Monday, March 15, 2021

ಗದ್ದೆಯ ಬೆಳ್ಳಕ್ಕಿ ಮಾತು

ಬೆಳ್ಳಕ್ಕಿಗಳ  ಮುಖ ಚಹರೆ ನನಗೆ ಬಹಳ ಮೋಜು ತರುತ್ತದೆ. ಅವುಗಳ ಮೇಲಿನ ಕಾಲ್ಪನಿಕ ಬರಹ ಬರೆಯಲು ಕೆಲವೊಮ್ಮೆ ಥಟ್ಟನೆ ಹೊಳೆಯುತ್ತದೆ. ದಿವಸ ಹಳ್ಳಿ ಮನೆಯಲ್ಲಿ ಗದ್ದೆ ಕಡೆ ಮುಖ ಮಾಡಿದಾಗ, ನನಗೆ ಮೊದಲು ಕಾಣಸಿಗುವುದು ಈ ಬೆಳ್ಳಕ್ಕಿಗಳು. ಹಸುವನ್ನು ಕಾಡಿಸುತ್ತಿರುತ್ತವೆ ಕೀಟಗಳನ್ನು ಹೆಕ್ಕಲು :-). ಅದರ ಬಗ್ಗೆಯೇ ಈ ಕಾಲ್ಪನಿಕ ಬರಹ. ಆನಂದಿಸಿ!

ನಿಮ್ಮಜ್ಜಿ. ಮಾಡೋ ಕೆಲ್ಸ ಇಲ್ವಾ ನಿಂಗೆ! ಯಾವಾಗ ನೋಡಿದ್ರು ನಿಂದು ಕಪ್ಪು ಪೆಟ್ಟಿಗೆ ಇಟ್ಕೊಂಡು ಇಲ್ಲೇ ವಕ್ಕರಿಸ್ತಿಯಲ್ಲೋ! ಹೋಗಿ ಮೊಬೈಲ್ ನೋಡು ಮನೇಲಿ. ಸುಮ್ನೆ ನೆಮ್ಮದಿಯಾಗಿ ತಿನ್ನಕ್ಕೂ ಬಿಡಲ್ಲ.

ಆಕಡೆ ಹೋದ್ರೆ ಆಕಡೆ, ಈಕಡೆ ಹೋದ್ರೆ ಈಕಡೆ. ಅದೇನು ಮಾಡ್ತಿಯೋ ಫೋಟೋ ಹೊಡಕೊಂಡು.





ಮಗನೆ ತುಂಬಾ ಹತ್ರ ಬರ್ಬೇಡ ನೋಡು. ಚೆನ್ನಾಗಿರಲ್ಲ. 


ಏಯ್. ಹೇಳಿದ್ರೆ ಗೊತಾಗಲ್ವಾ. ಪದೇ ಪದೇ ಹೇಳ್ಬೇಕಾ? ಹತ್ರ ಬರ್ಬೇಡಾ ಇಲ್ಲಂದ್ರೆ ಸುಮ್ನೆ ಇರಲ್ಲ ನೋಡು.

ತಗೋಳಪ್ಪಾ  ಹೇಳಿದ್ರು ಹತ್ರ ಬರ್ತಾನೆ. ಸರಿಯಾಗಿ ಪಾಠ ಕಲಿಸ್ತಿನಿ ತಾಳು. 


ಏನ್ ಮಾಡ್ತೀನಾ! ನೋಡ್ತಾ ಇರು! ತಗೋ ಮಗನೆ. ನಿಂಗೆ ಫೋಟೋ ಹೊಡಿಯೋ ಚಪಲ ಆಲ್ವಾ. ನಾನೇ ಹಾರಿ ಹೋಗ್ತಿನಿ ನಿಮಗೆ ಸಿಗದ ಹಾಗೆ. ಈಗ ಮನೆಗೆ ನಡಿ. 




ಮತ್ತಷ್ಟು ಹಕ್ಕಿ ಸರಣಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ :  NKBirdSeries

No comments:

Post a Comment

Printfriendly

Related Posts Plugin for WordPress, Blogger...