ಹಳ್ಳೀಲಿ ಸೈಕಲ್ ತುಳಿಯೋ ಮಜಾನೇ ಬೇರೆ. ಕಣ್ತುಂಬಾ ಹಕ್ಕಿಗಳು, ಸುಂದರ ನಿಸರ್ಗ, ಇನ್ನೇನು ಬೇಕು ಹೇಳಿ! ಸಕತ್ ಸ್ಟ್ರೆಸ್ ಬಸ್ಟರ್ ನೋಡಿ ಇಲ್ಲಿ ಇರೋದು. ತಲೆ ಕೆಟ್ಟು ಹೋಗೋ ಕೆಲಸದ ಮಧ್ಯೆ ಇಂತಹ ಆಹ್ಲಾದಕರ ಚಿತ್ರಣಗಳು ಎಷ್ಟು ಮುದ ನೀಡುತ್ತೆ ಅಂತಾ ತಿಳಿದವರಿಗೆ ಗೊತ್ತು!
ಸರಿ. ಯಾವಾಗಲೂ ಸೈಕಲ್ ತುಳಿಯುವ ದಾರಿಯಲ್ಲಿ ತಿರುಗುತ್ತಿದ್ದಾಗ, ಈ ಸುಂದರ ನವಿಲು ಖಾಲಿ ಗದ್ದೆ ಮೇಲೆ ನಿಂತಿತ್ತು. ಕ್ಯಾಮರಾ ಕಣ್ಣಲ್ಲಿ ಕ್ಲಿಕ್ಕಿಸುತ್ತಿರುವಾಗ ನನ್ನನ್ನೇ ದುರುಗುಟ್ಟಿ ನೋಡುತ್ತಿತ್ತು. ಇದರ ಕಾಲ್ಪನಿಕ ಮಾತುಗಳು ಇಲ್ಲಿದೆ. ಸುಮ್ಮನ್ನೆ ತಮಾಷೆಗೆ ನೋಡಿ. ವಿಶ್ಲೇಷಿಸಬೇಡಿ ಮತ್ತು ಪ್ರತಿಕ್ರಿಯಿಯಿಂದ ಶಿಕ್ಷಿಸಬೇಡಿ :-).
ಏನಪ್ಪಾ, ಬಂದ್ಯಾ ಇವತ್ತು ಕೂಡಾ! ಏನು ನಾನು ತರಕಾರಿ ಗಿಡ ಹಾಳು ಮಾಡೋದನ್ನ ಫೋಟೋ ಹೊಡಿತಾ ಇದ್ದೀಯಾ? ಇರಲಿ ಎಲ್ಲರಿಗು ತೋರ್ಸಿ ನಮ್ಮ ಸಂತತಿಗಳ ಮೇಲೆ ಅಪಪ್ರಚಾರ ಮಾಡ್ತಿಯಾ! ಅದೇ ಕೆಲಸನಾ ನಿಮ್ಮದು? ನೋಡಣ್ಣ. ನಮ್ಮ ಜಾಗ ಎಲ್ಲಾ ನೀವು ನಾಶ ಮಾಡಿದ್ದೀರಾ ಅದಿಕ್ಕೆ ತಿನ್ನಕ್ಕೆ ಉಣ್ಣಕ್ಕೆ ನಾವು ಏನು ಮಾಡೋದು. ಅದಿಕ್ಕೆ ನಿಮ್ ಬೆಳೆಗಳನ್ನ ಸ್ವಲ್ಪ ತಿಂತೀವಿ. ನಾವು ಕೂಡಾ ದೇವ್ರ ಮಕ್ಕಳೇ ಗೋತ್ತಾ :-(. ನಂಗೂ ಬದುಕೋ ಹಕ್ಕಿದೆ. ನೀವು ನಮ್ಮ ಜಾಗ ಹಾಳು ಮಾಡಿದ್ರಿಂದ ನಮ್ಮ ಬದುಕು ಕಷ್ಟ ಆಗಿದೆ. ಈಗ ನಿಮ್ಮ ಜಾಗದಲ್ಲಿ ತಿನ್ನಬೇಕು ಏನ್ ಮಾಡೋದು ಹೇಳಿ. ಒಂದೋ ನಮ್ಮ ಅರಣ್ಯ ಮರು ಸೃಷ್ಟಿ ಮಾಡಿ ಇಲ್ಲಾ ನೆಮ್ಮದಿಯಾಗಿ ಶಾಪ ಹಾಕದೆ ಬದುಕಕ್ಕೆ ಬಿಡಿ ಅಷ್ಟೇ ಸಾಕು.
No comments:
Post a Comment