ನಿಮ್ಮಜ್ಜಿ. ಮಾಡೋ ಕೆಲ್ಸ ಇಲ್ವಾ ನಿಂಗೆ! ಯಾವಾಗ ನೋಡಿದ್ರು ನಿಂದು ಕಪ್ಪು ಪೆಟ್ಟಿಗೆ ಇಟ್ಕೊಂಡು ಇಲ್ಲೇ ವಕ್ಕರಿಸ್ತಿಯಲ್ಲೋ! ಹೋಗಿ ಮೊಬೈಲ್ ನೋಡು ಮನೇಲಿ. ಸುಮ್ನೆ ನೆಮ್ಮದಿಯಾಗಿ ತಿನ್ನಕ್ಕೂ ಬಿಡಲ್ಲ.
ಆಕಡೆ ಹೋದ್ರೆ ಆಕಡೆ, ಈಕಡೆ ಹೋದ್ರೆ ಈಕಡೆ. ಅದೇನು ಮಾಡ್ತಿಯೋ ಫೋಟೋ ಹೊಡಕೊಂಡು.
ಮಗನೆ ತುಂಬಾ ಹತ್ರ ಬರ್ಬೇಡ ನೋಡು. ಚೆನ್ನಾಗಿರಲ್ಲ.
ತಗೋಳಪ್ಪಾ ಹೇಳಿದ್ರು ಹತ್ರ ಬರ್ತಾನೆ. ಸರಿಯಾಗಿ ಪಾಠ ಕಲಿಸ್ತಿನಿ ತಾಳು.
ಏನ್ ಮಾಡ್ತೀನಾ! ನೋಡ್ತಾ ಇರು! ತಗೋ ಮಗನೆ. ನಿಂಗೆ ಫೋಟೋ ಹೊಡಿಯೋ ಚಪಲ ಆಲ್ವಾ. ನಾನೇ ಹಾರಿ ಹೋಗ್ತಿನಿ ನಿಮಗೆ ಸಿಗದ ಹಾಗೆ. ಈಗ ಮನೆಗೆ ನಡಿ.
ಮತ್ತಷ್ಟು ಹಕ್ಕಿ ಸರಣಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : NKBirdSeries









No comments:
Post a Comment