Thursday, May 19, 2016

ಬ್ಯಾಕೆಂಡ್-೧೭

ಬಹು ದಿನಗಳ ಬಳಿಕ ಜನಗಳ ಒತ್ತಾಯದ ಮೇರೆಗೆ ನಿಮ್ಮ ನೆಚ್ಚಿನ ಬ್ಯಾಕೆಂಡ್ ಇಸ್ ಬ್ಯಾಕ್! [ಮೀಡಿಯಾದವರ ತರ ಸುಮ್ಮನೆ self-appraisal ಅಂದ್ರೂ ಪರ್ವಾಗಿಲ್ಲ :)]. ಅರೆರೆ TRPಗೂ ನಮ್ಗೂ ಸಂಬಧ ಇಲ್ಲ ಕಣ್ರೀ ಹಂಗೆ ಸುಮ್ನೆ ಮಸಾಲೆ ಸೇರ್ಸಿ ಬರಿಯೋಣಾ ಅಂತಾ. ಖಾರ ಜಾಸ್ತಿ ಆಗಿಲ್ಲಾ ತಾನೆ? ಮುಂದೆ ಓದಿ ತಣ್ಣಗಾಗುತ್ತೆ

[ಓ ಮಲ್ಲಿಗೆ | ನೀ ಎಲ್ಲಿಗೆ | ನಾ ಜಲ್ಲಿಗೆ]



ತುಂಬಾನೆ straight-forward ಜನ ಕಣ್ರಿ ಇವ್ರು. ಆಂಗ್ಲದಲ್ಲಿ ಅದೆನೋ blunt ಅಂತಾರಲ್ಲ ಹಾಗೆ. ಮಲ್ಲಿಗೆ ಅಂತ ಹೇಳಿ ಎಲ್ಲೋ ಮದುವೆ ಮನೆ ಕಡೆ ಹೋಗ್ತಾ ಇದಾರೆ ಅಂದುಕೊಂಡ್ರೆ, ನಿಜ ಸಂಗತಿನೂ ಮುಂದೆ ಬರ್ದಿದಾರೆ. ಅಂದ್ರೇನು? ಹಿಂದೆ ಗಾಡಿಯಲ್ಲಿ ಮಲ್ಲಿಗೆಯಂತವರು ಇದ್ರೆ ಅವ್ರ ಬಳಿ ಹೀಗೆ ಹೇಳ್ಕೋತಿದಾರೆ. ಇನ್ನೇನು ಮಲ್ಲಿಗೆ ಫ್ಲಾಟ್ ಆಗ್ಬೇಕು ಅನ್ನೋಷ್ಟರಲ್ಲಿ ಕ್ಲೈಮಾಕ್ಸ್ ಫುಲ್ ಚೇಂಜ್. ಇರೋದನ್ನ ಹೇಳೋಕ್ಕೆ ಹೊರಟಿದ್ದಾರೆ ಆದ್ರೆ ಡಿಫರೆಂಟ್ ಆಗಿ ಹೇಳಿದ್ದಾರೆ ಅಷ್ಟೆ.. ಸ್ವಲ್ಪ ಬ್ಲಂಟ್ ಮಾತಾಡೋರ ಹತ್ರಾನು ಜಾಗ್ರತೆಯಿಂದಿರಬೇಕು ಇಲ್ಲಾಂದ್ರೆ ಇವ್ರ ಜೊತೆ ನೀವು ಕೂಡ ಜಲ್ಲಿ ತುಂಬ್ಲಿಕ್ಕೆ ಹೋಗ್ಬೇಕಾಗ್ಬಹುದು ಹುಶಾರ್!! ಹಾಗೆಯೇ ಮಲ್ಲಿಗೆ ಮುಡ್ಕೊಂಡು ಮತ್ತು ಕೈಗೆ ಹಾಕೊಂಡು ಇದರ ಹಿಂದೆನೇ ಹೋದ್ರೆ ಶುಭ ಕಾರ್ಯಕ್ರಮದ ಬದಲು ಕಡೆಗೆ ಜಲ್ಲಿ ತುಂಬುವುದೇ ಗತಿ ಎನ್ನಲು ಮರೆಯಬೇಡಿ. ರೇಷ್ಮೆ ಬಟ್ಟೆಯಲ್ಲಿ ಜಲ್ಲಿ ತುಂಬುವ ಹೈ-ಟೆಕ್ ಕೆಲಸ ಗ್ಯಾರಂಟಿ ಜತೆಗೆ ಜಲ್ಲಿ ಪುಡಿಯ ಅಮೃತಮಳೆ ಕೂಡ ಉಚಿತ :).

ಹೀಗೆ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ನನ್ನವಳು ತೆಗೆದದ್ದು. ಫೋಟೋ ತೆಗ್ದಿ ತಕ್ಷಣ ಓವರ್-ಟೇಕ್ ಮಾಡಿಕೊಂಡು ಹೋಗಿರಬೇಕು. ಯಾಕಂದ್ರೆ ಸಧ್ಯಕ್ಕೆ ಅವಳ ರೇಷ್ಮೆ ಸೀರೆ ಶುಭ್ರವಾಗಿಯೆ ಇದೆ.

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

No comments:

Post a Comment

Printfriendly

Related Posts Plugin for WordPress, Blogger...