಲ! ಸುಮ್ಮನೆ ಹಗಲಿನಲ್ಲಿ ರೆಡ್-ಹ್ಯಾಂಡೆಡ್ ಸಿಕ್ಕಿಬಿದ್ದು ಮರ್ಯಾದೆ ಕಳೆದುಕೊಳ್ಳಬೇಡಿ ಎನ್ನುವ ಎಚ್ಚರ ಕಳ್ಳರಿಗೆ. ಒಟ್ಟಾರೆ ಒಂದು ಯುನೀಕ್ ಎಚ್ಚರಿಕೆ ಅಂತಾ ಹೇಳಬಹುದು. ಒಂದೇ ಏಟಿನಲ್ಲಿ ಅಲ್ಲಲ್ಲಾ ಒಂದೇ ಸಾಲಿನಲ್ಲಿ ಕದಿಯುವವರಿಗೂ ಹಾಗೂ ಕದಿಸಿಕೊಳ್ಳುವವರಿಗೂ ಎಚ್ಚರಿಸಿದ್ದಾರೆ.
ಆದರೂ ಒಂದು ಡೌಟ್, ಕ್ಯಾಮರಾ ಇದ್ದರೂ ಕದಿಸಿಕೊಳ್ಳುವವರಿಗೆ ಎಚ್ಚರಿಸಿವುದೂ ಎಷ್ಟು ಪ್ರಸ್ತುತ ಇಲ್ಲಿ. ಅದಕ್ಕೆ ಹೇಳೋದು ಟೆಕ್ನಾಲಜಿ ಯಾವಾಗ ಕೈಕೊಡುತ್ತೋ ಯಾರಿಗೆ ಗೊತ್ತು. ಜೊತೆಗೆ ಇಲ್ಲಿ ಬಸ್ಸುಗಳು ಹೆಚ್ಚಾಗಿ ನಿಲ್ಲಿಸುತ್ತ್ತಾರೆ. ಒಮ್ಮೆಲೇ ಜನ ಬಂದಾಗ ಗುಂಪಿನಲ್ಲಿ ಕ್ಯಾಮರಾ ಕಣ್ಣಿಗೂ ಕೆಲವೊಮ್ಮೆ ಕಾಣಸಿಗಲ್ಲ. ಹಾಗಾದರೆ ಕದಿಯುವವರಿಗೆ ಆವಾಗ ಸುಗ್ಗಿ. ಯಾರಿಗೊತ್ತು ಗ್ರಹಚಾರ ಯಾವಾಗ ಒಕ್ಕರಿಸುವುದೆಂದು. ಎಷ್ಟೇ ಜನಜಂಗುಳಿ ಇದ್ದರೂ ಕೆಲವೊಮ್ಮೆ ಸುಲಭವಾಗಿ ಕ್ಯಾಮರಾ ಕಣ್ಣಿಗೆ ಸಿಗುವುದು ಗ್ಯಾರಂಟಿ. ಒಟ್ಟಿನಲ್ಲಿ ಇಬ್ಬರಿಗೂ ರಿಸ್ಕ್ ಬೇಡ ಅಂತಾ ಒಟ್ಟಿಗೆ ಮುನ್ನಚ್ಚರಿಕೆ ಫಲಕವನ್ನು ಸಿಕ್ಕಿಸಿರಬಹುದು.
ಮತ್ತೇನೂ ಇಲ್ಲ. ೧೩೦ ರುಪಾಯಿ ಕೊಟ್ಟು ಪ್ಲೇಟ್ ಮೀಲ್ಸ್ ತಿಂದು ಬಸ್ಸಿನ ಕಡೆಗೆ ನಡೆದೆ. ಜನ ಅಷ್ಟೇನೂ ಇರಲಿಲ್ಲ ಜೊತೆಗೆ ನನ್ನದೇನೂ ವಸ್ತುವು ಕಳುವಾಗಿಲ್ಲ.
No comments:
Post a Comment