"ಪ್ರೀತಿಯ ಪಾರಿವಾಳ"
ನಮ್ಮ ಪಾರಿವಾಳದ ಮೇಲೆ ಅಷ್ಟೊಂದು ಪ್ರೀತಿ ಯಾಕೆ ಅಂತ. ಅಯ್ಯೋ ಅಷ್ಟು ಗೊತ್ತಾಯ್ಲಿಕ್ಕಿಲ್ವಾ. ಇವ್ರು ಬಾಡಿಗೆ ಕಾರಿನವರು. ಪಾರಿವಾಳ ಹಿಂದಿನ ಕಾಲದಲ್ಲಿ ಮೆಸೆಂಜರ್ ಆಗಿದ್ದವು. ಹಾಗೆ ಕಸ್ಟಮರ್ ಕರೆಸೋ ಒಳ್ಳೆ ಮೆಸೇಜ್ ಬರಲಿ ಅಂತಾ ಅವರ ಆಶಯ. ಅದಕ್ಕೆ ತರಂಗಗಳ ಮೆಸೇಜ್ ಕೂಡ ಪಾರಿವಾಳಕ್ಕೆ ಹೋಲಿಸಿದ್ದಾರೆ. ಬಹುಶಃ ಮೊಬೈಲ್ ಇಲ್ಲದೇ ಇದ್ದಿದ್ರೆ, ಕಬೂತರ್ ಜಾ ಜಾ ಜಾ, ಕಸ್ಟಮರ್ ಕರ್ಕೊಂಡ್ ಬಾ ಬಾ ಬಾ ಅನ್ತಾ ಬರ್ಕೊಂಡಿರಬಹುದಿತ್ತು. ಇರಲಿ ಇದಕ್ಕೆ ಇನ್ನೊಂದು ಅರ್ಥ ಕೂಡ ಇದೆ. ಸಿಟಿಯಲ್ಲಿ ಪಾರಿವಾಳಗಳು ಸ್ವಲ್ಪ ಜಾಸ್ತಿನೇ. ನಗರದ ಗಲಾಟೆಯಲ್ಲಿ ಹೇಗೋ ಬದುಕುತ್ತವೆ. ಪಾರಿವಾಳಗಳು ವೈಮಾನಿಕ ಪ್ರಸಾದ ವಿತರಿಸೋದು ಸ್ವಲ್ಪ ಜಾಸ್ತಿನೇ! ಇಲ್ಲಿ ಸ್ವಲ್ಪ ಸಾಹೆಬ್ರು ಪಾರಿವಾಳಗಳನ್ನ ಇಂಪ್ರೆಸ್ ಮಾಡಿ ಪ್ರಸಾದ ವಿತರಣೆಯನ್ನು ನಿಲ್ಲಿಸಲಿಕ್ಕೆ ಹೀಗೆ ಬರೆದಿರಬಹುದು. ಪ್ರಸಾದ ವಿತರಣೆ ನಿರಂತರವಾದ್ರೆ ಗಾಡಿಯನ್ನ ಮತ್ತೆ ಮತ್ತೆ ತೊಳಿಯೋದು ಯಾರಪ್ಪಾ! ಒಟ್ಟಾರೆ, ಪ್ರಸಾದ ವಿತರಣೆ ಆದ್ರೆ ಗ್ರಾಹಕರು ಬರ್ಲಿಕ್ಕೆ ಹಿಂದೆ-ಮುಂದೆ ನೋಡೋದು ಗ್ಯಾರಂಟಿ ಅದಿಕ್ಕೆ ಹೀಗೆ ಬರೆದು ಪಾರಿವಾಳಗಳನ್ನು ಹಿಕ್ಕೆ ಹಾಕದಂತೆ ಒಲಿಸಲು ಸರ್ವಪ್ರಯತ್ನ ಮಾಡಿರಬಹುದು. ನಾಯಿಗಳದ್ದು ಪ್ರಾಬ್ಲಮ್ ಇದೆ ಬಟ್ ಅದು ಬಿಸಿಲಿಗೆ ಆವಿಯಾಗೋದ್ರಿಂದ ಅಷ್ಟೇನು ತೊಂದರೆ ಆಗಲ್ಲ.
ಬಿಸಿಲಿಗೆ ಕಾರು ಹೀಟ್ ಆಗಬಾರದು ಅಂತಾ ಎಲ್ಲೋ ಮರದ ಕೆಳಗೆ ನಿಲ್ಲಿಸಿದ್ರೆ ಇಂತಹ ಮೆಸೇಜ್ ಉಪಯೋಗವಾಗುತ್ತೆ. ಯಾಕಂದ್ರೆ ಪಾರಿವಾಳಗಳ ಬಿಡಾರ ಅಲ್ಲೇ ಮೇಲೆನೇ ಇರೋದು. ಅಯ್ಯಯ್ಯೋ ಏನಕ್ಕೆ ಸಿಟ್ಟಾಗ್ತೀರಾ!! ನಮಗೂ ಗೊತ್ತಿದೆ ಅವರ ಪ್ರಿಯಾಮಣಿಗೆ ಬರ್ದಿರ್ಬಹುದು ಅಂತಾ. ಸುಮ್ನೆ ತಮಾಷೆಗೆ ಹಿಕ್ಕೆ ಹಾಕಿರೋದು :).